ಲೋಕದರ್ಶನ ವರದಿ
ಮೂಡಲಗಿ 12: ನಮ್ಮ ದೇಶದ ಸದೃಢತೆಯಲ್ಲಿ ಇಂದಿನ ಯುವ ಜನತೆ ಪಾತ್ರ ಬಹುಮುಖ್ಯವಾದದ್ದು ಯುವಕರು ದೇಶಾಭಿಮಾನದ ಶಕ್ತಿ ಇಂದಿನ ದಿನಗಳಲ್ಲಿ ಮರೆತು ಅನ್ಯ ದೇಶಿಯ ಸಂಸ್ಕೃತಿ ಮತ್ತು ವಿದೇಶಿ ವ್ಯಾಮೋಹದಿಂದ ದೇಶದ ಬಗ್ಗೆ ಅಭಿಮಾನ ಕಡಿಮೆಯಾಗುತ್ತಿದ್ದು ಸ್ವಾಮಿವಿವೇಕಾನಂದರ ವಿವೇಕವಾಣಿಯ ಸಂದೇಶದಲ್ಲಿ ಯುವಶಕ್ತಿ ದೇಶದ ಅಮೂಲ್ಯ ಆಸ್ತಿ ಅದರ ಸದ್ಬಳಿಕೆ ಸರಿಯಾದ ಮಾರ್ಗದಲ್ಲಿ ನಡೆಯಬೇಕು ಇಂದು ಯುವಶಕ್ತಿ ದೇಶಿಯ ಸಂರಕ್ಷಣೆ ಮಾರ್ಗದಲ್ಲಿ ಮುನ್ನಡೆಯದೆ ದುರ್ಗಣಗಳ ದಾಸರಾಗಿ ಅಸಭ್ಯ ಮಾರ್ಗವನ್ನು ಅನುಸರಿಸಿ ತಮ್ಮನ್ನು ಹಾಳು ಮಾಡಿಕೊಳ್ಳುವುದು ಅಲ್ಲದೇ ದೇಶದ ಆಡಳಿತವನ್ನು ಸಹಿತ ಹಾಳು ಮಾಡುತ್ತಿದ್ದಾರೆ. ನಮ್ಮ ಯುವಕರು ದೇಶಾಭಿಮಾನದ ಪ್ರತೀಕವಾಗಿ ದೇಶ ನಿಮರ್ಾಣ ಗೋಳ್ಳುವುದು ಅವಶ್ಯವಿದೆ ಎಂದು ಮೂಡಲಗಿ ವಿಶ್ವೇಶ್ವರಯ್ಯ ಆಯ್.ಟಿ.ಆಯ್. ಕೇಂದ್ರದ ಪ್ರಾಚಾರ್ಯ ಚಿದಾನಂದ ಶೆಟ್ಟರ ಅಭಿಪ್ರಾಯ ಪಟ್ಟರು.
ಅವರು ಸ್ಥಳೀಯ ಆರ್. ಡಿ. ಸೊಸೈಟಿಯ ಸಮಾಜಕಾರ್ಯ ಪದವಿ ಮಹಾವಿದ್ಯಾಲಯದ ವಿದ್ಯಾಥರ್ಿಗಳ ವಾಷರ್ಿಕ ಎನ್ಎಸ್ಎಸ್. ಶಿಬಿರದ ಅತಿಥಿ ಉಪನ್ಯಾಸಕರಾಗಿ ಆಗಮಿಸಿ ಮಾತನಾಡಿ ನಮ್ಮ ಸಮುದಾಯದಲ್ಲಿ ಸಾಕಷ್ಟು ಯುವಕರಿದ್ದು ಸರಿಯಾದ ಮಾರ್ಗದರ್ಶನ ವಿಲ್ಲದೇ ದೇಶಾಭಿಮಾನದ ದೇಶದ ಸದೃಢತೆಯಲ್ಲಿ ತೊಡಗಿಕೊಳ್ಳುತ್ತಿಲ್ಲಾ ಅವರಿಗೆ ಸರಿಯಾದ ಮಾರ್ಗದರ್ಶನ ನೀಡುವಲ್ಲಿ ಎನ್ಎಸ್ಎಸ್. ಘಟಕಗಳು ಮಹತ್ವದ ಪಾತ್ರವಹಿಸುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜು ಪ್ರಾಚಾರ್ಯ ಸತ್ಯೆಪ್ಪಾ ಗೋಟುರೆ ವಹಿಸಿಕೊಂಡು ಮಾತನಾಡಿ ದೇಶ ನಮಗೇನು ಮಾಡಿದೆ ಎನ್ನುವ ಬದಲು ದೇಶಕ್ಕಾಗಿ ನಾವೂ ಎನು ಮಾಡಿದ್ದೇವೆ ಎಂಬುವದನ್ನು ಮನವರಿಕೆ ಮಾಡಿಕೊಂಡಾಗ ಮಾತ್ರ ಯುವಕರಲ್ಲಿ ದೇಶದ ಜಾಗೃತಿ ಭಾವನೆ ಬೆಳೆಯಲು ಸಾದ್ಯವಿದೆ ಎಂದರು.
ಕಾರ್ಯಕ್ರಮದಲ್ಲಿ, ಉಪನ್ಯಾಸಕರಾದ ರಾಜು ಪತ್ತಾರ, ಮುತ್ತಣ್ಣಾ ಒಡೆಯರ, ಪ್ರಶಾಂತ ಮಾವರಕರ, ಪ್ರಕಾಶ ಚೌಡಕಿ, ಸುನಂದಾ ಅಂಗಡಿ ಮತ್ತಿತರರು ಹಾಜರಿದ್ದರು.
ಸತ್ಯೇಪ್ಪಾ ಮುಗಳಖೋಡ ನಿರೂಪಿಸಿದರು ಎನ್.ಎಸ್.ಎಸ್. ಘಟಕಾಧಿಕಾರಿ ವಿ.ಡಿ.ಪೋದ್ದಾರ ಸ್ವಾಗತಿಸಿದರು. ಅನ್ನಪೂಣರ್ಾ ಕೊಂಕಣಿ ವಂದಿಸಿದರು.