ಬಿಡಾಡಿ ದನಗಳ ಹಾವಳಿ: ವಿವಿಧ ಸಂಘಟನೆಗಳಿಂದ ಮನವಿ

ಬಿಡಾಡಿ ದನಗಳ ಹಾವಳಿ: ವಿವಿಧ ಸಂಘಟನೆಗಳಿಂದ ಮನವಿ

ಮುಂಡಗೋಡ:  ಪಟ್ಟಣದಲ್ಲಿ ಬಿಡಾಡಿ ದನಗಳ ಹಾವಳಿಯಿಂದಾಗುವ ತೊಂದರೆಗಳನ್ನು ಸರಿ ಪಡಿಸಬೇಕೆಂದು ಹಿಂದೂ ಜಾಗರಣಾ ವೇದಿಕೆ ಹಾಗೂ ರಾಮ ಸೇನಾ ಕನರ್ಾಟಕ ಸಂಘಟನೆಗಳಿಂದ ಮಂಗಳವಾರ ಪಟ್ಟಣ ಪಂಚಾಯತ ಮುಖ್ಯಾಧಿಕಾರಿಗಳಿಗೆ ಮನವಿಯನ್ನು ನೀಡಿದರು.

ಪಟ್ಟಣದ ಬೀದಿಗಳಲ್ಲಿ ಬಿಡಾಡಿ ದನಗಳ ಹಾವಳಿ ಹೆಚ್ಚಾಗಿದ್ದು ರಾತ್ರಿಯಾಗುತ್ತಿದ್ದಂತೆ ರಸ್ತೆಯಲ್ಲಿ ಮಲಗುವುದರಿಂದ ವಾಹನ ಸವಾರರಿಗೆ ತೊಂದರೆ ಆಗಿ ದುರ್ಘಟನೆಗಳು ನಡೆಯುತ್ತಿವೆ. ಸೋಮವಾರ ಸಂತೆ ಬಂತೆಂದರೆ ಸಾಕು ಸಂತೆಯ ಮಾರುಕಟ್ಟೆಯ ತುಂಬ ಬಿಡಾಡಿ ದನಗಳೆ ಇರುತ್ತವೆ. ನಿನ್ನೆ ಸಂತೆಯಲ್ಲಿ ಹಾವೇರಿಯಿಂದ ವ್ಯಾಪಾರಕ್ಕಾಗಿ ಬಂದ ವ್ಯಾಪಾರಸ್ಥನೊಬ್ಬ ಹಸುವಿಗೆ ಕಬ್ಬಿಣದ ಸಲಾಕೆಯಿಂದ ಬಲವಾಗಿ ಹೋಡೆದು ಕೊಂದಿರುವುದು ಕಂಡು ಬಂದಿರುತ್ತದೆ.ಇಂತಹ ಘಡನೆಗಳಗೆ ನೇರವಾಗಿ ಪಟ್ಟಣ ಪಂಚಾಯತದ ಸಿಬ್ಬಂದಿಗಳೆ ಕಾರಣವಾಗಿದ್ದು ಮರಳಿ ಇತರದ ಘಟನೆಗಳು ಮರುಕಳಿಸದ ಹಾಗೆ ನೋಡಿಕೊಳ್ಳಬೇಕು. ರಾತ್ರಿ ಸಮಯದಲ್ಲಿ ಎಲ್ಲೆಂದರಲ್ಲಿ ರಸ್ತೆಯ ಮೇಲೆ ಮಲಗುವ ಜಾನುವಾರಗಳ ಮಾಲಿಕರಿಗೆ ಎಚ್ಚರಿಕೆಯನ್ನು ನೀಡಿ ಮನೆಯ ಹಿತ್ತಲುಗಳಲ್ಲಿ ಕಟ್ಟಿ ಹಾಕಲು ಆದೇಶ ನೀಡಬೇಕು ಇಲ್ಲವಾದಲ್ಲಿ ಜಾನುವಾರಗಳನ್ನು ಕೊಂಡವಾಡಕ್ಕೆ ಸಾಗಿಸಬೇಕು.

ಈ ವಿಷಯದ ಕುರಿತು ನಾವು ಹಿಂದೆಯೂ ಅನೇಕ ಬಾರಿ ಮೌಖಿಕವಾಗಿ ಪತ್ರದ ಮೂಲಕ ತಿಳಿಸಿದರುಯಾವುದೆ ಕ್ರಮ ಕೈಗೊಂಡಿರುವುದಿಲ್ಲಾ ಕಾರಣ ಪಟ್ಟಣದಲ್ಲಿ ಬಿಡಾಡಿ ದನಗಳಿಂದ ಆಗುವ ತೊಂದರೆಗಳನ್ನು ತಪ್ಪಿಸುವಂತೆ ಮನವಿಯಲ್ಲಿ ತಿಳಿಸಲಾಗಿದೆ.

ಈ ಸಂದರ್ಭದಲ್ಲಿ ಭರತ ಹದಳಗಿ, ಪ್ರಕಾಶ ಬಡಿಗೇರ. ವಿಶ್ವನಾಥ ಭಜಂತ್ರಿ, ಬಾಬಾ ಶೀರಾಲಿ, ವೀರು ಕೋರೆ, ಸಂತೋಷ ಅಂದಲಗಿ, ಶಿವಜೋತಿ ಕೂಡಲಮಠ.ಮಹೇಶ ಚವ್ಹಾಣ ಮುಂತಾದವರು ಉಪಸ್ಥಿತರಿದ್ದರು