ಲೋಕದರ್ಶನ ವರದಿ
ಶಿಗ್ಗಾವಿ 08: ಹುಟ್ಟು ಆಕಸ್ಮೀಕವಾದರೂ ಸಾವು ಶಾಸ್ವತ ಅದರ ಮದ್ಯದಲ್ಲಿರುವ ಮಾನವನ ಜೀವನವನ್ನು ಪಾವನ ಮಾಡಿಕೊಳ್ಳಬೇಕಾದರೆ ಧರ್ಮದ ದಾರಿಯಲ್ಲಿ ನಡೆಯುವುದು ಅವಸ್ಯವಾಗಿದೆ ಎಂದು ಲೋಕಸಭಾ ಮಾಜಿ ಸದಸ್ಯ ಮಂಜುನಾಥ ಕುನ್ನೂರ ಹೇಳಿದರು.
ತಾಲೂಕಿನ ಬಂಕಾಪುರ ಕೊಟ್ಟಿಗೇರಿ ಬಂಗಾರ ಬಸವಣ್ಣ ದೇವಸ್ಥಾನದ ಜಾತ್ರೋತ್ಸವದ ಅಂಗವಾಗಿ ನಡೆದ ಧರ್ಮ ಸಮಾರಂಭದಲ್ಲಿ ಮುಗಳಿ ಗ್ರಾಮದ ಹುತಾತ್ಮ ಯೋದ ಚಂದ್ರು ಡವಗಿ ಯವರ ಪತ್ನಿ ಶಿಲ್ಪಾ ಡವಗಿ ಯವರ ಸನ್ಮಾನ ಸಮಾರಂಭ ಕಾರ್ಯಕ್ರಮವನ್ನುದ್ದೇಸಿಸಿ ಮಾತನಾಡಿದ ಅವರು ಮನುಷ್ಯನಿಗೆ ಅಧಿಕಾರ, ಅಂತಸ್ತು ಯಾವುದು ಶಾಸ್ವತವಲ್ಲ. ಉಸಿರಿರುವಾಗಲೆ ಸಮಾಜಕ್ಕಾಗಿ, ದೇಶಕ್ಕಾಗಿ ಒಳ್ಳೆಯ ಕೇಲಸ ಕಾರ್ಯಗಳನ್ನು ಮಾಡುವಮೂಲಕ ಪುಣ್ಯ ಪ್ರಾಪ್ತಿ ಮಾಡಿಕೊಳ್ಳುವಂತೆ ಸಾರ್ವಜನಿಕರಿಗೆ ಕರೆ ನೀಡಿದರು.
ನಾನು ಎರಡುಬಾರಿ ಶಾಸಕನಾಗಿ ಒಂದುಬಾರಿ ಲೋಕಸಬಾ ಸದಸ್ಯನಾಗಿ ಆಯ್ಕೆಮಾಡಿ ಕಳುಹಿಸಿದ ಕೀತರ್ಿ ನಿಮ್ಮದಾಗಿದ್ದು, ನಾನು ಇಗ ಅದಿಕಾರದಲ್ಲಿಲ್ಲದ್ದಿದ್ದರೂ ನನ್ನ ಅದಿಕಾರದ ಅವದಿಯಲ್ಲಿ ಮಾಡಿದ ಜನಪರ ಕೇಲಸಗಳು ಶಾಸ್ವತವಾಗಿವೆ. ಬಂಗಾರ ಬಸವಣ್ಣ ದೇವರ ನೂತನ ರಥೋತ್ಸವ ನಿಮರ್ಿಸಲು ನನ್ನಿಂದಾದ ಸಹಾಯ ಸಹಕಾರ ನೀಡುವದಾಗಿ ಹೇಳಿದರು.
ಕ.ಸಾ.ಪ ತಾಲೂಕಾ ಅಧ್ಯಕ್ಷ ನಾಗರಾಜ ದ್ಯಾಮನಕೊಪ್ಪ ಮಾತನಾಡಿ ದೇಶ ಕಾಯುವ ಯೋದರ ಸ್ಮರಣೆ ಮಾಡುವುದು ಪ್ರತಿಯೋಬ್ಬ ಬಾರತೀಯನ ಆದ್ಯ ಕರ್ತವ್ಯವಾಗಿದೆ. ಈ ದೇಶಕ್ಕೆ ಅನ್ನ ನೀಡುವ ರೈತ, ತಮ್ಮ ಪ್ರಾಣದ ಹಂಗು ತೋರೆದು ಗಡಿಯಲ್ಲಿ ದೇಶ ಕಾಯುವ ವೀರ ಯೋಧರ ಸೇವೆ ಅಂತ್ಯಂತ ಮಹತ್ವಪೂರ್ಣ ಸೇವೆಗಳಲ್ಲೋಂದಾಗಿದೆ ಎಂದು ಹೇಳಿದರು.
