ಲೋಕದರ್ಶನ ವರದಿ
ಇಂಡಿ 24: ರಾಯಚೂರ ಜಿಲ್ಲೆ ಮಾನವಿ ತಾಲೂಕಿನ ಚಿಕಲಪವರ್ಿ ಗ್ರಾಮದ ಗ್ರಾಮ ಲೆಕ್ಕಾಧಿಕಾರಿ ಸಾಹೇಬ ಪಟೇಲ ಇವರ ಮೇಲೆ ಅಕ್ರಮ ಮರಳು ಸಾಗಿಸುತ್ತಿದ್ದ ಟಿಪ್ಪರ ಹಾಯಿಸಿ ಕೊಲೆ ಗೈದಿರುವ ಕ್ರಮ ಖಂಡಿಸಿ ಇಂಡಿ ತಾಲೂಕಿನ ಕಂದಾಯ ಇಲಾಖೆ ಗ್ರಾಮ ಲೆಕ್ಕಾಧಿಕಾರಿಗಳ ನೌಕರರ ಸಂಘದ ವತಿಯಿಂದ ತಹಶೀಲ್ದಾರ ಸಿದ್ದು ಭೋಸಗಿ ಇವರಿಗೆ ಮನವಿ ಸಲ್ಲಿಸಿದರು.
ಈ ಸಂಧರ್ಭದಲ್ಲಿ ಗ್ರಾಮ ಲೆಕ್ಕಾಧಿಕಾರಿ ತಾಲೂಕಾ ಅಧ್ಯಕ್ಷ ಶ್ರೀನಿವಾಸ ಹುನಗುಂದ ಮಾತನಾಡಿ ರಾಯಚೂರ ಜಿಲ್ಲೆ ಮಾನ್ವೀ ತಾಲೂಕಿನ ಚಿಕಪರ್ಲ ಗ್ರಾಮದ ಗ್ರಾಮ ಲರಕ್ಕಾಧಿಕರಿ ಸರಕಾರದ ಕೆಲಸ ದೇವರ ಕೆಲಸ ಎಂದು ಅಕ್ರಮವಾಗಿ ಮರಳು ಸಾಗಿಸುತ್ತಿದ ಟಿಪ್ಪರ ತಡೆಗಟ್ಟಲು ಹೋದಾಗ ಟಿಪ್ಪರ ಚಾಲಕ ಏಕಾ ಏಕಿ ಸರಕರಿ ನೌಕರರ ಮೇಲೆ ಟಿಪ್ಪ ಹರಿಸಿ ಕೊಲೆ ಮಾಡಿರುವದರಿಂದ ಇಂದು ಇಡೀ ರಾಜ್ಯದ ಗ್ರಾಮ ಲೆಕ್ಕಾಧಿಕಾರಿಗಳಿಗೆ ಭಯ ಹುಟ್ಟಿಸಿದೆ.
ಅಕ್ರಮ ಸ್ಪರೀಟ್, ಮ್ಯಾಗನಿಸ್, ಅರಣ್ಯ ಉತ್ಪನಗಳು ಸಾಗಾಣಿಕೆ ಸಹಕರಿಸದೆ ತಡೆಗಾಗಿ ಕರ್ತವ್ಯ ನಿರ್ವಹಿಸಿ ಪ್ರಮಾಣಿಕತೆಯಿಂದ ಕೆಲಸ ನಿರ್ವಹಿಸುತ್ತಿದ ಅಧಿಕಾರಿಗೆ ಕೊಲೆ ಗೈದಿರುವದರ ಹಿಂದೆ ಯಾವುದೂ ಒಂದು ಶಕ್ತಿ ಇರಬಹುದು. ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿಯೂ ಸಹಿತ ಇಂತಹ ಅನಾಹುತಗಳು ನಡೆದಿವೆ. ಈ ಪ್ರಕರಣ ಗಂಭಿರವಾಗಿ ಪರಿಗಣಿಸಿ ಸಿ.ಓಡಿ ತನಿಖೆಯನ್ನು ಮಾಡಬೇಕು. ಸ್ಥಳಿಯ ಪೊಲೀಸ್ ಇಲಾಖೆಗೆ ತನೀಖೆ ಮಾಡಿಸಿದರೆ ರಾಜಕೀಯ ಪ್ರಭಾವದಿಂದ ತಿಳಿಗೊಳಿಸುವ ಸಾಧ್ಯತೆ ಇದೆ.
ವೀರ ಮರಣ ಹೊಂದಿದ ಸಾಹೇಬ ಪಟೇಲ್ ಇವರ ಕುಟುಂಬಕ್ಕೆ ಸೂಕ್ತ ಉದ್ಯೋಗ ನೀಡಬೇಕು ಅಲ್ಲಿಯವರೆಗೆ ಪರಿಹಾರ ನೀಡಬೇಕು . ಜಿಲ್ಲೆಯ ಅಧಿಕಾರಿ ನೌಕರರಿಗೆ ಭಯದ ವಾತಾವರಣ ನಿಮರ್ಾಣವಾಗಿದ್ದು ಸೂಕ್ತ ಭದ್ರತೆ ಒದಗಿಸಬೇಕು ಎಂದು ಸರಕಾರಕ್ಕೆ ಆಗ್ರಹಿಸಿದರು.
ಕನರ್ಾಟಕ ರಾಜ್ಯ ನೌಕರರ ಸಂಘದ ತಾಲೂಕಾ ಅಧ್ಯಕ್ಷ ಬಸವರಾಜ ರಾವೂರ,ಕಂದಾಯ ನೌಕರರ ಸಂಘದ ಅಧ್ಯಕ್ಷ ಆರ್.ಬಿ ಮುರಗಿ, ಪಿ. ಜೆ.ಕೊಡಹೋನ್ನ, ಶಂಕರ ಕಲಕೇರಿ, ಸಂತೋಷ ಹಿರೇಬೆವನೂರ, ಎಸ್.ಎಸ್.ಪೂಜಾರಿ, ಪ್ರಕಾಶ ಚವುಡಿಹಾಳ, ಶ್ರೀಕಾಂತ ಪೂಜಾರಿ, ಶ್ರೀಪಾದ ಪೂಜಾರಿ, ಮುಜಗೊಂಡ, ಸಂತೋಷ ಹೊಟಗಾರ, ಗ್ರಾಮ ಲೆಕ್ಕಾಧಿಕಾರಿಗಳ ತಾಲೂಕಾ ಉಪಾಧ್ಯಕ್ಷ ಪರಮಾನಂದ ಹೂಗಾರ ಸೇರಿದಂತೆ ಎಲ್ಲಾ ಕಂದಾಯ ನೌಕರರು ಇದ್ದರು.