ಧ್ವನಿ ಇಲ್ಲದವರಿಗೆ ಧ್ವನಿ ಕೊಟ್ಟವರು ಬಸವಾದಿ ಶರಣರು: ಸಾಹಿತಿ ಅಶೋಕ ಹಂಚಲಿ

ಲೋಕದರ್ಶನ ವರದಿ

ವಿಜಯಪುರ 13: ವಚನಗಳ ಆಶಯದಂತೆ ಜನ ಬದುಕುತ್ತಿಲ್ಲ ಎಂದೇನಿಲ್ಲ, ಬಹುತೇಕ ಕಡೆ ಅನೇಕ ಮಹನೀಯರು ಬಡ-ಬಲ್ಲಿದ ಎಂಬ ಭೇದವಿಲ್ಲದೆ ಶರಣ ವಚನಗಳನ್ನು ತಮ್ಮ ನಿತ್ಯ ಜೀವನದಲ್ಲಿ ಅಳವಡಿಸಿಕೊಂಡಿದ್ದಾರೆ. ಆದರೆ ಕೆಲವು ಮೂಢರು ವಚನಗಳನ್ನು ತಮ್ಮ ಮೂಗಿನ ನೇರಕ್ಕೆ ಅಥರ್ೈಸಿ ತದ್ವಿರುದ್ಧ ನಡೆದುಕೊಳ್ಳುತ್ತಿದ್ದಾರೆ ಎಂದು ಸಾಹಿತಿ ಅಶೋಕ ಹಂಚಲಿ ನುಡಿದರು.

ವಿಜಯಪುರ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ ಆಶ್ರಯದಲ್ಲಿ ಟಕ್ಕೆ ಬಡಾವಣೆಯಲ್ಲಿರುವ ಅಯ್ಯಪ್ಪಸ್ವಾಮಿ ದೇವಾಲಯದಲ್ಲಿ ಹಮ್ಮಿಕೊಳ್ಳಲಾಗಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ `ವಚನಕ್ರಾಂತಿ ಬದುಕಿಗೊಂದು ದಾರಿ' ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದ ಅವರು,  ವಚನ ಸಾಹಿತ್ಯ ಮನಸ್ಸುಗಳನ್ನು ಬೆಸೆಯುವ, ಮೂಢ ಸಮಾಜವನ್ನು ತಿದ್ದುವ ಸಾಹಿತ್ಯ, ಧ್ವನಿ ಇಲ್ಲದವರಿಗೆ ಅಂದು ಧ್ವನಿ ನೀಡಿದವರು, ನಡೆ-ನುಡಿಗಳನ್ನು ಉಣಲು-ತೊಡಲು ಕಲಿಸಿದವರು ಬಸವಾದಿ ಶರಣರು ಎಂದರು. 

ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿದ ಲೇಖಕ ಸುಭಾಸ ಯಾದವಾಡ ಮಾತನಾಡಿ, ಯಾರಿಗೆ ಮೋಹದ ಬಾಣಗಳು ತಾಕುವದಿಲ್ಲವೋ ಅವರಿಗೆ ಶರಣರೆಂದು ಕರೆಯುತ್ತೇವೆ.  ದೇಹಕ್ಕೆ ನಶ್ವರ ಇದೆ. ಆದರೆ ಮನಕ್ಕಿಲ್ಲ. ಶರಣ ದಂಪತಿಗಳು ತಮ್ಮ ಕಾಯಕದಿಂದ ಜೀವನ ರೂಪಿಸಿಕೊಂಡವರು. ವಾಸ್ತವಿಕ ಜೀವನಕ್ಕೆ ಒತ್ತು ನೀಡಿದವರು ಬದುಕಿನ ಮಾರ್ಗಸೂಚಕರಾಗಿ ಕಾಲು ಕ್ರಿಯೆ, ದೇಹ ಪ್ರೀತಿಯ, ತಲೆ ಬುದ್ಧಿಯ ರೂಪ ಹೀಗೆ ಸಂಪತ್ತಿನಿಂದ ಕೂಡಿದ ಈ ದೇಹವನ್ನು ಪರಮಾತ್ಮ ನೀಡಿದ್ದಾನೆ. ಸ್ಥಾವರ ಪೂಜೆಗಿಂತ ಜಂಗಮತ್ವಕ್ಕೆ ಹೆಚ್ಚು ಪ್ರಾಧಾನ್ಯತೆ ಕೊಟ್ಟವರು ಶರಣರು. ತಮ್ಮ ಕಾಯಕದಿಂದ ದಾನಮಾಡುವ ಗುಣವುಳ್ಳವರಾಗಿದ್ದರು. ದಾನಕೊಟ್ಟ ವ್ಯಕ್ತಿ ಇಹಲೋಕ ತ್ಯಜಿಸುತ್ತಾನೆ. ದತ್ತಿ ರೂಪದಲ್ಲಿ ದಾನ ತೆಗೆದುಕೊಂಡ ಪರಿಷತ್ತು ಹಿರಿಯರನ್ನು ಸ್ಮರಿಸುತ್ತದೆ ಎಂದರು.

