ಲೋಕದರ್ಶನ ವರದಿ
ಹಾವೇರಿ ಜಿಲ್ಲೆಯಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಹಾಗೂ ಡಿಡಿಆರ್‌ಸಿ ಕಾರ್ಯ ಶ್ಲಾಘನೀಯವಾಗಿವೆ : ಡಾ.ಗಣನಾಥ ಶೆಟ್ಟಿ
ಹಾವೇರಿ 21: ಹಾವೇರಿ ಜಿಲ್ಲೆಯಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಹಾಗೂ ಡಿಡಿಆರ್‌ಸಿ ಕಾರ್ಯ ಶ್ಲಾಘನೀಯವಾಗಿವೆ ಎಂದು ಉಡಪಿ ಜಿಲ್ಲೆಯ ರೆಡ್ ಕ್ರಾಸ್ ಸಂಸ್ಥೆ ಹಾಗೂ ಡಿಡಿಆರ್ ಸಿಯ ಗೌರವ ಕಾರ್ಯದರ್ಶಿ ಡಾ.ಗಣನಾಥ ಶೆಟ್ಟಿ ಎಕ್ಕಾರು ಪ್ರಶಂಸೆ ವ್ಯಕ್ತಪಡಿಸಿದರು. ಇಲ್ಲಿನ ಕಾಗಿಲೆನೆ ರೋಡಿನ ಜಿಲ್ಲಾಸ್ಪತ್ರೆ ಹಿಂಭಾಗದಲ್ಲಿರುವ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಹಾಗೂ ಡಿಡಿಆರ್‌ಸಿ ಕಚೇರಿಗೆ ಆಗಮಿಸಿ, ಜಿಲ್ಲಾ ಘಟಕದಿಂದ ಗೌರವ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ಸೇವಾ ಮನೋಭಾವ ಹೊಂದಿದವರಿಗೆ ಕೆಲಸ ಮಾಡಲು ಹಾಗೂ ವಿಕಲಚೇತನರಿಗೆ ಸಹಾಯ ಮಾಡಲು ರೆಡ್ ಕ್ರಾಸ್ ಸಂಸ್ಥೆಯಿಂದ ಮಾನವೀಯ ಕಾರ್ಯ ಮಾಡಲು ಅವಕಾಶವಿದೆ. ಯುತ್ ರೆಡ್ ಕ್ರಾಸ್ ಘಟಕಗಳನ್ನು ಹೆಚ್ಚು ಮಾಡುವುದರಿಂದ ವಿದ್ಯಾರ್ಥಿಗಳಲ್ಲಿ ಹಾಗೂ ಯುವಕರಲ್ಲಿ ಸೇವಾ ಮನೋಭಾವನೆ ಬೆಳಿಸಿದಂತಾಗುತ್ತದೆ. ಇಲ್ಲಿಗೆ ಬಂದು ಕೆಲಸ,ಕಾರ್ಯ ಹಾಗೂ ಜಾಗೃತಿ ಕಾರ್ಯಕ್ರಮಗಳನ್ನು ತಿಳಿದಾಗ ಜಿಲ್ಲೆಯಲ್ಲಿ ಉತ್ತಮ ಕೆಲಸ ಮಾಡುತ್ತಿರುವುದು ಕಂಡು ಬರುತ್ತದೆ. ಸಾರ್ವಜನಿಕರ ಸಹಕಾರ ಇನ್ನೂ ಹೆಚ್ವಿಗೆ ಬೇಕಾಗುತ್ತದೆ ಎಂದರು. ಈ ಸಂದರ್ಭದಲ್ಲಿ ರೆಡ್ ಕ್ರಾಸ್ ಸಂಸ್ಥೆಯ ರಾಜ್ಯ ಸಮಿತಿ ಸದಸ್ಯರಾದ ರವಿ ಮೆಣಸಿನಕಾಯಿ, ಗೌರವ ಕಾರ್ಯದರ್ಶಿ ಡಾ.ನೀಲೇಶ ಎಮ್ ಎನ್, ಗೌರವ ಸಹಕಾರ್ಯದರ್ಶಿ ನಿಂಗಪ್ಪ ಆರೇರ, ಸದಸ್ಯರಾದ ರವಿ ಹಿಂಚಿಗೇರಿ, ಕಾರ್ಯವೃಂದದವರಾದ ಡಾ.ಅಂಕಿತ ಆನಂದ, ಇರ್ಶಾದಅಲಿ ದುಂಡಸಿ, ಫಕ್ಕಿರೇಶ ಬಾರಕೇರ, ಜಗದೀಶ ಬೆಟಗೇರಿ ಇದ್ದರು.