ಮೂಡಲಗಿ 13: ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರು ಯಾವುದೇ ಒಂದು ಸಮುದಾಯ, ರಾಜಕೀಯ ಪಕ್ಷ, ಜಾತಿಗೆ ಸೇರಿದ ನಾಯಕರಲ್ಲ. ಅವರು ನಮ್ಮ ಭಾರತ ದೇಶವನ್ನು ಪ್ರತಿನಿಧಿಸಿದ ಸಾಂಸ್ಕೃತಿಕ ರಾಯಭಾರಿಯಾಗಿದ್ದರು. ಇತ್ತಿಚಿನ ದಿನಗಳಲ್ಲಿ ನವಭಾರತ ನಿಮರ್ಾಣದಲ್ಲಿ ಯುವಶಕ್ತಿಯ ಪಾತ್ರ ಅತ್ಯಂತ ಮಹತ್ವವಾದದ್ದು ನಮ್ಮ ದೇಶದ ಯುವ ಜನಾಂಗದ ಮೇಲೆ ಭಾರತ ದೇಶ ಮಾತ್ರವಲ್ಲದೇ ವಿಶ್ವವೇ ಸಾಕಷ್ಟು ನೀರಿಕ್ಷೆಗಳನ್ನು ಇಟ್ಟುಕೊಂಡಿದೆ ನವ ಪರಿವರ್ತನೆಯಲ್ಲಿ ಯುವಶಕ್ತಿ ಬಲಿಷ್ಠವಾಗಲಿ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಅಜೀತ ಮನ್ನಿಕೇರಿ ಹೇಳಿದರು.
ಅವರು ಸ್ಥಳೀಯ ಗಾರ್ಡನ್ ಅಭಿವೃದ್ದಿ ಸಂಸ್ಥೆ, ಯುವ ಜೀವನ ಸೇವಾ ಸಂಸ್ಥೆ, ಶ್ರೀ ಮಂಜುನಾಥ ಸೈನಿಕ ತರಭೇತಿ ಕೇಂದ್ರ, ಜೈ ಕನರ್ಾಟಕ ಅಂಗವಿಕಲರ ಗ್ರಾಮೀಣ ಅಭಿವೃದ್ದಿ ಸಂಘ, ನೆಹರು ಯುವ ಕೇಂದ್ರ ಬೆಳಗಾವಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಆರ್.ಡಿ.ಎಸ್. ಶಿಕ್ಷಣ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ಸ್ವಾಮಿ ವಿವೇಕಾನಂದರ 157ನೇ ಜಯಂತ್ಯೋತ್ಸವದ ಪ್ರಯುಕ್ತ ನಡೆದ ಭವ್ಯ ಶೋಭಯಾತ್ರೆಗೆ ಚಾಲನೆ ನೀಡಿ ಮಾತನಾಡಿದರು. ಗಾರ್ಡನ್ ಅಭಿವೃದ್ಧಿ ಸಂಸ್ಥೆಯ ಅಧ್ಯಕ್ಷ ಸುಧೀರ ನಾಯರ್ ಮಾತನಾಡಿ, ಸ್ವಾಮಿ ವಿವೇಕಾನಂದರು ದೇಶದ ಯುವ ಶಕ್ತಿಯನ್ನು ಇಡೀ ವಿಶ್ವಕ್ಕೆ ಪರಿಚಯಿಸಿಕೊಟ್ಟ ಮಹಾನ್ ಚೇತನ. ಇಂದು ಭಾರತದ ಯುವಶಕ್ತಿ ಪ್ರಪಂಚದ ಏಳ್ಗೆಗಾಗಿ ದುಡಿಯುತ್ತಿದೆ ಎಂದು ಹೇಳಿದರು.
