ಲೋಕದರ್ಶನ ವರದಿ
ಮುಂಡಗೋಡ : ತಾಲೂಕ ಕ್ರೀಡಾಂಗಣದಲ್ಲಿ ನಡೆಯುವ ಕ್ರೀಡಾ ಚಟುವಟಿಕೆಗಳಿಂದಾಗಿ ಶಾಲಾ ಶೈಕ್ಷಣಿಕ ಚಟುವಟಿಕೆಗಳಿಗೆ ತೊಂದರೆಯಾಗುವುದಲ್ಲದೇ ಶಾಲಾ ಕಿಟಕಿಯ ಪಕ್ಕದಲ್ಲಿ ದೂಮಪಾನ ಮಾಡುವುದು ಹಾಗೂ ಹೆಣ್ಣು ಮಕ್ಕಳಿಗೆ ಚುಡಾಯಿಸುವ ಪ್ರಸಂಗವು ನಡೆಯುತ್ತಿರುವುದನ್ನು ತಪ್ಪಿಸುವಂತೆ ಆಗ್ರಹಿಸಿ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಡ ಶಾಲಾ ವಿಭಾಗದ ಶಿಕ್ಷಕರು ಹಾಗೂ ವಿದ್ಯಾಥರ್ಿಗಳು ಸಹಿ ಮಾಡಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಸರಕಾರಿ ಪದವಿ ಪೂರ್ವ ಕಾಲೇಜು ಪ್ರೌಡ ಶಾಲಾ ವಿಭಾಗದಲ್ಲಿ 16 ಜನ ಭೋದಕ ಸಿಬ್ಬಂದಿ ಇದ್ದು 8 ರಿಂದ 10ನೇ ತರಗತಿವರೆಗೆ 618 ವಿದ್ಯಾಥರ್ಿಗಳು ಅಧ್ಯಯನ ಮಾಡುತ್ತಿದ್ದಾರೆ. ಪ್ರತಿ ವರ್ಷ ಜನೇವರಿಯಿಂದ ಏಪ್ರೀಲ್ ಅವಧಿಯಲ್ಲಿ ನಮ್ಮ ಶಾಲೆಯ ಪಕ್ಕದಲ್ಲಿ ತಾಲೂಕಿನ ಕ್ರೀಡಾಂಗಣದಲ್ಲಿ ಕ್ರೀಡಾ ಚಟುವಟಿಕೆಗಳು ನಡೆಯುತ್ತವೆ. ಈ ಅವಧಿಯಲ್ಲಿ ಧ್ವನಿವರ್ದಕಗಳನ್ನು ಹೆಚ್ಚಾಗಿ ಬಳಸುವುದರಿಂದ ಅಧ್ಯಯನಕ್ಕೆ ತುಂಬಾ ತೊಂದರೆಯಾಗುತ್ತಿದೆ. ಹಾಗೂ ವಿದ್ಯಾಥರ್ಿಗಳ ಏಕಾಗ್ರತೆಗೆ ಭಂಗ ಉಂಟಾಗುತ್ತಿದೆ. ಇದರಿಂದ ಪರೀಕ್ಷೆಯ ಫಲಿತಾಂಶದ ವ್ಯತಿರಿಕ್ತ ಪರಿಣಾಮ ಬೀರುತ್ತಿರುವುದರಿಂದ ಇದನ್ನು ನಿರ್ಬಂದಿಸಲು ವಿನಂತಿಸಿದೆ.
ಅದೇ ರೀತಿ ಹೆಣ್ಣು ಮಕ್ಕಳಿಗೆ ಹಲವಾರು ಭಾರಿ ಚುಡಾಯಿಸುವ ಪ್ರಸಂಗ ನಡೆದಿದ್ದು, ಶಾಲೆಯ ಕಿಟಕಿ ಪಕ್ಕದಲ್ಲಿ ಧೂಮಪಾನ ಮಾಡುವ ಮೂಲಕವೂ ತೊಂದರೆ ಉಂಟಾಗುತ್ತದೆ. ಹಲವಾರು ಭಾರಿ ಮೌಖಿಕವಾಗಿ ತಿಳಿಸಿದರೂ ವಿದ್ಯಾಥರ್ಿಗಳ ಹಿತದೃಷ್ಠಿಯಿಂದ ಸಾರ್ವಜನಿಕರು ಸಹಕರಿಸದಿರುವುದರಿಂದ ಪರೀಕ್ಷಾ ಸಮಯವಾದ ಜನೇವರಿಯಿಂದ ಏಪ್ರೀಲ್ ಅವಧಿಯಲ್ಲಿ ಯಾವುದೇ ಟೋರ್ನಮೆಂಟ್ ಹಾಗೂ ಇತರೆ ಕ್ರೀಡಾ ಚಟುವಟಿಕೆಗಳನ್ನು ಅನುಮತಿ ನೀಡಬಾರದೆಂದು ಹಾಗೂ ಕೂಡಲೇ ದ್ವನಿವರ್ದಕವನ್ನು ಬಂದ್ದು ಮಾಡುವಂತೆ ಶಿಕ್ಷಕರು ಹಾಗೂ ವಿದ್ಯಾಥರ್ಿಗಳು ಸಹಿ ಮಾಡಿ ಜಿಲ್ಲಾಧಿಕಾರಿಗಳಿಗೆ, ಉಪವಿಭಾಗಾಧಿಕಾರಿ ಹಾಗೂ ತಹಶೀಲ್ದಾರ ರವರಿಗೆ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮನವಿಯಲ್ಲಿ ತಿಳಿಸಿದ್ದಾರೆ.