ದೇಶಕ್ಕೆ ಸದೃಢ ಯುವಕರೆ ಸಂಪತ್ತು: ಕೋಟಗಿ

ಲೋಕದರ್ಶನ ವರದಿ

ಸಂಕೇಶ್ವರ 08: ಭಾರತ ಸರಕಾರದ ನೆಹರು ಯುವ ಕೇಂದ್ರ, ಬೆಳಗಾವಿ ಹಾಗೂ ಜೈ ಹನುಮಾನ ಯುವಕ ಸಂಘ ನಿವರ್ಾನಟ್ಟಿ ಮತ್ತು ಎಸ್.ಡಿ.ವ್ಹಿ.ಎಸ್ ಸಂಘದ ಎಸ್.ಎಸ್ ಕಲಾ ಮತ್ತು ಟಿ.ಪಿ ವಿಜ್ಞಾನ ಮಹಾವಿದ್ಯಾಲಯ ಸಂಕೇಶ್ವರ ಇವರುಗಳ ಸಂಯುಕ್ತ ಆಶ್ರಯದಲ್ಲಿ ದಿ. 07-03-2019ರಂದು ಮದ್ಯಾಹ್ನ 2.00 ಘಂಟೆಗೆ ಎಸ್.ಡಿ.ವ್ಹಿ.ಎಸ್ ಸಂಘ ಸಂಕೇಶ್ವರ ಸಭಾಭವನದಲ್ಲಿ ಸಂಕಲ್ಪದಿಂದ ಸಿದ್ಧಿ- ಯುವ ಸಬಲೀಕರಣ ಕಾರ್ಯಕ್ರಮ 2018-19 ಮತ್ತು ಮತದಾನ ಜಾಗೃತಿ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.

