ಲೋಕದರ್ಶನ ವರದಿ
ಯಲ್ಲಾಪುರ 15:ಸಿದ್ದಿ ಸಮುದಾಯದ ಪುರಾತನ ಕಲಾಪ್ರಕಾರವಾದ ಈ ಬಯಲಾಟ ಪ್ರದರ್ಶನವು ಈಗ ಅಪರೂಪವಾಗುತ್ತಿದೆ. ಇಲ್ಲಿ ಈ ಪ್ರದರ್ಶನವನ್ನು ಏರ್ಪಡಿಸಿರುವುದು ಶ್ಲಾಘನೀಯ. ನಶಿಸುತ್ತಿರುವ ಇಂತಹ ಕಲೆಗಳನ್ನು ಉಳಿಸಿ,ಬೆಳೆಸುವ ಜವಾಭ್ದಾರಿ ನಮ್ಮೆಲ್ಲರ ಮೇಲಿದೆ ಎಂದು ತಾಲೂಕಾ ಪಂಚಾಯತ್ ಸದಸ್ಯ ನಾಗರಾಜ ಕವಡಿಕೆರೆ ಹೇಳಿದರು.ಅವರು ಬುಧವಾರ ರಾತ್ರಿ ಗೋವಾ-ಬೆಂಗಳೂರು ಹವ್ಯಕ ಬಳಗ ಹಾಗೂ ಮಿತ್ರ ವೃಂದ ಮಾಗೋಡ ಇವರ ಸಂಯುಕ್ತ ಆಶ್ರಯದಲ್ಲಿ ಮಾಗೋಡ ಕಾಲೋನಿಯಲ್ಲಿ ಸಂಗ್ಯಾ-ಬಾಳ್ಯಾ ಬಯಲಾಟ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದರು,
ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಜಿ.ಎನ್.ಭಟ್ ತಟ್ಟಿಗದ್ದೆ ಮಾತನಾಡಿ, ಆಧುನಿಕತೆಯ ಭರಾಟೆಯ ನಡುವೆ ಅನೇಕ ಸಾಂಪ್ರದಾಯಿಕ ಕಲೆಗಳು ಅಳಿವಿನ ಅಂಚಿನಲ್ಲಿವೆ. ಬುಡಕಟ್ಟು ಜನಾಂಗದವರ ಅನೇಕ ಅಮೂಲ್ಯ ಸಾಂಸ್ಕೃತಿಕ ಕಲೆಗಳು ನಶಿಸುತ್ತಿವೆ. ಇಂತಹ ಕಲೆಗಳ ಸಮಗ್ರ ದಾಖಲಿಕರಣ ಮಾಡುವ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ಪ್ರಯತ್ನ ನಡೆಯಬೇಕು ಎಂದರು.
ನಂದೊಳ್ಳಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಎಮ್.ಎನ್.ಭಟ್ಟ ಮಾತನಾಡಿ, ಜೀವನಾನುಭವದಿಂದ ಕೂಡಿದ ಇಂತಹ ಕಲಾ ಪ್ರಸ್ತುತಿಯನ್ನು ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಕೆಲಸ ಎಲ್ಲರಿಂದ ಆಗಬೇಕು ಎಂದರು.
. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪಿ.ಎಲ್.ಡಿ.ಬ್ಯಾಂಕ್ ಅಧ್ಯಕ್ಷ ಆರ್.ಎಸ್.ಭಟ್ಟ ,ತಾಲೂಕಾ ಮಾಕರ್ೇಟಿಂಗ್ ಸೊಸೈಟಿ ನಿದರ್ೇಶಕ ನರಸಿಂಹ ಕೋಣೆಮನೆ ಮಾತನಾಡಿದರು.ಇದೇ ಸಂದರ್ಭದಲ್ಲಿ ಬಯಲಾಟದ ಹಿರಿಯ ಕಲಾವಿದ ನಾಗಪ್ಪಾ ಸಿದ್ಧಿಯವರನ್ನು ಸನ್ಮಾನಿಸಲಾಯಿತು.ವೇದಿಕೆಯಲ್ಲಿ ಪ್ರಮುಖರಾದ ಕೃಷ್ಣ ಹೆಗಡೆ ಕುಳಿಮಾಗೋಡು, ಗಣೇಶ ಭಟ್ಟ ಚಂದಗುಳಿ,ಶ್ರೀಧರ ಹೆಗಡೆ, ರಾಮಚಂದ್ರ ಭಟ್ಟ ಕಿರುಕುಂಬತ್ತಿ, ವಿನಾಯಕ ಭಟ್ಟ ಗೋವಾ, ಮುಂತಾದವರು ಇದ್ದರು.
ನರಸಿಂಹ ಭಟ್ಟ ಕುಂಕಿಮನೆ ಸ್ವಾಗತಿಸಿ,ವಂದಿಸಿದರು. ವೆಂಕಟ್ರಮಣ ಭಟ್ಟ ಕಿರುಕುಂಭತ್ತಿ ನಿರೂಪಿಸಿದರು.
ಸಭಾ ಕಾರ್ಯಕ್ರಮದ ನಂತರ ವನಶ್ರೀ ಕಲಾಕೂಟ ಚಿಮ್ನಳ್ಳಿ ತಂಡದವರಿಂದ ನಡೆದ ಸಂಗ್ಯಾ-ಬಾಳ್ಯಾ ಬಯಲಾಟ ಪ್ರದರ್ಶನ ಪ್ರೇಕ್ಷಕರನ್ನು ರಂಜಿಸಿತು. ಹಿಮ್ಮೇಳದಲ್ಲಿ ಶಿವಾನಂದ ಸಿದ್ದಿ ಅಂಗಡಿಬೈಲ್, ಸಣ್ಣಾ ಸಿದ್ದಿ ಕಮ್ಮಾಣಿ, ಸುಬ್ರಾಯ ಸಿದ್ದಿ, ನಾರಾಯಣ ಸಿದ್ದಿ ಸಹಕರಿಸಿದರು. ಮುಮ್ಮೇಳದಲ್ಲಿ ನಾಗಪ್ಪಾ ಸಿದ್ದಿ ತೆಲಂಗಾರ್, ನಾರಾಯಣ ಸಿದ್ದಿ, ಕೃಷ್ಣ ಸಿದ್ದಿ, ವಿಶ್ವನಾಥ ಸಿದ್ದಿ, ನಾಗೇಂದ್ರ ಸಿದ್ದಿ, ಹರಿ ಸಿದ್ದಿ, ನಾರಾಯಣ ಸಿದ್ದಿ ಮಾಗೋಡು, ಮಂಜು ಪಟಗಾರ್ ಕುಮಟಾ, ವಿಶ್ವಾ ಸಿದ್ದಿ ಮುಂತಾದವರು ಇದ್ದರು.