ಬೀದಿ ನಾಟಕ ತಂಡಗಳ ಪಾತ್ರ ಅತೀ ಮುಖ್ಯ: ಎಸ್ ಶಿವಣ್ಣ

ಲೋಕದರ್ಶನ ವರದಿ

ಶಿರಹಟ್ಟಿ: ಇತ್ತೀಚಿನ ದಿನಮಾನಗಳಲ್ಲಿ ಯುವಕರು ದುಶ್ಚಟಕ್ಕೆ ಬಲಿಯಾಗಿ ತಮ್ಮ ಅಮೂಲ್ಯವಾದ ಜೀವನದ ಭವಿಷ್ಯವನ್ನೇ ಹಾಳು ಮಾಡಿಕೊಳ್ಳುವ ಸಮಯದಲ್ಲಿ ನಮ್ಮ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಯುವಕರಲ್ಲಿ ಅವರ ಮನಮುಟ್ಟುವ ರೀತಿಯಲ್ಲಿ ಅರಿವು ಮೂಡಿಸಲು ಶ್ರಮಿಸುತ್ತಿರುವ ಬೀದಿ ನಾಟಕ ತಂಡಗಳ ಪಾತ್ರ ಅತೀ ಮುಖ್ಯವಾಗಿದೆ ಎಂದು ಗ್ರಾಮಾಭಿವೃದ್ಧಿ ಯೋಜನೆಯ ಶಿರಹಟ್ಟಿ ವಲಯ ಅಧಿಕಾರಿ ಎಸ್ ಶಿವಣ್ಣ ಅಭಿಪ್ರಾಯ ಪಟ್ಟರು.

ಅವರು ಇತ್ತೀಚೆಗೆ ನಡೆದ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಶಿರಹಟ್ಟಿ-ಮುಂಡರಗಿ ಯೋಜನೆಯ ವತಿಯಿಂದ ಗಾಂಧೀ ಸ್ಮೃತಿ ಮತ್ತು ವ್ಯಸನ ಮುಕ್ತ ಸಮಾವೇಶ ಕಾರ್ಯಕ್ರಮದ ನೇತೃತ್ವವಹಿಸಿ ಮಾತನಾಡಿದರು. 

ಈ ಕಾರ್ಯಕ್ರಮವನ್ನು ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಗದಗ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರುಗಳ ಸಂಯುಕ್ತಾಶ್ರಯದಲ್ಲಿ ನಡೆದ ಈ ಕಾರ್ಯಕ್ರಮವು ಸಮಾಜದಲ್ಲಿ ತಲೆ ದೋರಿದ ದುಶ್ಚಟಗಳಿಂದ ಆಗುವ ಪರಿಣಾಮಗಳ ಬಗ್ಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಬೀದಿನಾಟಕಗಳ ಮೂಲಕ ಜನರಲ್ಲಿ ಅರಿವು ಮೂಡಿಸಲು ಶ್ರಮಿಸುತ್ತಿದ್ದು ಶ್ಲಾಘನೀಯವಾಗಿದ್ದು, ಈ ಅರಿವು ಕಾರ್ಯಕ್ರಮಗಳನ್ನು ಸಮಾಜದಲ್ಲಿನ ಜನರ ಮನ ಮುಟ್ಟುವ ರೀತಿಯಲ್ಲಿ ಬೀದಿ ನಾಟಕಗಳ ಮೂಲಕ ಜಿಲ್ಲೆಯ ಕೊಣ್ಣುರಿನ ಕಲಾ ತಂಡದ ಕಸ್ತೂರಿ ಬಳಿಗಾರ, ಹಾಗೂ ಮಹಿಳಾ ಡೊಳ್ಳು ಕುಣಿತದ ಸಂಗಡಿಗರು ಮತ್ತು ವೀರಭದ್ರೇಶ್ವರ ವೀರಗಾಸೆ ಮೇಳ ಬೆಟಗೇರಿ ತಂಡಗಳು ಸ್ಥಳೀಯ ಭಾಷೆಗಳ ಮೂಲಕ ನಾಟಕ ಪ್ರದರ್ಶನ ನಡೆಯಿತು. 

ಈ ಸಂದರ್ಭದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧೀ ಯೋಜನೆಯ ಎಸ್ ಶಿವಣ್ಣ ನೇತೃತ್ವ ವಹಿಸಿ ತಮ್ಮ ಯೋಜನೆಯ ಎಲ್ಲ ಕಾರ್ಯಕರ್ತರೊಂದಿಗೆ ಪ್ರತೀ ಹಳ್ಳಿಗಳಲ್ಲಿ ಸಂಚರಿಸಿ ಜನರಲ್ಲಿ ಅರಿವು ಮೂಡಿಸಲಾಯಿತು.