ಯರಗಟ್ಟಿ 12: ಮಹಾತ್ಮರ ವೃತ್ತ ಹಾಗೂ ಸಮುದಾಯ ಬವನಗಳನ್ನು ನಿಮರ್ಾಣ ಮಾಡುವ ಉದ್ದೇಶ ಇಂದಿನ ಯುವಕರು ದುಶ್ಚಟಗಳಿಗೆ ದಾಸರಾಗುತ್ತಿದ್ದು ಮಹಾತ್ಮರ, ಹಿತಚಿಂತಕರ ಭಾವಚಿತ್ರ ಹಾಗೂ ಅವರ ಸ್ಮರಣೆಯಿಂದ ಸುದಾರಿಸಿಕೊಂಡು ಸದ್ಗುಣಗಳನ್ನು ಬೆಳಿಸಿಕೊಂಡು ಸನ್ಮಾರ್ಗದೆಡೆಗೆ ಸಾಗಲಿ ಎಂದು ತೊಂಡಿಕಟ್ಟಿ ಗಾಳೇಶ್ವರ ಮಠದ ವೆಂಕಟೇಶ್ವರ ಮಹಾರಾಜರು ಹೇಳಿದರು.
ಇಲ್ಲಿನ ನಯಾನಗರ ಓಣಿಯಲ್ಲಿ ಸಂಸದ ಸುರೇಶ ಅಂಗಡಿ 5ಲಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಹನಮಂತ ನಿರಾಣಿ 10 ಲಕ್ಷ ರೂಪಾಯಿ ಅನುದಾನದಲ್ಲಿ ಹೇಮರಡ್ಡಿ ಮಲ್ಲಮ್ಮ ಹಾಗೂ ಮಹಾಯೋಗಿ ವೇಮನ ಸಮುದಾಯ ಬವನ ಅಡಿಗಲ್ಲು ಸಮಾರಂಭದ ಸಾನಿದ್ಯವಹಿಸಿ ಮಾತನಾಡಿದರು.
ಶಾಸಕ ಆನಂದ ಮಾಮನಿ ಮಾತನಾಡಿ ಯಲ್ಲಮ್ಮ ಮತಕ್ಷೇತ್ರದ ಸರ್ವ ಸಮುದಾಯದ ಸವರ್ಾಂಗೀಣ ಅಭಿವೃದ್ಧಿ ದೃಷ್ಠಿಯಿಂದ ದೇವಸ್ಥಾನಗಳ ಜಿಣರ್ೋದ್ಧಾರ ಕಾರ್ಯಗಳನ್ನು ಮಾಡಿದ್ದು ಈ ಸಮುದಾಯ ಬವನಕ್ಕೆ 10 ಲಕ್ಷ ರೂಪಾಯಿ ಅನುದಾನ ನೀಡುವುದಾಗಿ ಬರವಸೆ ನೀಡಿದರು.
ಈ ಸಂಧರ್ಭದಲ್ಲಿ ವಿದಾನ ಪರಿಷತ್ ಸದಸ್ಯ ಹನಮಂತ ನಿರಾಣಿ, ಅಜೀತಕುಮಾರ ದೇಸಾಯಿ, ತಾ.ಪಂ.ಸದಸ್ಯೆ ಮಂಜುಳಾ ಕರಿಗೊಣ್ಣವರ, ಗ್ರಾ.ಪಂ.ಅದ್ಯಕ್ಷೆ ಕಸ್ತೂರಿ ಕಡೆಮನಿ, ಡಾ.ಕೆ.ವ್ಹಿ.ಪಾಟೀಲ, ಗೌಡಪ್ಪ ದೇವರಡ್ಡಿ, ವೆಂಕಣ್ಣ ಕೊಪ್ಪದ, ಹನಮಂತಗೌಡ ಪಾಟೀಲ, ಭೀಮಶೆಪ್ಪ ದೇವರಡ್ಡಿ, ಎಚ್.ಎಲ್.ವಜ್ರಮಟ್ಟಿ, ಎನ್.ಕೆ.ಹುಚ್ಚರಡ್ಡಿ, ವಿಶಾಲಗೌಡ ಪಾಟೀಲ, ಡಿ.ಜಿ.ಗಲಬಿ, ಗೀರಿಶ ಪಾಟೀಲ, ಗೋವಿಂದ ದೇವರಡ್ಡಿ, ರಾಮಣ್ಣ ಪಾಟೀಲ, ವೆಂಕಟೇಶ ದೇವರಡ್ಡಿ, ಸಂತೋಷ ದೇವರಡ್ಡಿ, ಹನಮಂತ ಗಂಗರಡ್ಡಿ ಮುಂತಾದವರಿದ್ದರು.