ಭಗವಾನ ಮಹಾವೀರ ತತ್ವಗಳು ಇಂದಿಗೂ ಪ್ರಸ್ತುತ : ಕೆ.ಕೆ.ತ್ರೀಪಾಠಿ

ಬೆಳಗಾವಿ.ಏ.17: ಭಗವಾನ ಮಹಾವೀರರು ಉಪದೇಶಿಸಿದ ಅಹಿಂಸೆಯ ತತ್ವಗಳು ಇಂದಿನ ಆಧುನಿಕ ಜೀವನದಲ್ಲಿಯೂ ಪ್ರಸ್ತುತ್ತವಾಗಿದೆ ಎಂದು ಆದಾಯ ತೆರಿಗೆ ಇಲಾಖೆಯ ನಿವೃತ್ತ ಮುಖ್ಯ ಆಯುಕ್ತರು ಮತ್ತು ತನಿಖಾ ವಿಭಾಗದ ನಿವೃತ್ತ ನಿದರ್ೇಶಕರಾದ ಕಮಲಾಕಾಂತ ಕೆ.ತ್ರೀಪಾಠಿ ಅವರು ಇಂದಿಲ್ಲಿ ಹೇಳಿದರು. 

ಬೆಳಗಾವಿಯ ಸಮಾದೇವಿ  ಗಲ್ಲಿಯಲ್ಲಿಂದು ಭಗವಾನ ಮಹಾವೀರ ಜನ್ಮ ಕಲ್ಯಾಣ ಮಹೋತ್ಸವದ ಅಂಗವಾಗಿ  ಹಮ್ಮಿಕೊಳ್ಳಲಾದ  ಶೋಭಾಯಾತ್ರೆಯ ಉದ್ಘಾಟನಾ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿದ ಅವರು, ಭಗವಾನ ಮಹಾವೀರರು 2618 ವರ್ಷಗಳ ಹಿಂದೇಯೆ ಅಂಹಿಸೆಯನ್ನು ಪ್ರತಿಪಾದಿಸಿದ್ದಾರೆ. ಅವರ ಅನುಯಾಯಿಗಳಾದ ನಾವುಗಳು ಭಗವಾನರ ತತ್ವಗಳನ್ನು ಇಂದಿಗೂ ಪಾಲಿಸುತ್ತಿದ್ದೇವೆ .ಇದರಿಂದ ಮಹಾವೀರ ತತ್ವಗಳು ಇಂದಿಗೂ ಪ್ರಸ್ತೂತವಾಗಿವೆ ಎಂದು ಹೇಳಬಹುದು. 

ಭಗವಾನ ಮಹಾವೀರರು  ತಮ್ಮ ಉಪದೇಶವನ್ನು ಮತ್ತು ತತ್ವಗಳನ್ನು ಜೈನರಿಗೆ ಮಾತ್ರ ಹೇಳಿ ಕೊಡಲಿಲ್ಲ. ಸಮಸ್ತ ಮಾನವರ ಕಲ್ಯಾಣಕ್ಕಾಗಿ ಉಪದೇಶ ಮತ್ತು ತತ್ವಗಳನ್ನು ಹೇಳಿದ್ದಾರೆ. ಭಗವಾನ ಮಹಾವೀರರ ತತ್ವಗಳನ್ನು ನಾವೆಲ್ಲರೂ ಪಾಲಿಸಬೇಕಾಗಿದೆ. ಇದರಿಂದ ವಿಶ್ವದಲ್ಲಿ ಶಾಂತಿ ನೆಮ್ಮದಿ ಉಂಟಾಗಲಿದ್ದು, ಎಲ್ಲರೂ  ಭಗವಾನ ಮಹಾವೀರರು ತೋರಿದ ಸನ್ಮಾರ್ಗದಲ್ಲಿ ನಡೆಯೋಣ ಎಂದು ಅವರು ಹೇಳಿದರು. 

ಉದ್ಯಮಿ  ಪುಷ್ಪದಂತ ದೊಡ್ಡಣ್ಣವರ ಸಮಾರಂಭವನ್ನು ಉದ್ಘಾಟಿಸಿದರು.ಸಮಾರಂಭದ ವೇದಿಕೆ ಮೇಲೆ ರಾಜ್ಯಸಭಾ ಸದಸ್ಯ ಡಾ. ಪ್ರಭಾಕರ ಕೋರೆ, ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ, ಶಾಸಕರಾದ ಅನಿಲ ಬೆನಕೆ, ಅಭಯ ಪಾಟೀಲ, ಮಾಜಿ ಶಾಸಕ ಸಂಜಯ ಪಾಟೀಲ,ಭಗವಾನ ಮಹಾವೀರ ಜನ್ಮ ಕಲ್ಯಾಣಕ ಮಹೋತ್ಸವ ಸಮಿತಿ ಕಾಯರ್ಾಧ್ಯಕ್ಷ ರಾಜೀವ ದೊಡ್ಡಣ್ಣವರ , ಸೇವಂತಿಭಾಯಿ ಶಹಾ, ಎಂ,.ಬಿ.ಝೀರಲಿ,  ಹೀರಾಚಂದ ಕಲಮನಿ  ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು. 

