ಮಹಾದಾಯಿ ಹೋರಾಟಗಾರರ ಗೆಲುವು

ಲೋಕದರ್ಶನ ವರದಿ 

ಯರಗಟ್ಟಿ 24: ಕನರ್ಾಟಕ ರಾಜ್ಯಕ್ಕೆ 13.42 ಟಿಎಂಸಿಯಷ್ಟು ಮಹದಾಯಿ  ನೀರು ಬಳಸಿಕೊಳ್ಳಲು ಸುಪ್ರೀಂ ಕೋಟರ್್ ಅವಕಾಶ ನೀಡಿರುವುದು ಸಂತಸ ತಂದಿದೆ ಇದು ಹೋರಾಟಗಾರರ ಗೆಲವು ಎಂದು ರಾಜ್ಯ ರೈತ ಸೇನೆ ಜಿಲ್ಲಾಧ್ಯಕ್ಷ ಸೋಮು ರೈನಾಪೂರ ಹೇಳಿದರು. 

ಇಲ್ಲಿನ ಕ್ರಾಂತಿವೀರ ಸಂಗೋಳ್ಳಿ ರಾಯಣ್ಣ ವೃತ್ತದಲ್ಲಿ ಪಠಾಕಿ ಸಿಡಿಸಿ ಸಿಹಿ ಹಂಚಿ ಮಹದಾಯಿ ವಿಜಯೋತ್ಸವ ಆಚರಣೆಯಲ್ಲಿ ಮಾತನಾಡಿದರು. ಈ ಸಂದರ್ಭದಲ್ಲಿ ದಲಿತ ಸಂಘಟನೆ ಮುಖಂಡ ಸಂತೋಷ ಚನ್ನಮೇತ್ರಿ, ಫಕೀರಪ್ಪ ಚನ್ನಮೇತ್ರಿ, ಹನಮಂತ ಕಡಕೋಳ, ವೆಂಕಣ್ಣ ಹುರುಕನವರ, ಡಿ.ಕೆ.ರಫೀಕ್, ಬಾಬು ಚನ್ನಮೇತ್ರಿ, ಶಿವಾನಂದ ನಾವಿ, ಗೋವಿಂದಪ್ಪ ವಜ್ರಮಟ್ಟಿ ಮುಂತಾದವರಿದ್ದರು.