ರೈತ ಆರ್ಥಿಕ ಅಭಿವೃದ್ಧಿಗೆ ಪಪ್ಪಾಯಿ ಬೆಳೆ ಲಾಭದಾಯಕ: ಹಂಚಿನಮನಿ

ಲೋಕದರ್ಶನವರದಿ

ರಾಣೇಬೆನ್ನೂರು ಜು.8:  ತಾಲೂಕಿನ ಸಿದ್ದಾಪುರ ತಾಂಡೆಯ ಸೇವಾಲಾಲ್ ದೇವಸ್ಥಾನ ಆವರಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ರೈತ ಸಮುದಾಯಕ್ಕಾಗಿ ಪಪ್ಪಾಯಿ ಕೃಷಿ ಬೆಳೆ ಕುರಿತು ಮಾಹಿತಿ ಕಾಯರ್ಾಗಾರವು ಆಯೋಜಿಸಿತ್ತು.  ಈ ಸಂದರ್ಭದಲ್ಲಿ ಮಾತನಾಡಿದ ತೋಟಗಾರಿಕಾ ಅಧಿಕಾರಿ ನಾಗರಾಜ ಹಂಚಿನಮನಿ ಅವರು ರಾಜ್ಯದಲ್ಲಿ ಬೆಳೆಯಲಾಗುತ್ತಿರುವ ಪಪ್ಪಾಯಿ ಬೆಳೆ ಅತ್ಯಂತ ಮಹತ್ವದ್ದಾಗಿದೆ.  ಶೀಘ್ರವಾಗಿ ಫಲಕೊಡುವ ಈ ಹಣ್ಣಿನ ಬೆಳೆಯು ಎ ಮತ್ತು ಸಿ ಜೀವಸತ್ವಗಳಿಂದ ಸಂಪದ್ಬರಿತವಾಗಿದೆ.  ದೇಹ ಪೋಷಣೆಗೆ ಅತ್ಯಂತ ಪ್ರಮುಖವಾಗಿದೆ.  ಮತ್ತು ಪಪೇನ್ ಬೆಳೆಬಾಳುವ ಶೀಣ್ಣವನ್ನು ಪಪಾಯಿ ಕಾಯಿಯ ಹಾಲಿನಿಂದ ತಯಾರಿಸಲಾಗುತ್ತದೆ.  ಹಲವಾರು ಉದ್ಧೇಶಗಳಿಗಾಗಿ ಬಳಕೆಯಾಗುತ್ತಲಿದೆ ಎಂದರು.   

ಇದನ್ನು ಹಲವು ವಿವಿಧ ಮಣ್ಣಿನಲ್ಲಿ ಬೆಳೆಯಬಹುದು ಚನ್ನಾಗಿ ಬಸಿದು ಹೊಗುವಂತಹ ಮದ್ಯಮ ಕಪ್ಪು ಮಣ್ಣಿನಿಂದ ಹಿಡಿದು ಕೆಂಪುಗೂಡು ಮಣ್ಣು ಈ ಬೆಳೆಗೆ ಅತಿ ಸೂಕ್ತ ನೀರು ನಿಲ್ಲುವಂತಹ ತಗ್ಗು ಕೆಳ ಪ್ರದೇಶಗಳಲ್ಲಿ ಮತ್ತು ಕಪ್ಪು ಭೂಮಿ ಈ ಬೆಳೆಕೆ ಯೋಗ್ಯವಲ್ಲವಾಗಿದೆ ಎಂದರು.  

ಈ ಕೃಷಿ ತೇವಾಂಶವಿರುವ ಹಾಗೂ ಬಿಸಿ ವಾತಾವರಣದಲ್ಲಿ ಚನ್ನಾಗಿ ಬೆಳೆಯುತ್ತದೆ ಹೆಚ್ಚಿನ ಮಳೆ ಮತ್ತು ಜಾರು ಪ್ರದೇಶಗಳು ಈ ಬೆಳೆಗೆ ಸೂಕ್ತವಲ್ಲ ಜೂನ್. ಜುಲೈ ತಿಂಗಳು ನಾಟಿ ಮಾಡಲು ಸೂಕ್ತ ತಳಿಗಳಾದ ಕೂರ್ಗ, ಹನಿಡೂ, ವಾಶಿಂಗ್ಟನ್, ಸೂರ್ಯ, ಕೋ-1, ಕೋ-2, ರೆಡ್ಲೇಡಿ, ತಳಿ ಬಹಳ ಸೂಕ್ತವಾದದ್ದು ರೈತರು ಈ ಕೃಷಿಯನ್ನು ಅಳವಡಿಸಿಕೊಳ್ಳಲು ಮುಂದಾಗಬೇಕು ಎಂದರು. 

ರೈತರು ತಮ್ಮ ಸಮಗ್ರ ಆಥರ್ಿಕ ಅಭಿವೃದ್ಧಿ ಹೊಂದಲು ತೋಟಗಾರಿಕೆ ಇಲಾಖೆಯಲ್ಲಿ ಹನಿ ನೀರಾವರಿ ಕೃಷಿ ಯಂತ್ರಗಳ ಬಳಕೆ ಸಹಾಯದನ ಪಡೆದುಕೊಳ್ಳಬಹುದು ತರಕಾರಿ ಬೆಳೆಗಳ ಬೀಜಗಳು ಲಭ್ಯವಿದ್ದು, ಆಧಾರ್ ಕಾರ್ಡ ಮತ್ತು ಉತಾರವನ್ನು ನೀಡಿದರೆ ಉಚಿತವಾಗಿ ತರಕಾರಿ ಬೀಜಗಳನ್ನು ಪಡೆದುಕೊಂಡು ಬಿತ್ತನೆ ಮಾಡಬಹುದಾಗಿದೆ ಎಂದರು.  

ವೇದಿಕೆಯಲ್ಲಿ ಕೃಷಿ ಅಧಿಕಾರಿ ನೇಮನಗೌಡ ಕಂಕನವಾಡ, ಮೇಲ್ವಿಚಾರಕಿ ಶಶಿಕಲಾ ಬಂಗೇರಾ

ಜಯಮ್ಮಾ ಹೆಳವರ, ಗ್ರಾಪಂ ಸದಸ್ಯ ಕುಮಾರ ಲಮಾಣಿ, ಸುರೇಶ ಲಮಾಣಿ, ಒಕ್ಕೂಟದ ಅಧ್ಯಕ್ಷರು, ಪ್ರಗತಿಬಂದು ಸ್ವ-ಸಹಾಯ ಸಂಘದ ಸದಸ್ಯರು ಮತ್ತು ಗ್ರಾಮದ ಮುಖಂಡರು ರೈತರು ಉಪಸ್ಥಿತರಿದ್ದರು.