ಇಂದಿನ ಆಧುನಿಕ ತಂತ್ರಜ್ಞಾನದಲ್ಲಿ ದೇಶಗಳು ಅತೀವ ಪೈಪೋಟಿಯಿಂದ ಸಾಗುತ್ತಿವೆ. ಹೀಗೆ ಅಭಿವೃದ್ಧಿ ಹೊಂದಲು ಆ ದೇಶದ ಯುವ ಸಮುದಾಯದ ಪಾತ್ರ ಅತೀ ಮಹತ್ವದ್ದಾಗಿದೆ. ಆದ್ದರಿಂದ ಅಭಿವೃದ್ಧಿ ಹೊಂದುತ್ತಿರುವ ಮಾದರಿ ದೇಶಗಳಿಗೆ ಸದೃಡ ಯುವಕರೇ ನಿಜವಾದ ಸಂಪತ್ತು ಆಗಿದ್ದಾರೆ ಎಂದು ಜಿ. ಸಿ. ಕೋಟಗಿ ಅಭಿಪ್ರಾಯ ಪಟ್ಟರು. ಅವರು ಸ್ಥಳೀಯ ಎಸ್. ಡಿ. ವ್ಹಿ. ಎಸ್. ಸಂಘದ ಎಸ್. ಎಸ್. ಕಲಾ ಹಾಗೂ ಟಿ. ಪಿ. ವಿಜ್ಞಾನ ಮಹಾವಿದ್ಯಾಲಯ ಮತ್ತು ನೆಹರು ಯುವ ಕೇಂದ್ರ ಬೆಳಗಾವಿ ಇವರ ಆಶ್ರಯದಲ್ಲಿ ಹಮ್ಮಿಕೊಂಡಂತಹ ಸಂಕಲ್ಪ ಸಿದ್ದಿ ಕಾರ್ಯಕ್ರಮ  ಯುವ ಸಬಲೀಕರಣ ಹಾಗೂ ಮತದಾನ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಮಾನವ ಸಂಪನ್ಮೂಲಗಳು ಸಮರ್ಪಕವಾದ ರೀತಿಯಲ್ಲಿ ಬಳಕೆಗೊಂಡರೆ ಅಂತಹ ದೇಶಗಳು ಎಲ್ಲ ಕ್ಷೇತ್ರಗಳಲ್ಲಿಯೂ ಮೊದಲ ಸ್ಥಾನದಲ್ಲಿಯೆ ನಿಲ್ಲುತ್ತವೆ. ಅಂತಹ ದೇಶಗಳಲ್ಲಿನ ಯುವ ಪಡೆ ತಾಂತ್ರಿಕವಾಗಿ ಶೈಕ್ಷಣಿಕವಾಗಿ, ವಿಶೇಷ ಕೌಶಲ್ಯ ಪರಿಣಿತಿಯಿಂದ ತಮ್ಮದೇ ಆದ ಜ್ಞಾನವನ್ನು ತೊರ್ಪಡಿಸುವ ಮೂಲಕ ಇತರೆ ಜಗತ್ತಿಗೆ ಎಲ್ಲ ರೀತಿಯ ಸವಾಲುಗಳನ್ನ ಒಡ್ಡುತ್ತಲೇ ತನ್ನ ದೇಶವನ್ನ ಬಲಿಷ್ಠ ಮತ್ತು ಬಲಾಡ್ಯಗೊಳಿಸಲು ಶಕ್ತವಾಗುತ್ತದೆ. ಅಂತಹ ಕೌಶಲ್ಯಗಳ ಜ್ಞಾನ ಇಂದಿನ ಭಾರತಕ್ಕೆ ಹಾಗೂ ಯುವ ಸಮುದಾಯಕ್ಕೆ ಅತ್ಯಂತ ಅವಶ್ಯಕವಾಗಿದೆ ಎಂದು ಹೇಳಿದರು.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಶ್ರೀ. ಆರ್. ಆರ್. ಮುತಾಲಿಕದೇಸಾಯಿ ಲೇಖಪಾಲಕರು ನೆಹರು ಯುವಕೇಂದ್ರ ಬೆಳಗಾವಿ ಇವರು ಮಾತನಾಡುತ್ತ ಬದಲಾವಣೆಗೆ ತಕ್ಕಂತೆ ಸರಕಾರಗಳು ಯುವ ಸಮುದಾಯವನ್ನು ಕೇಂದ್ರವಾಗಿಟ್ಟುಕೊಂಡು ಹೊಸ ಹೊಸ ಆವಿಷ್ಕಾರಗಳನ್ನು ರೂಪಿಸುತ್ತಲೇ ನಡೆದಿವೆೆ. ಯುವಕರು ತಮ್ಮ ಸ್ವಂತ ಬಲದಿಂದ ಬದುಕು ಸಾಗಿಸಲಿಕ್ಕೆ ತಾವೇ ಒಂದು ಉದ್ಯೋಗದ ದಾರಿ ಕಂಡುಕೊಂಡು ಯಶಸ್ಸು ಸಾಧಿಸಲು ಕಂಕಣಬದ್ಧರಾಗಬೇಕಾಗಿದೆ. ಒಂದು ವರ್ಷದ ಮಟ್ಟಿಗೆ ಹಲವಾರು ಡಿಪ್ಲೋಮಾ ಕೋರ್ಸಗಳು ಅಧ್ಯಯನಕ್ಕಿವೆ. ಉದಾಹರಣೆಗೆ ಹೋಟೆಲ ನಿರ್ವಹಣೆ, ಒಳನಾಡು ಬಂದರು, ಸೌಂದರ್ಯವರ್ಧಕ ಕೋರ್ಸ, ಭಾಷಾಂತರ ಪುರಾತತ್ವ ಇಲಾಖೆಯಲ್ಲಿ ಸಾಕಷ್ಟು ಅವಕಾಶಗಳಿವೆ. ವಿದ್ಯಾಥರ್ಿಗಳು ಅವುಗಳತ್ತ ಗಮನಹರಿಸಬೇಕಾಗಿದೆ. ಹೀಗಾದರೆ ಸಮರ್ಥವಾದ ದೇಶಕ್ಕೆ ಸಮರ್ಥ ನಾಯಕನಿದ್ದರೆ ಅಂತಹ ದೇಶದ ಯುವಕರು ಮಾನಸಿಕ ಹಾಗೂ ದೈಹಿಕವಾಗಿ ಸದೃಢರಾಗುತ್ತಾರೆ. ಗುಣಮಟ್ಟದ ಹಾಗೂ ಗಟ್ಟಿಯಾದ ಪ್ರಜಾ ಪ್ರಭುತ್ವ ಅಸ್ತಿತ್ವಕ್ಕೆ ಬೆಲೆ ಬರಬೇಕಾದರೆ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಮತದಾನದಲ್ಲಿ ಪಾಲ್ಗೋಳ್ಳುವುದು ಕಡ್ಡಾಯ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹಾವಿದ್ಯಾಲಯದ ಪ್ರಭಾರಿ ಪ್ರಾಚಾರ್ಯರಾದ ಡಾ. ಪಿ. ಎಸ್. ಮನ್ನೋಳಿ ವಹಿಸಿದ್ದರು. ಅವರು ಮಾತನಾಡುತ್ತ ಇಂದಿನ ವಿದ್ಯಾಥರ್ಿಗಳು ತಮ್ಮಲ್ಲಿ ಸಾಕಷ್ಟು ಸಾಮಥ್ರ್ಯವಿದ್ದರೂ ಅದನ್ನು ಸಮರ್ಪಕ ರೀತಿಯಲ್ಲಿ ಬಳಸಿಕೊಳ್ಳುತ್ತಿಲ್ಲ. ಸರಕಾರಗಳು ನಿಮಗಾಗಿ ನೀಡುತ್ತಿರುವ ಸವಲತ್ತುಗಳನ್ನು ಬಳಸಿಕೊಂಡು ಉತ್ತಮ ಬದುಕು ಕಟ್ಟಿಕೊಳ್ಳಿ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಪ್ರೊ. ಬಿ. ಜಿ. ಪಾಟೀಲ, ಡಾ. ವ್ಹಿ. ಡಿ. ನಾಗನೂರಿ. ಪ್ರೊ. ಪಿ. ಬಿ. ಬುಜರ್ಿ, ಮುಂತಾದವರು ಉಪಸ್ಥಿತರಿದ್ದರು. ಪ್ರೊ. ಎಮ್. ಎಸ್. ಖರಾಡಿಯವರು ಸರ್ವರನ್ನು ಕಾರ್ಯಕ್ರಮಕ್ಕೆ ಸ್ವಾಗತಿಸಿದರು. ಪ್ರೊ. ಜಿ. ಡಿ. ಕಡಲಗಿ ವಂದಿಸಿದರು ಕುಮಾರಿ. ಸರಿತಾ ಪಾಟೀಲ ನಿರೂಪಿಸಿದರು.