ಆರ್.ಡಿ.ಎಸ್ ಕಾಲೇಜಿನ ಆವರಣದಲ್ಲಿ ಸ್ವಾಮಿ ವಿವೇಕಾನಂದರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಚಾಲನೆ ನೀಡಿದರು. ಶೋಭಯಾತ್ರೆಯೂ ಕಾಲೇಜ್ ರಸ್ತೆ, ಕಲ್ಮೇಶ್ವರ ವೃತ್ತ, ಚೆನ್ನಮ್ಮ ವೃತ್ತ, ಕರೇಮ್ಮ ವೃತ್ತ, ಬಾಜಿ ಮಾಕರ್ೆಟ್, ಸಂಗಪ್ಪಣ್ಣ ವೃತ್ತದ ಮೂಲಕ ಸಾಗಿತು. ಕೇಸರಿಮಯವಾಗಿ ಕಂಗೊಳಿಸುತ್ತಿದ್ದ ಶೋಭಯಾತ್ರೆಯಲ್ಲಿ ಮಂಜುನಾಥ ಸೈನಿಕ ತರಬೇತಿ ಕೇಂದ್ರ ಶಿಬಿರಾಥರ್ಿಗಳು, ಆರ್ಡಿಎಸ್ ಶಿಕ್ಷಣ ಸಂಸ್ಥೆಯ ವಿದ್ಯಾಥರ್ಿಗಳು ಹಾಗೂ ಅಂಗನವಾಡಿ ಕಾರ್ಯಕತರ್ೆಯರು ಪಾಲ್ಗೋಂಡು ಸ್ವಾಮಿ ವಿವೇಕಾನಂದರಿಗೆ ಜಯವಾಗಲಿ ಎಂಬ ಘೋಷವಾಕ್ಯವನ್ನು ಕೂಗುತ್ತ ಸಾಗಿದರು. ಶ್ರೀನಿವಾಸ ಶಾಲೆಯ ವಿದ್ಯಾಥರ್ಿ ಸಮರ್ಥ ಮೇದಾರ ಸ್ವಾಮಿ ವಿವೇಕಾನಂದರ ವೇಷಧಾರಿಯಾಗಿ ಎಲ್ಲರ ಗಮನ ಸೆಳೆದನು.
ಈ ಸಂದರ್ಭದಲ್ಲಿ ಗಾರ್ಡನ್ ಅಭಿವೃದ್ದಿ ಸಂಸ್ಥೆಯಿಂದ ಸಮಾಜ ಸೇವಕ ಯುವ ಜೀವನ ಸೇವಾ ಸಂಸ್ಥೆಯ ಅಧ್ಯಕ್ಷ ಈರಪ್ಪ ಢವಳೇಶ್ವರ ಅವರನ್ನು ಸನ್ಮಾನಿಸಲಾಯಿತು. ಮೆರವಣಿಗೆಯುದ್ದಕ್ಕೂ ಸ್ವಾಮಿ ವಿವೇಕಾನಂದರ ಭಾವಚಿತ್ರಕ್ಕೆ ದೇಶಭಕ್ತ ಭಾಂದವರು ಪುಷ್ಪವೃಷ್ಠಿಗೈದು ಗೌರವ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಮಂಜುನಾಥ ಸೈನಿಕ ತರಬೇತಿ ಕೇಂದ್ರದ ಸಂಸ್ಥಾಪಕ ಎಲ್.ವಾಯ್ ಅಡಿಹುಡಿ, ಪಿಎಸ್ಐ ಮಲ್ಲಿಕಾಜರ್ುನ ಸಿಂಧೂರ, ಆರ್.ಡಿ.ಎಸ್. ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಸಂತೋಷ ಪಾಶರ್ಿ, ಪ್ರಾಂಶುಪಾಲರಾದ ಶಿವಾನಂದ ಸತ್ತಿಗೇರಿ, ಗಾರ್ಡನ್ ಅಭಿವೃದ್ದಿ ಸಂಸ್ಥೆಯ ಕಾರ್ಯದಶರ್ಿ ಸುಭಾಸ ಗೊಡ್ಯಾಗೋಳ, ಅಂಗನವಾಡಿ ಮೇಲ್ವಿಚಾರಕಿ ಕಮಲ ಕನಶೆಟ್ಟಿ, ಪುರಸಭೆ ಸದಸ್ಯರಾದ ಶಿವಾನಂದ ಸಣ್ಣಕ್ಕಿ, ಹಣಮಂತ ಗುಡ್ಲಮನಿ, ಯಲ್ಲಪ್ಪ ಸಣ್ಣಕ್ಕಿ, ನವೀನ ಗಸ್ತಿ, ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ಸಿದ್ದಣ್ಣ ದುರದುಂಡಿ, ಸುಭಾಸ್ ಮಾಲೋಜಿ, ಸಾಗರ ಸಾಲಿಮಠ, ಗುರು ಗಂಗನ್ನವರ, ಭಗವಂತ ಉಪ್ಪಾರ, ರಾಜು ಭಜಂತ್ರಿ, ವಿನೋದ ಹೊಸಮನಿ, ಮಂಜು ಕಂಬಾರ, ಮಹಾಲಿಂಗ ಗೊಡ್ಯಾಗೋಳ, ಮಂಜುನಾಥ ಅಡಿಹುಡಿ, ಶ್ರೀಧರ ಸುಲ್ತಾನಪೂರ, ಮಂಜು ದಾಸರ, ಶಿವೂ ಮರಡಿ ಸೇರಿದಂತೆ ನೂರಾರು ದೇಶಭಕ್ತ ಬಾಂದವರು ಭಾಗವಹಿಸಿದ್ದರು.