ಜನ್ಮ ಕಲ್ಯಾಣಕ ಮಹೋತ್ಸವ ಸಮಿತಿಯ ಗೌರವ ಕಾಯರ್ಾಧ್ಯಕ್ಷ ರಾಜೇಂದ್ರ  ಜೈನ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಅತಿಥಿಗಳನ್ನು ಸ್ವಾಗತಿಸಿದರು. ಇದೇ ಸಂದರ್ಭದಲ್ಲಿ  ಭಗವಾನ ಮಹಾವೀರ ಜನ್ಮ ಕಲ್ಯಾಣಕ ಮಹೋತ್ಸವದ ಅಂಗವಾಗಿ ಪ್ರಕಟಿಸಲಾದ ಹಳ್ಳಿಯ ಸಂದೇಶ ಕನ್ನಡ ದಿನಪತ್ರಿಕೆ ವಿಶೇಷ ಸಂಚಿಕೆಯನ್ನು ಗಣ್ಯರು ಬಿಡುಗಡೆ ಮಾಡಿದರು. ನಮಿತಾ ಪರಮಾಜ ಅವರು ಸ್ವಾಗತ ಗೀತೆ ಹಾಡಿದರು. ಡಾ. ಭರತ ಅಲಸಂದಿ ಕಾರ್ಯಕ್ರಮ ನಿರೂಪಿಸಿ ಕೊನೆಯಲ್ಲಿ ವಂದಿಸಿದರು. 

ಇದಾದ ಬಳಿಕ ಗಣ್ಯರು ಶೋಭಾಯತ್ರೆಗೆ ಚಾಲನೆ ನೀಡಿದರು. ಈ ಶೋಭಾಯಾತ್ರೆಯಲ್ಲಿ ಭಗವಾನ ಮಹಾವೀರರ ಜೀವನ ಕುರಿತಾದ ವಿವಿಧ ಸಂದೇಶಗಳನ್ನು ಸಾರುವ ರೂಪಕ ವಾಹನಗಳ ಭಾಗವಹಿಸಿದ್ದವು. ಶೋಭಾಯತ್ರೆಯು  ಖಡೆಬಜಾರ ಮಾರುತಿ ಮಂದಿರದಿಂದ ಪ್ರಾರಂಭಗೊಂಡು ರಾಮದೇವ ಗಲ್ಲಿ, ಕಿಲರ್ೋಸ್ಕರ ರೋಡ, ರಾಮಲಿಂಗಖಿಂಡ ಗಲ್ಲಿ, ಟಿಳಕಚೌಕ, ಶೇರಿ ಗಲ್ಲಿ, ಕಪಿಲೇಶ್ವರ ಸೇತುವೆ, ಎಸ್.ಪಿ.ಎಂ.ರೋಡ, ಶಹಾಪೂರ ಕೋರೆ ಗಲ್ಲಿ ಮೂಲಕ  ಆಗಮಿಸಿ ಹಿಂದವಾಡಿಯ ಮಹಾವೀರ ಭವನದಲ್ಲಿ ಮುಕ್ತಾಯಗೊಂಡಿತು. ಶೋಭಾ ಯಾತ್ರೆಯ ಮಾರ್ಗದುದ್ದಕ್ಕು ಜೀತೋ  ಸಂಸ್ಥೆ,  ವೀರಸೇನಾ ಯುವಕ ಮಂಡಳ ಟಿಳಕಚೌಕ ಮತ್ತು ಇನ್ನಿತರ ಸಂಸ್ಥೆಗಳ ಮೂಲಕ ತಂಪು ಪಾನಿಯ ವ್ಯವಸ್ಥೆ ಮಾಡಲಾಗಿತ್ತು. ಮಹಾವೀರ ಭವನದಲ್ಲಿ ಎಲ್ಲ ಭಕ್ತಾದಿಗಳಿಗೆ ಪ್ರಸಾದ ವಿತರಿಸಲಾಯಿತು. 

ಇದೇ ಸಂದರ್ಭದ ಅಂಗವಾಗಿ ಹಿಂಡಲಗಾ ಕಾರಾಗೃಹದಲ್ಲಿನ ಕೈದಿಗಳಿಗೆ ಮಹಾಪ್ರಸಾದ ವಿತರಿಸಲಾಯಿತು.  ಕಾರ್ಯಕ್ರಮಕ್ಕೆ ಜಿಲ್ಲಾ ನ್ಯಾಯಾಧೀಶ ಸೂರ್ಯವಂಶೀ,ಕಾರಾಗೃಹದ ಸುಪರಿಟೆಡೆಂಡ್ ಶೇಷಾದ್ರಿ, ಜೈಲರ ಹಿರೇಮಠ ಉಪಸ್ಥಿತರಿದ್ದರು.