ಗುರುವಿನ ದಾಸನಾದರೆ ಯಶಸ್ಸು ಸಾಧ್ಯ: ಶೀತಲ ಮೆಕನಮರಡಿ

ಲೋಕದರ್ಶನ ವರದಿ

ಬೆಳಗಾವಿ05:  ಆಧುನಿಕ ತಂತ್ರಜ್ಞಾನ ತಕ್ಕಂತೆ ವಿದ್ಯಾಥರ್ಿಗಳು ಬೆಳೆಯುವ ಅಗತ್ಯವಿದೆ. ದೇಶದ ಉತ್ತಮ ನಾಗರಿಕನಾಗಿ ಬೆಳೆದು ತಂದೆ-ತಾಯಿಯರ ಹೆಸರು ತರಬೇಕು. ಅದಕ್ಕಾಗಿ, ಗುರುವಿನ ದಾಸನಾದರೆ ಮಾತ್ರ ಜೀವನದಲ್ಲಿ ಯಶಸ್ಸು ಕಾಣಲು ಸಾಧ್ಯವೆಂದು ಶೀತಲ್ ಟುಟೋರಿಯಲ್ಸ್ ಅಧ್ಯಕ್ಷರಾದ ಶೀತಲ ಮೆಕನಮರಡಿ ಅಭಿಪ್ರಾಯ ವ್ಯಕ್ತಪಡಿದರು.

  ಸ್ಥಳೀಯ ಮಜಗಾವಿ ಶೀತಲ್ ಟುಟೋರಿಯಲ್ಸ್ ವತಿಯಿಂದ ಆಯೋಜಿಸಲಾಗಿದ್ದ ಶುಕ್ರವಾರ 05 ರಂದು 2018-19 ನೇ ಸಾಲಿನ ಹತ್ತನೇಯ ತರಗತಿಯ ವಿದ್ಯಾಥರ್ಿಗಳ ಬೀಳ್ಕೊಡುಗೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ನಿಮ್ಮ ಓದಿಗಾಗಿ ಕುಟುಂಬಸ್ಥರು ಶ್ರಮವಹಿಸುತ್ತಾರೆ. ಅದಕ್ಕೆ, ಪ್ರತಿಫಲ ತರುವ ಮಕ್ಕಳು ನೀವಾಗಬೇಕು, ಎಸ್ಸೆಸ್ಸೆಲ್ಸಿ ಮುಗಿದ ಮೇಲೆ ವಿದ್ಯಾಥರ್ಿಗಳಿಗೆ ಪಿಯುಸಿ ಅಂತಿಮ  ಘಟ್ಟವಾಗಿರುತ್ತದೆ. ಅದನ್ನು ನೆನಪಿನಲ್ಲಿಟ್ಟುಕೊಂಡು ಓದಿನತ್ತ ಗಮನ ಹರಿಬೇಕು. ವಿದ್ಯಾಥರ್ಿಗಳಿದ್ದಾಗಲೇ ಜೀವನದಲ್ಲಿ ಗುರಿ ಇಟ್ಟಕೊಂಡು ಸಾಧನೆಯ ಹಾದಿಯನ್ನು ತುಳಿಯಬೇಕು. ಅದಕ್ಕೆ ನಿಮ್ಮ ಸತತ ಪ್ರಯತ್ನ ತುಂಬಾ ಮುಖ್ಯ ಎಂದರು.

ಈ ಸಂದರ್ಭದಲ್ಲಿ ಶಿಕ್ಷಕರಾದ ಪ್ರಕಾಶ ಪವಾರ, ಸಾಗರ  ಗುಮಾಜಿ, ಶಶಿಕಾಂತ ಕಾಂಬಳೆ, ಹಾಗೂ ಪದ್ಮರಾಜ ಬಸ್ತವಾಡ, ಮಹಾಲಿಂಗ, ಬಾಪೂ ಸಾತಗೌಡ ಹಾಗೂ ಉಪಸ್ಥಿತರಿದ್ದರು.