ಮಾಂಜರಿ: ಧರ್ಮಸ್ಥಳ ಸ್ವಸಹಾಯ ಸಂಘದ ಕಾರ್ಯ ಶ್ಲಾಘನೀಯ

ಲೋಕದರ್ಶನ ವರದಿ

ಮಾಂಜರಿ 11:  ಯಾವ ಮನೆಯಲ್ಲಿ ಸುಖ ಶಾಂತಿ, ಸಮಾಧನ, ನೆಮ್ಮದಿ ಇರುತ್ತದೆಯೋ ಆ ಮನೆಯಲ್ಲಿ ಲಕ್ಷ್ಮಿದೇವಿಯು ವಾಸಿಸುತ್ತಾಳೆ ಎಂದು ಚಿಕ್ಕೋಡಿಯ ಸಂಪದನಾ ಚರಮೂತರ್ಿ ಮಠದ ಸಂಪದನಾ ಸ್ವಾಮಿಜಿಯವರು ಹೇಳಿದರು.

ಅವರು ಚಿಕ್ಕೋಡಿ ತಾಲೂಕಿನ ಯಡೂರ ಗ್ರಾಮದ ಅನ್ನಪೂಣೇಶ್ವರಿ ಕಲ್ಯಾಣ ಭವನದಲ್ಲಿ ಇಂದು ಶ್ರಿಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ ಚಿಕ್ಕೋಡಿ ತಾಲೂಕು ವಲಯ ಡಾ. ವೀರೇಂದ್ರ ಹೆಗ್ಗಡೆ, ಹೇಮ್ಮಾವತಿ ಅಮ್ಮನವರ ಆಶೀವರ್ಾದ ಸಾಮೂಹಿಕ ಲಕ್ಷ್ಮೀಪೂಜೆ, ಉಡಿತುಂಬುವು ಹಾಗೂ ಧಾಮರ್ಿಕ ಸಭಾ ಕಾರ್ಯಕ್ರಮದಲ್ಲಿ ದಿವ್ಯಸಾನಿಧ್ಯವನ್ನು ವಹಿಸಿ ಮಾತನಾಡುತ್ತಾ ನಾವು ನಮ್ಮ ಮನೆಯಲ್ಲಿ ಸುಖ, ಶಾಂತಿ, ನೆಮ್ಮದಿಯಗೋಸ್ಕರ ಮನೆಯಲ್ಲಿ ಲಕ್ಷ್ಮಿ ಪೂಜೆಯನ್ನು ಮಾಡುತ್ತೇವೆ. ಆದರೆ ಧರ್ಮಸ್ಥಳ ಸ್ವಸಹಾಯ ಸಂಘದವರು ಲೋಕಕಲ್ಯಾಣಕ್ಕಾಗಿ ಸಾಮೂಹಿಕ ಲಕ್ಷ್ಮಿ ಪೂಜೆಯನ್ನು ಹಮ್ಮಿಕೊಂಡು ಪ್ರತಿಯೊಬ್ಬರ ಮನೆಯಲ್ಲಿ ಸುಖ, ಶಾಂತಿ ಜೊತೆಗೆ ಲಕ್ಷ್ಮಿಯ ಕೃಪಾಕಟಾಕ್ಷೆಯ ಇರಲಿ ಸಾಮಾಜಿಕ ಕಾರ್ಯದಲ್ಲಿ ತೊಡಗಿ ಒಳ್ಳೆಯ ಜನಪರ ಕೆಲಸಗಳನ್ನು ಮಾಡುತ್ತಿದ್ದಾರೆ. 12 ನೇ ಶತಮಾನದಲ್ಲಿ ಬಸವೇಶ್ವರ ಮಾಡಿದಂತಹ ಸಾಮಾಜಿಕ ಕೆಲಸಗಳನ್ನು ಸದ್ಯ ವಿರೇಂದ್ರ ಹೆಗ್ಗಡೆಯವರು ಮಾಡುತ್ತಿದ್ದಾರೆ ಎಂದು ಸಂಪದನಾ ಶ್ರೀಗಳು ತಿಳಿಸಿದರು.

ನಂತರ ಅಖಿಲ ಭಾರತ ಜನಜಾಗೃತಿ ವೇದಿಕೆಯ ಸದಸ್ಯ ಅಜಯ ಸೂರ್ಯವಂಶಿ ಮಾತನಾಡಿ ಧರ್ಮಸ್ಥಳ ಸ್ವಸಹಾಯ ಸಂಘವು ಕಳೆದ ಹಲವು ವರ್ಷಗಳಿಂದ ಗ್ರಾಮೀಣ ಭಾಗದಲ್ಲಿ ಮಹಿಳೆಯರು ಸ್ವತಂತ್ರವಾಗಿ ಬದುಕುಬೇಕುವ ಎನ್ನುವ ಉದ್ದೇಶದಿಂದ ಅವರ ಆಥರ್ಿಕವಾಗಿ ಸಹಾಯ ಮಾಡುವ ನಿಟ್ಟಿನಲ್ಲಿ ಕಡಿಮೆ ಬಡ್ಡಿದರದಲ್ಲಿ ಸಾಲಸೌಲಭ್ಯವನ್ನು ನೀಡುತ್ತದೆ. ಮಹಿಳೆಯರ ಆಥರ್ಿಕ ಸದ್ರೃಢವಾಗಲು ಉಚಿತವಾಗಿ ವಿವಿಧ ತರಬೇತಿಯ ನೀಡುತ್ತಿದೆ ಅವರ ಕಾರ್ಯ ಶ್ಲಾಘನೀಯ ಎಂದರು.

ಈ ಸಂದರ್ಭದಲ್ಲಿ ಭಿಮಗೌಡ ಪಾಟೀಲ್, ಎಸ್ ಟಿ ಮುನ್ನೂಳ್ಳಿ, ಪಾಂಡುರಂಗ ಕೋಳಿ, ಶಿವಾನಂದ ಕರೋಶಿ, ಪ್ರಭು ಚನ್ನೂರ, ಲಕ್ಷ್ಮಣ ಶಿಂಗಾಡೆ, ಕುಮಾರ ಬಣಕಾರ, ಜ್ಯನಮ್ಮಾ ಲಾಢಖಾನ, ಸಾವಿತ್ರಿ ಬಡಿಗೇರ, ರಾಣಿ ಕಾಗಲೆ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.