ಬೆಂಗಳೂರು 21: ವಿಧಾನಸಭೆ ಇತಿಹಾಸದಲ್ಲೇ ಮೊದಲ ಬಾರಿಗೆ ಸ್ಪೀಕರ್ ಕಛೇರಿ ಎದುರು ಹೈಡ್ರಾಮಾ ಮಾಡಿ, ಸ್ಪೀಕರ್ ಪೀಠಕ್ಕೆ ಅಗೌರವ ತೋರಿ ಕಲಾಪಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ 18 ಬಿಜೆಪಿ ಶಾಸಕರನ್ನು ಸ್ಪೀಕರ್ ಯು. ಟಿ ಖಾದರ್ ಅಮಾನತು ಗೊಳಿಸಿದ್ದಾರೆ.
ಮಾರ್ಷಲ್ಗಳು ಬಿಜೆಪಿ ಶಾಸಕರ ಕೈಕಾಲು ಹೊತ್ತೊಯ್ದು ಸದನದಿಂದ ಹೊರಹಾಕಿದ್ದಾರೆ.
ಅಮಾನತುಗೊಂಡ ಶಾಸಕರುಗಳು 6ತಿಂಗಳು ವಿಧಾನಸೌದದ ಪ್ರಾಂಗಣಕ್ಕೆ ಪ್ರವೇಶಕ್ಕೆ ಅವಕಾಶವಿಲ್ಲ. ಸ್ಥಾಯಿ ಸಮಿತಿ ಸಭೆಗಳಿಗೆ ಹಾಜರಾಗುವಂತಿಲ್ಲ, ಅಂತೆಯೇ ಶಾಸಕರ ದಿನ ಭತ್ಯೆಗೂ ಕೊಕ್ ನೀಡಲಾಗಿದೆ.
ಮುನಿರತ್ನ, ಬಿ. ಸುರೇಶಗೌಡ, ದೊಡ್ಡನಗೌಡ ಪಾಟೀಲ, ಡಾ. ಅಶ್ವತ್ ನಾರಾಯಣ, ಚಂದ್ರ ಲಮಾಣಿ, ಯಶಪಾಲ್ ಸುವರ್ಣ, ಚನ್ನಬಸಪ್ಪ, ಬಸವರಾಜ ಮುತವಾಡ, ಎಂ ಆರ್. ಪಾಟೀಲ, ಭರತ್ ಶೆಟ್ಟಿ, ಹರೀಶ್ ಬಿ.ಪಿ, ಶರಣು ಸಲಗರ, ಎಮ್ ಆರ್ ಪಾಟೀಲ, ಭೈರತಿ ಸುರೇಶ ಅಮಾನತುಗೊಂಡ ಶಾಸಕರು.