ಕೂಡಲದ ಗುರುಮಹೇಶ್ವರ ಶ್ರೀಗಳು ಮಾತನಾಡಿ ತಾಯಂದಿರು ತಮ್ಮ ಮಕ್ಕಳಿಗೆ ಡಾಕ್ಟರ್ರಾಗು, ಇಂಜನೀಯರ್ರಾಗು ಹೇಳುತ್ತಾರೆಯೇ ವಿನಃ ನಿನೋಬ್ಬ ದೇಶ ಕಾಯುವ ಯೋದನಾಗು ಎಂದು ಹೇಳುವ ತಾಯಂದಿರು ವಿರಳ. ಅಂತವರಲ್ಲಿ ಮುಗಳಿ ಬಸವಣ್ಣೆವ್ವ ಡವಗಿ ಯವರು ತಮ್ಮ ಸುಪುತ್ರ ಚಂದ್ರು ಡವಗಿ ಯವರನ್ನು ದೇಶಕ್ಕಾಗಿ ಸಮಪರ್ಿಸುವಮೂಲಕ ಮಾತೃ ಹೃದಯಿ ದೇಶ ಪ್ರೇಮಿಗಳಾಗಿ ಮೇರೆದವರಾಗಿದ್ದಾರೆ. ನಮ್ಮ ಮಕ್ಕಳು ಶೈಕ್ಷಣಿಕ ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಗಳಿಸಿದರೆ ಸಾಲದು ಮನದಲ್ಲಿ ಗುರು ಹಿರಿಯರೇಂಬ ಭಾವನೆ ಮೂಡಿ ನೀತಿವಂತರಾಗಿ ಧರ್ಮದ ದಾರಿಯಲ್ಲಿ ನಡೆದಾಗ ಮಾತ್ರ ಜೀವನವೆಂಬ ಪರೀಕ್ಷೆಯಲ್ಲಿ ಪಾಸಾಗಬಲ್ಲರು ಎಂದು ಹೇಳಿದರು.
ಸಭೆಯ ಅಧ್ಯಕ್ಷತೆ ವಹಿಸಿ ಜಿ.ಪಂ. ಮಾಜಿ ಸದಸ್ಯ ಎಸ್.ಬಿ.ಗಚ್ಚಿನಮಠ ಮಾತನಾಡಿದರು. ಕಾರ್ಯಕ್ರಮದಲ್ಲಿ ಹುತಾತ್ಮ ಯೋದ ಚಂದ್ರು ಡವಗಿ ಯವರ ಧರ್ಮ ಪತ್ನಿ ಶಿಲ್ಪಾ ಡವಗಿ ಹಾಗೂ ಅವರ ತಾಯಿ ಬಸವಣ್ಣೆವ್ವ ಡವಗಿ ಯವರನ್ನು ಕಮೀಟಿ ಯವರ ಸಹಾಯ ಧನ ನೀಡಿ ಸನ್ಮಾನಿಸಿದರು. ಕಾರ್ಯಕ್ರಮಕ್ಕೂ ಪೂರ್ವ ಹುತಾತ್ಮ ವೀರ ಯೋಧರಿಗೆ ಮೌನಾಚರಣೆ ಆಚರಿಸುವ ಮೂಲಕ ಗೌರವ ಸಮಪರ್ಿಸಿದರು.
ವೀರಯ್ಯ ಹುಣಸಿಕಟ್ಟಿಮಠ, ಮಲ್ಲೇಶಪ್ಪ ಬಡ್ಡಿ, ಬಸಪ್ಪ ಸೋಪ್ಪಿನ, ಗೌಡಪ್ಪಗೌಡ ಸಂಸಿ, ಉಮೇಶ ಅಂಗಡಿ, ಸತೀಷ ವನಹಳ್ಳಿ, ಬಸವಣ್ಣೆಪ್ಪ ಎಲಿಗಾರ, ಗಂಗಾದರ ಬಡ್ಡಿ, ಸತೀಷ ವನಹಳ್ಳಿ ಸೇರಿದಂತೆ ದೇವಸ್ಥಾನ ಕಮೀಟಿ ಸದಸ್ಯರು ಉಪಸ್ಥಿತರಿದ್ದರು. ನಿವೃತ್ತ ಶಿಕ್ಷಕ ಶಿವಾನಂದ ಎಲಿಗಾರ ಸ್ವಾಗತಿಸಿದರು. ನಾಗರಾಜ ಬಡ್ಡಿ ನಿರೂಪಿಸಿದರು.