ಲೋಕದರ್ಶನ ವರದಿ
ರಾಣೇಬೆನ್ನೂರು 12: ಭಾರತೀಯ ಇತಿಹಾಸ ಪರಂಪರೆಯಲ್ಲಿ ಆಯುವರ್ೇದವು ನಿತ್ಯ ಬದುಕಿನಲ್ಲಿ ಹಾಸುಹೊಕ್ಕಾಗಿ ಸಾಗಿ ಬಂದಿದೆ ಎಂದು ಉಪನ್ಯಾಸಕಿ ಅನುರಾಧಾ ಎಸ್. ಹೇಳಿದರು.
ಇಲ್ಲಿನ ಕೆಎಲ್ಇ ಶಿಕ್ಷಣ ಸಂಸ್ಥೆಯ ರಾಜ-ರಾಜೇಶ್ವರಿ ಕಾಲೇಜು ಭವನದಲ್ಲಿ ಬೆಳಗಾವಿ ಕಂಕಣವಾಡಿ ಆಯುವರ್ೇದ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ಕೌಮಾರಭೃತ್ಯ ವಿಭಾಗವು ಆಯೋಜಿಸಿದ್ದ ಮಾಸಿಕ ಸುವರ್ಣಬಿಂದು ಪ್ರಾಸನ ಲಸಿಕಾ ಶಿಬಿರ ಉದ್ಘಾಟಿಸಿ, ಮಾತನಾಡಿದರು.
ದೇಶಿಯ ಆಯುವರ್ೇದ ಅಂದಿನ ಗ್ರಾಮೀಣ ನಾಗರೀಕರ ಬದುಕಿನಲ್ಲಿ ಅವಿಭಾಜ್ಯ ಅಂಗವಾಗಿ ಸಾಗಿ ಬಂದಿದ್ದು, ಇದೀಗ ಆಧುನಿಕ ಬದುಕಿನತ್ತ ಸಾಗಿರುವ ಜನಾಂಗವು ಇಂಗ್ಲೀಷ್ ಔಷಧಿಗೆ ಮಾರುಹೋಗಿದ್ದರೂ, ಭವಿಷ್ಯದ ದಿನಗಳಲ್ಲಿ ಮತ್ತೆ ಆಯುವರ್ೇದ ಔಷಧದ ಬಳಕೆ ಅಗತ್ಯ ಮತ್ತು ಅನಿವಾರ್ಯವಾಗುತ್ತದೆ ಎಂದರು.
ಕೆಎಲ್ಇ ಅಧೀಕ್ಷಕ ಅನೀಲ್ ದಂಡಗಿ ಮಾತನಾಡಿ ನಮ್ಮ ಪೂರ್ವಜರು ಮಾನವ ಕುಲದ ಪರಿಪೂರ್ಣ ಬೆಳವಣಿಗೆ ಹಾಗೂ ಆರೋಗ್ಯಯುತ ಬದುಕಿಗೆ ಇಂತಹ ಪರಿಪೂರ್ಣವಾದ ಗಿಡಮೂಲಿಕಾಧಾರಿತ ಸುವರ್ಣ ಬಿಂದು ಪ್ರಾಸನ ಲಸಿಕೆ ಕಂಡು ಹಿಡಿದಿದ್ದಾರೆ. ಇದರಿಂದ ಮಕ್ಕಳ ಆರೋಗ್ಯ ಹಾಗೂ ಚುರುಕುತನದ ಬುದ್ದಿ ಹೊಂದಲು ಅತ್ಯಂತ ಸಹಕಾರಿಯಾಗಿದೆ ಎಂದರು. ಶಿಬಿರದ ಅಧ್ಯಕ್ಷತೆ ವಹಿಸಿದ್ದ, ಪ್ರಾಚಾರ್ಯ ಎಂ.ವಿ.ಎಲಿಗಾರ ಅವರು ಕಂಕಣವಾಡಿ ಆಯುವರ್ೇದ ಆಸ್ಪತ್ರೆಯು ಇತಿಹಾಸದ ಆಯುವರ್ೇದ ಬಳಕೆ ಮತ್ತು ಅದರ ಉಪಯೋಗ ನಿರಂತರವಾಗಿ ಸಾಗುವ ಸದುದ್ದೇಶ ಹೊಂದಿದ್ದು, ಇಂದೀಗೂ ಅದು ಮುಂದುವರೆದಿರುವುದು ಸ್ವಾಗತಾರ್ಹವಾಗಿದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಡಾ|| ನಟರಾಜ ಅರಳಗುಪ್ಪಿ ಅವರು ಇತಿಹಾಸ ವೇದ ಗ್ರಂಥಗಳಲ್ಲಿ ಸುವರ್ಣ ಬಿಂದು ಪ್ರಾಸನ ಶಾಸ್ತ್ರೋಕ್ತ ಪದ್ಧತಿಯಲ್ಲಿ ತಯಾರಿಸಲಾಗಿದೆ. ಕನರ್ಾಟಕ ಸಕರ್ಾರದ ಆಯುವರ್ೇದ ಔಷಧ ನಿಮರ್ಾಣ ಮಂಡಳಿಯಿಂದ ಲಸಿಕೆ ಪ್ರಮಾಣಿಕರಿಸಲಾಗಿದ್ದು, ಎಲ್ಲ ರೀತಿಯ ಭೌತಿಕ ಹಾಗೂ ರಾಸಾಯಿನಿಕ ಪರೀಕ್ಷೆಗಳಿಗೆ ಒಳಪಡಿಸಿ, ಇದರ ಸುರಕ್ಷತೆಯೆನ್ನು ಪರೀಕ್ಷಿಸಿ, ದೃಡಪಡಿಸಿದ್ದು, ಮಕ್ಕಳಿಗೆ ಪುಷ್ಯ ಮಾಸದಲ್ಲಿ ವಿತರಿಸಲಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಪ್ರಾಚಾರ್ಯ ಎಂ.ಎಫ್.ಗುಡಿಕಟ್ಟಿ, ಸಿ.ಜಿ. ಮಲ್ಲಾಪುರ, ಸುರೇಶ, ಎಸ್.ಬಿ.ಗುರ್ಜರ ರವಿ, ರೇವಣ್ಣ, ಸಂಜು, ಎಂ.ಎನ್.ಸುರಣಗಿ, ಸೇರಿದಂತೆ ಅನೇಕ ಗಣ್ಯರು, ಉಪನ್ಯಾಸಕರು ಉಪಸ್ಥಿತರಿದ್ದರು.
ಮುಂಜಾನೆಯಿಂದ ಸಂಜೆಯವರೆಗೂ ನಡೆದ ಸುವರ್ಣ ಬಿಂದು ಪ್ರಾಸನ ಲಸಿಕಾ ಶಿಬಿರದಲ್ಲಿ ನಗರ, ತಾಲೂಕು ಸೇರಿದಂತೆ 300ಕ್ಕೂ ಹೆಚ್ಚು ಪಾಲಕರು ತಮ್ಮ ಮಕ್ಕಳೊಂದಿಗೆ ಪಾಲ್ಗೊಂಡಿದ್ದರು.