ಯೇಸು ಕ್ರಿಸ್ತನ ಚಿಂತನ ಮಂಥನ ಕಾರ್ಯಕ್ರಮ

  

ಲೋಕದರ್ಶನ ವರದಿ

ಧಾರವಾಡ 06: ಅನ್ಯಾಯ, ಅಶಾಂತಿ ತಾಂಡವವಾಡುತ್ತಿದ್ದ ಸಂದರ್ಭದಲ್ಲಿ ಈ ಭೂಮಿಗೆ ಜನಿಸಿ ಬಂದ ಯೇಸು ಕ್ರಿಸ್ತ ತನ್ನನ್ನು ಶಿಲುಬೆಗೆ ಏರಿಸಿದರೂ, ಅವರಿಗೆ ಕ್ಷಮದಾನ ನೀಡುವ ಮೂಲಕ ವಿಶ್ವಕ್ಕೆ ಶಾಂತಿ ಮಂತ್ರ ಬೋಧಿಸಿದ ಯೇಸುಕ್ತಿಸ್ತನ ತತ್ವಾದರ್ಶಗಳು ಸರ್ವ ಕಾಲಕ್ಕೂ ಪ್ರಸ್ತುತವಾಗಿವೆ. ಅವುಗಳನ್ನು ನಾವು ಪಾಲಿಸುವ ಮೂಲಕ ಕಲಿಗಾಲದ ವಿರುದ್ದ ಹೋರಾಡಬೇಕಿದೆ ಎಂದು  ಮಾಜಿ ಸಚಿವ ಎಸ್.ಆರ್. ಮೊರೆ ಹೇಳಿದರು.

ದಿ.06ರಂದು ಸಂಜೆ ನಗರದ ಅಂಬೇಡ್ಕರ್ ಸಭಾ ಭವನದಲ್ಲಿ ಸ್ವಸಹಾಯ ಗುಂಪು ಯವರಲಾಸ್ಟಿಂಗ್ ಲೈಫ್ ಮಿನಿಸ್ಟ್ರಿ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಯೇಸು ಕ್ರಿಸ್ತನ ಚಿಂತನ ಮಂಥನ-2018 ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.   

ಹಿಂದುಗಳಿಗೆ ಭಗವದ್ಗೀತೆ, ಮುಸ್ಲಿಂರಿಗೆ ಕುರಾನ್ ಇದ್ದ ಹಾಗೆ ಕ್ರಿಶ್ಚಿಯನ್ರಿಗೆ ಬೈಬಲ್ ಧರ್ಮಗ್ರಂಥವಾಗಿದೆ. ಎಲ್ಲವೂ ಮನುಷ್ಯನಿಗೆ ಮೌಲಿಕ ಚಿಂತನೆಗಳನ್ನು ಬೋಧಿಸುವ ಮೂಲಕ ಉದಾತ್ತ ಜೀವನ ಸಾಗಿಸಲು, ಇತರರಿಗೆ ಪರೋಪಕಾರ ಮಾಡಲು, ಕೆಟ್ಟವರಿಗೆ ಒಳ್ಳೆಯ ಮಾರ್ಗದಲ್ಲಿ ನಡೆಯಲು ತಿಳಿಸಿವೆ. ಆದರೆ ಮನುಷ್ಯ ಮಾನವೀಯ ಮೌಲ್ಯಗಳನ್ನು ಮರೆತು ಇತರರಿಗೆ ಕಷ್ಟ, ಹಿಂಸೆ ನೀಡುವ ದರ್ುಗುಣಗಳನ್ನು ಅಳವಡಿಸಿಕೊಂಡು ದಾರಿ ತಪ್ಪಿದ್ದಾನೆ. ಈ ಕಲಿಗಾಲ ಬಹಳ ಕೆಟ್ಟದ್ದು. ಎಲ್ಲೆಡೆ ಅಶಾಂತಿ, ದೌರ್ಜನ್ಯ, ಅತ್ಯಾಚಾರ ತಾಂಡವವಾಡುತ್ತಿವೆ. ಇದು ಬಹಳ ಬೇಸರದ ಸಂಗತಿಯಾಗಿದೆ ಎಂದರು. 

ಇಂತಹ ಸಂಕಷ್ಟ ಸಂದರ್ಭದಲ್ಲಿ ಮುತ್ತುರಾಜ ಮಾಕಡವಾಲೆ ಸಹೋದರರು ಇಂತಹ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ. ಇದರ ಪ್ರೇರಣೆಯನ್ನು ಪಡೆದು ನಾವೆಲ್ಲ ಸಮಾಜದಲ್ಲಿ ಶಾಂತಿ ನೆಲಸುವಂತೆ ಮಾಡಲು ಹೋರಾಡೋಣ ಎಂದರು.

