ಗುಳೇದಗುಡ್ಡ 12: ಕ್ರೀಡೆಗಳು ವ್ಯಕ್ತಿಯನ್ನು ದೈಹಿಕವಾಗಿ ಸಧೃಡವಾಗಿ ಮಾಡುವುದರ ಜೊತೆಗೆ ಆರೋಗ್ಯವಂತನನ್ನಾಗಿ ಮಾಡುತ್ತವೆ. ಕಬಡ್ಡಿ ನಮ್ಮ ದೇಶಿಯ ಕ್ರೀಡೆಯಾಗಿದ್ದೂ ಗ್ರಾಮೀಣ ಭಾಗದಲ್ಲಿಯೇ ಇನ್ನೂ ದೇಶಿ ಕ್ರೀಡೆಗಳು ಜೀವಂತವಾಗಿವೆ ಎಂದು ಕೋಟೆಕಲ್ ಮಠದ ಹೊಳೆಹುಚ್ಚೇಶ್ವರ ಶ್ರೀಗಳು ಹೇಳಿದರು.
ಅವರು ಸಮೀಪದ ಕೊಟೆಕಲ್ ಗ್ರಾಮದಲ್ಲಿ ಹೊಳೆಹುಚ್ಚೇಶ್ವರ ಸಂಸ್ಥಾನಮಠದ ಜಾತ್ರಾ ಮಹೋತ್ಸವ ನಿಮಿತ್ತ ಜಾತ್ರಾ ಮಹೋತ್ಸವ ಸಮಿತಿ, ಜಿಲ್ಲಾ ಕಬಡ್ಡಿ ಅಮೇಚೂರ ಅಸೋಸಿಯೇಶನ್ ವತಿಯಿಂದ ನಡೆದ ರಾಜ್ಯಮಟ್ಟದ ಹೊನಲು ಬೆಳಕಿನ ಕಬಡ್ಡ ಪಂದ್ಯಾವಳಿಯಲ್ಲಿ ಸಾನಿಧ್ಯ ವಹಿಸಿ ಮಾತನಾಡಿ, ಇಂದಿನ ಯುವಕರು ಮೊಬೈಲ್ನಲ್ಲಿ ಕಳೆದು ಹೋಗುತ್ತಿದ್ದು, ಇದರಿಂದ ದೇಶಿ ಕ್ರೀಡೆಗಳ ಬಗ್ಗೆ ಆಸಕ್ತಿ ಕಳೆದುಕೊಳ್ಳುತ್ತಿದ್ದು, ಪ್ರತಿಯೊಬ್ಬರು ದೇಶಿ ಕ್ರೀಡೆಗಳನ್ನು ಬೆಳೆಸಬೇಕು ಎಂದು ಹೇಳಿದರು. ರಾಷ್ಟ್ರೀಯ ಕಬಡ್ಡಿ ಆಟಗಾರ ಹಿರೇಗೌಡರ, ಜಿಪಂ ಮಾಜಿ ಉಪಾಧ್ಯಕ್ಷ ಹನಮಂತ ಮಾವಿನಮರದ ಮಾತನಾಡಿದರು. ಗ್ರಾಪಂ ಅಧ್ಯಕ್ಷೆ ಲಕ್ಷ್ಮಿಬಾಯಿ ಸೀತಿಮನಿ ಅಧ್ಯಕ್ಷತೆ ವಹಿಸಿದ್ದರು.
ಕಬಡ್ಡಿ ಪಂದ್ಯವಾಳಿಯಲ್ಲಿ ಬೆಳಗಾವಿ, ಬೀಳಗಿ, ಸೊನ್ನ, ನಾಗನೂರ, ರೊಳ್ಳಿ, ಮುಶಿಗೇರಿ ಸೇರಿದಂತೆ ನಾನಾ ಕಡೆಗಳಿಂದ 24 ತಂಡಗಳು ಭಾಗವಹಿಸಿದ್ದವು. ಬಿ.ಪಿ.ದೇಸಾಯಿ, ಶಶಿಧರ ದೇಸಾಯಿ, ಎಸ್.ಬಿ.ಮಾಚಾ, ಮುತ್ತಪ್ಪ ಮುಕ್ಕಣ್ಣವರ, ಪಿಡಿಓ ಎಲ್.ಜಿ.ಶಾಂತಗೇರಿ, ಬಾರಡ್ಡಿ, ಸಿದ್ದಪ್ಪ ಮಾವಿನಮರದ, ಪರಶುರಾಮ ಜೋಗಿನ ಸೇರಿದಂತೆ ಇತರರು ಇದ್ದರು.