ನವದೆಹಲಿ 20: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಲಿಂಗಿಸಿ ಬಳಿಕ ಕಣ್ಣು ಹೊಡೆದ ವರ್ತನೆಗೆ ಸ್ಪೀಕರ್ ಸುಮಿತ್ರಾ ಮಹಾಜನ್ ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಪ್ರಧಾನಿಯವರಿಗೆ ಒಂದು ಗೌರವ ಇರುತ್ತದೆ. ಹೀಗಾಗಿ ಎಲ್ಲಾ ಸಂಸದರು ಸದನದ ನಿಯಗಳನ್ನು ಪಾಲಿಸಬೇಕು ರಾಹುಲ್ ಗಾಂಧಿಯ ವರ್ತನೆ ಸದನಕ್ಕೆ ತಕ್ಕುದಲ್ಲ ಎಂದು ಸ್ಪೀಕರ್ ಹೇಳಿದ್ದಾರೆ. ರಾಹುಲ್ ಗಾಂಧಿ ಅವರು ಆಲಿಂಗಿಸಿದ್ದಕ್ಕೆ ನನ್ನ ಆಕ್ಷೇಪ ಇಲ್ಲ. ಆದರೆ ಪ್ರತಿಪಕ್ಷದ ಸಂಸದರೊಬ್ಬರು ಕುಳಿತಿರುವ ಪ್ರಧಾನಿಯನ್ನು ಆಲಿಂಗಿಸಿದ್ದಲ್ಲದೆ ನಂತರ ಕಣ್ಣು ಹೊಡೆದ ರೀತಿ ಸರಿ ಇಲ್ಲ ಎಂದರು. ಮಲ್ಲಿಕಾಜರ್ುನ್ ಖಗರ್ೆ ಅವರು ಹಿರಿಯರು. ಸದನದ ನಿಯಮಗಳ ಬಗ್ಗೆ ಕಿರಿಯರಿಗೆ ಮಾರ್ಗದರ್ಶ ಮಾಡಬೇಕು ಎಂದು ಕಾಂಗ್ರೆಸ್ ಸಂಸದೀಯ ನಾಯಕರಿಗೂ ಸ್ಪೀಕರ್ ಸಲಹೆ ನೀಡಿದರು.
ರಾಹುಲ್ ಗಾಂಧಿ ಅವರು ತಮ್ಮ ಭಾಷಣ ಮುಗಿಯುತ್ತಿದ್ದಂತೆ ಪ್ರಧಾನಿ ಮೋದಿ ಬಳಿಗೆ ಹೋಗಿ ಅವರನ್ನು ಆಲಂಗಿಸಿಕೊಂಡಿದ್ದು ಸಂಸತ್ನಲ್ಲಿ ಎಲ್ಲರನ್ನೂ ಚಕಿತಗೊಳಿಸಿತು. ಬಳಿಕ ಕಣ್ಣು ಹೊಡೆಯುವ ಮೂಲಕ ಆಡಳಿತ ಪಕ್ಷದ ಕೆಂಗಣ್ಣಿಗೆ ಗುರಿಯಾಗಿದ್ದಾರೆ.