ದೇಶದಲ್ಲಿ ಐಕ್ಯತೆ, ಸೌಹಾರ್ದತೆ ನೆಲೆಸಲು ಕಾಂಗ್ರೆಸ್ ಪಕ್ಷವೂ ಹಲವು ದಶಕಗಳಿಂದ ನಿರಂತರ ಹೋರಾಟ ನಡೆಸುತ್ತಿದೆ. ಆದರೆ ಬಿಜೆಪಿ ದೇಶದಲ್ಲಿ ಜಾತಿ, ಧರ್ಮದ ಹೆಸರಿನಲ್ಲಿ ಕಂದಕ ಸೃಷ್ಟಿಸುವ ಕೆಲಸ ಮಾಡುತ್ತಿದೆ. ಇದು ಸರಿಯಾದ ಬೆಳವಣಿಗೆ ಅಲ್ಲ. ಇಂತಹ ಪಕ್ಷವನ್ನು ಜನರು ತಿರಸ್ಕರಿಸುವ ಮೂಲಕ ಪಾಠ ಕಲಿಸಬೇಕು. ನಾವೆಲ್ಲ ಒಂದೇ ತಾಯಿಯ ಮಕ್ಕಳಂತೆ ಬಾಳಿ ಬದುಕುವ ಮೂಲಕ ಒಟ್ಟಾಗಿ ಹೋಗಬೇಕು. ನಮ್ಮ ಕಾಂಗ್ರೆಸ್ ಪಕ್ಷಕ್ಕೆ ಯಾವ ಪಕ್ಷವೂ ಸರಿಸಾಟಿ ಇಲ್ಲ ಎಂದು ಹೇಳಿದರು

ವಿಶೇಷ ಭಾಷಣಕಾರ ರಾಗಿ ಮಾತನಾಡಿದ ಮುತ್ತುರಾಜ ಮಾಕಡವಾಲೆ, ಭಾರತಕ್ಕೆ ಕ್ರಿಶ್ಚಿಯನರ ಕೊಡುಗೆ, ಶಿಕ್ಷಣ ಕ್ಷೇತ್ರಕ್ಕೆ ಅವರು ಶ್ರಮಿಸಿದ ಪರಿಣಾಮ ನಾವು ಹಾಗೂ ನಮ್ಮ ಮಕ್ಕಳು ಉನ್ನತ ಶಿಕ್ಷಣ ಪಡೆದು ಜೀವನ ರೂಪಿಸಿಕೊಳ್ಳುತ್ತಿದ್ದಾರೆ ಎಂದರು.  

ಈ ಸಂದರ್ಭದಲ್ಲಿ ಮಹೇಶ ಶೆಟ್ಟಿ, ಶರಣಪ್ಪ ಕೊಟಗಿ, ರಾಜಾದೇಸಾಯಿ, ಅರವಿಂದ ಕಟಗಿ, ಇಮ್ರಾನ್ ಕಳ್ಳಿಮನಿ, ಚಿತ್ರನಟಿ ಪ್ರೀತಿ, ಸೋಮಶೇಖರ ಸವದತ್ತಿ, ಮಾರುತಿ ಮಾಕಡವಾಲೆ, ವಸಂತ ಅಕರ್ಾಚಾರ್, ಆನಂದ ಸಿಂಗನಾಥ, ಸಮಿನಾ ವಾಲಿಕಾರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಬಳಿಕ ಆಂಧ್ರದ ಫಾದರ್ ಸ್ಟಿಪನ್ ಅವರಿಂದ ಚಿಂತನ ಮಂಥನ ನಡೆಯಿತು. ಅವರಿಗೆ  ಪಾಸ್ಟರ್ ವಸಂತ ಸಕ್ರಿ, ಪರಶುರಾಮ ಮೂಲಿಮನಿ ಸೇರಿ ಹಲವು ಫಾದರ್ಗಳು ಸಾಥ್ ನೀಡಿದರು. ಹನುಮಂತರಾಜ್ ಮಾಕಡವಾಲೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಗೋವಿಂದರಾಜ ಮಾಕಡವಾಲೆ ಸರ್ವರನ್ನು ಸ್ವಾಗತಿಸಿದರು.