ಲೋಕದರ್ಶನ ವರದಿ
ಯಲ್ಲಾಪುರ, 14: ಕ್ರೀಡೆಯು ಮನಸ್ಸಿಗೆ ಸಂತೋಷ ಮತ್ತು ದೇಹಕ್ಕೆ ವ್ಯಾಮಾಮ ನೀಡಿ ಆರೋಗ್ಯಕರ ಜೀವನ ನಡೆಸಲು ಸಹಾಯಕಾರಿಯಾಗುತ್ತದೆ. ಮುಂದಿನ ದಿನಗಳಲ್ಲಿ ಇಂತಹ ಕ್ರೀಡಾಕೂಟಗಳು ಮಹಿಳೆಯರಿಗಾಗಿಯೂ ಆಯೋಜನೆಯಾಗಲಿ ಎಂದು ತಾಲೂಕಾ ಪಂಚಾಯತ್ ಅಧ್ಯಕ್ಷೆ ಭವ್ಯಾ ಶೆಟ್ಟಿ ಹೇಳಿದರು.
ಅವರು ರವಿವಾರ ಪಟ್ಟಣದ ಕಾಳಮ್ಮನಗರದ ತಾಲೂಕಾ ಕ್ರೀಡಾಂಗಣದಲ್ಲಿ ಭಾರತ ಸ್ಕೌಟ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆಯ ಆಶ್ರಯದಲ್ಲಿ ಗಣರಾಜ್ಯೋತ್ಸವದ ನಿಮಿತ್ತ ಆಯ್ದ ತಂಡಗಳಿಗೆ ಟೆನಿಸ್ ಬಾಲ್ ಕ್ರಿಕೇಟ್ ಪಂದ್ಯಾವಳಿಯನ್ನು ಉಧ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಹಸೀಲ್ದಾರ್ ಡಿ.ಜಿ.ಹೆಗಡೆ ಮಾತನಾಡಿ, ಇಂತಹ ಕ್ರೀಡಾಕೂಟವನ್ನು ಆಯೋಜಿಸಿರುವುದು ಶ್ಲಾಘನೀಯ. ಕ್ರೀಡೆಯು ನಮಗೆ ಜೀವನ ಪಾಠವನ್ನು ಕಲಿಸುತ್ತದೆ. ಕ್ರೀಡಾಳುಗಳು ಎಂದೂ ತಮ್ಮ ಜೀವನದಲ್ಲಿ ಸೋಲುವುದಿಲ್ಲ. ಕ್ರೀಡಾಸ್ಪೂತರ್ಿಯನ್ನು ಮೈಗೂಡಿಸಿಕೊಂಡವರು ಜೀವನದಲ್ಲಿ ಎದುರಾಗಬಹುದಾದ ಕಷ್ಟಗಳನ್ನು ಎದುರಿಸಲೂ ಸಶಕ್ತರಾಗುತ್ತಾರೆ. ಸ್ನೇಹ,ಸೌಹಾರ್ದತೆಯಿಂದ ಕ್ರೀಡಾಕೂಟದಲ್ಲಿ ಪಾಲ್ಗೊಂಡು, ನಿಣರ್ಾಯಕರ ನಿರ್ಣಯವನ್ನು ಗೌರವಿಸಬೇಕು. ಕ್ರೀಡೆಯಲ್ಲಿ ಹೆಚ್ಚಿನ ಸಾಧನೆ ಮಾಡುವ ಮೂಲಕ ಯಲ್ಲಾಪುರದ ಹಿರಿಮೆಯನ್ನು ಹೆಚ್ಚಿಸಬೇಕು ಎಂದರು.
ಇದೇ ಸಂದರ್ಭದಲ್ಲಿ ಹಿರಿಯ ಕ್ರಿಕೇಟ್ ಆಟಗಾರ ಮಹೇಶ ಯಲ್ಲಾಪುರಕರ್,ತಾಲೂಕಾ ಪಂಚಾಯತ್ ಸಹಾಯಕ ಲೆಕ್ಕಾಧಿಕಾರಿ ಎಂ.ಡಿ.ಮೋಹನ್, ಪಟ್ಟಣ ಪಂಚಾಯತ್ ನೀರು ಸರಬರಾಜು ಮೇಲ್ವಿಚಾರಕ ಸುರೇಶ ತುಳಸಿಕರ್,ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪೃಶಸ್ತಿ ಪುರಸ್ಕೃತ ಚಂದ್ರಶೇಖರ ಅವರನ್ನು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಸ್ಥಳೀಯ ಭಾರತ ಸ್ಕೌಟ್ ಮತ್ತು ಗೈಡ್ಸ್ ಕಮೀಶನರ್ ಬಾಲಕೃಷ್ಣ ನಾಯಕ, ಅಧ್ಯಕ್ಷ ನಂದನ ಬಾಳಗಿ, ಎಎಸ್ಐ ಲಮಾಣಿ, ತಾಲೂಕಾ ಕಾರ್ಯನಿರತ ಪತ್ರಕರ್ತರ ಸಂಘದ ಪದಾಧಿಕಾರಿಗಳಾದ ಪ್ರಭಾವತಿ ಗೋವಿ,ಜಿ.ಎನ್.ಭಟ್ ತಟ್ಟಿಗದ್ದೆ ಉಪಸ್ಥಿತರಿದ್ದರು. ಭಾರತ್ ಸ್ಕೌಟ್ ಮತ್ತು ಗೈಡ್ಸ್ ನ ಕಾರ್ಯದಶರ್ಿ ಸುಧಾಕರ ನಾಯಕ ಸ್ವಾಗತಿಸಿ, ನಿರ್ವಹಿಸಿದರು. ಮೊರಾಜರ್ಿಶಾಲೆಯ ಶಿಕ್ಷಕ ಮನೋಹರ ನಾಯಕ ವಂದಿಸಿದರು.ನಂತರ ನಡೆದ ಟೆನಿಸ್ ಬಾಲ್ ಕ್ರಿಕೇಟ್ ಪಂದ್ಯಾವಳಿಯಲ್ಲಿ ವಿವಿಧ ತಂಡಗಳು ಪಾಲ್ಗೊಂಡವು.