ಕಸಾಪ ಜಿಲ್ಲಾಧ್ಯಕ್ಷ  ಮಲ್ಲಿಕಾಜರ್ುನ ಯಂಡಿಗೇರಿ ಮಾತನಾಡಿ, ಪೂಜೆ ಎಂದರೆ ಮನಸ್ಸಿನ ಪವಿತ್ರ ಭಾವ ಹಾಗೂ  ಯಾವುದೇ ಮೋಹ ಬೇಡ ಎಂಬ ಸಂತೃಪ್ತಿ ಭಾವ ಎಂದರು.  ವಿಶ್ರಾಂತ ಪೋಲಿಸ ಅಧಿಕಾರಿ ಬಿ.ಆರ್. ಚೌಕಿಮಠ ಮಾತನಾಡಿದರು.  ಹಿರಿಯ ಸಾಹಿತಿ ಮಹಾಂತ ಗುಲಗಂಜಿ ಅಧ್ಯಕ್ಷತೆ ವಹಿಸಿದ್ದರು. 

ಪ್ರಾಚಾರ್ಯ ಎಸ್.ಜಿ. ಲಕ್ಕುಂಡಿಮಠ,  ಬಿ.ಆರ್. ಬನಸೋಡೆ,  ಅಶೋಕ, ಪ್ರೊ.ಯು.ಎನ್. ಕುಂಟೋಜಿ, ರೇವಣಸಿದ್ದಪ್ಪ  ಸೊಡ್ಡಿ, ಆರ್.ಎನ್. ಶೇಠೆ, ಶಶಿಕಾತ ಹಿರೇಮಠ, ಸದಾನಂದ  ಇಮ್ರಾಪೂರ, ರೂಪಸಿಂಗ ಲೋಣಾರಿ, ಎಸ್.ಎಸ್.ಖಾದ್ರಿ ಇನಾಮದಾರ. ಪ್ರೊ. ಬಸವರಾಜ ಕುಂಬಾರ, ಶಿವಪುತ್ರಪ್ಪ ತಳಭಂಡಾರಿ, ರಾಜೇಂದ್ರಕುಮಾರ ಬಿರಾದಾರ, ಸೋಮಶೇಖರ ಕುಲರ್ೆ, ಶರಣಗೌಡ ಪಾಟೀಲ, ಎಸ್.ವೈ. ನಡುವಿನಕೇರಿ, ರಂಗನಾಥ ಅಕ್ಕಲಕೋಟ, ಮಹಾದೇವ ರಾವಜಿ. ಡಾ. ಜಿ.ಬಿ.ಕೊಟ್ನಾಳ, ಭಾರತಿ ಭುಯ್ಯಾರ, ದಾಕ್ಷಾಯಣಿ ಬಿರಾದಾರ, ದಾಕ್ಷಾಯಣಿ ಹುಡೇದ, ಎಸ್.ಕೆ. ಕನ್ನಾಳ, ಬಿ.ವಿ. ಕತಕನಹಳ್ಳಿ, ರವಿ ಕಿತ್ತೂರ, ಶಿವಲಿಂಗಪ್ಪ ಕಿಣಗಿ ಉಪಸ್ಥಿತರಿದ್ದರು. ಬಸವರಾಜ ಕುಂಬಾರ ಸ್ವಾಗತಿಸಿದರು. ರಾಜೇಂದ್ರಕುಮಾರ ಬಿರಾದಾರ ನಿರೂಪಿಸಿ ವಂದಿಸಿದರು.