ಉಗಾರ ಖುರ್ದ-ಉಗಾರ ಬುದ್ರುಕ ಮಧ್ಯ ಸಂಚಾರ ಸೇವೆ ಕಡಿತ

ಉಗಾರ ಖುರ್ದ-ಉಗಾರ ಬುದ್ರುಕ ಗ್ರಾಮಗಳ ಮಧ್ಯದಲ್ಲಿ ನದಿಯ ಹಿನ್ನೀರು ಬಂದಿದ್ದರಿಂದ ಸಂಚಾರ ಸೇವೆಗೆ ತೊಂದರೆಯಾಗುತ್ತಿದೆ


ಕಾಗವಾಡ 20: ಕಾಗವಾಡ ತಾಲೂಕಿನ ಉಗಾರ ಖುರ್ದ-ಉಗಾರ ಬುದ್ರುಕ ಮಧ್ಯದಲ್ಲಿ ಚಿಕ್ಕೋಡಿ ಸಂಸದ ಸದಸ್ಯ ಪ್ರಕಾಶ ಹುಕ್ಕೇರಿ ಅವರ ಸಂಸದರ ನಿಧಿಯಿಂದ 5 ಕೋಟಿ ರೂ. ವೆಚ್ಚಮಾಡಿ ಸೇತುವೆ ನಿಮರ್ಿಸಿದರು. ಕಾಮಗಾರಿ ಪೂರ್ಣಗೊಳಿಸದೆ ಇದಿದ್ದರಿಂದ, ಕೃಷ್ಣಾ ನದಿಗೆ ಬಂದಿರುವ ಮಹಾಪುರದ ಹಿನ್ನೀರಿನಿಂದ ಎರಡು ಗ್ರಾಮಗಳ ಮಧ್ಯ ನೀರು ತುಂಬಿದ್ದರಿಂದ, ಸಂಚಾರ ಸೇವೆ ಕಡಿತಗೊಂಡಿದೆ. 

ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದ ಕೃಷ್ಣಾ ನದಿಗೆ ಮಹಾಪೂರ ಬಂದಿದ್ದು, ಈಗಾಗಲೇ ಉಗಾರ-ಕುಡಚಿ ಮಧ್ಯದ ಸೇತುವೆ ನೀರಿನಲ್ಲಿ ಮುಳಗಿದೆ. ಸೇತುವೆ ಮೇಲಿಂದ 7 ಅಡಿ ನೀರು ಹರಿದು ಹೋಗುತ್ತಿದೆ. ನದಿಯ ಹಿನ್ನೀರು ಉಗಾರ ಗ್ರಾಮದ ರಸ್ತೆ ಮೇಲೆ ತುಂಬಿದೆ. ಇದರಿಂದ ಎರಡು ಗ್ರಾಮಗಳ ದಿನನಿತ್ಯದ ಸಂಚಾರ ಸೇವೆ ಕಡಿತಗೊಂಡಿದೆ. 

ಸಂಸದ ಸದಸ್ಯ ಪ್ರಕಾಶ ಹುಕ್ಕೇರಿ ಇವರು 5 ಕೋಟಿ ರೂ. ವೆಚ್ಚಮಾಡಿ ಉಗಾರದ ಸೇತುವೆ ನಿಮರ್ಿಸಿದ್ದರೂ ಸೇತುವೆ ಎರಡು ದಡಗಳು ಯೆತ್ತರಿಸದೆ ಇದ್ದಿದ್ದರಿಂದ, ತೆಗ್ಗು ಪ್ರದೇಶದಲ್ಲಿ ಹಿನ್ನೀರು ತುಂಬಿದೆ. ಇದರಿಂದ ಸಂಚಾರ ಸೇವೆ ಕಡಿತಗೊಂಡಿದೆ. ಶೀಘ್ರದಲ್ಲಿ ಸಂಸದರು ಸೇತುವೆ ಉಳಿದ ಕಾಮಗಾರಿ ಪೂರ್ಣಗೊಳಿಸಲು ಆದೇಶಿಸಬೇಕು ಮತ್ತು ಪ್ರತಿ ವರ್ಷ ಮಳೆಗಾಲದಲ್ಲಿ ಆಗುತ್ತಿರುವ ಈ ತೊಂದರೆಯಿಂದ, ಪ್ರಯಾಣಿಕರಿಗೆ ನೆಮ್ಮದಿ ನೀಡಬೇಕೆಂದು ಸುರೇಶ ವಾಘಮೋಡೆಯೊಂದಿಗೆ ಇನ್ನೂಳಿದ ಪ್ರಯಾಣಿಕರು, ವಾಹನದಾರರು ಆಗ್ರಹಿಸಿದ್ದಾರೆ.