ಲೋಕದರ್ಶನ ವರದಿ
ಮುಧೋಳ 6: ಕಲೆ ಎಂಬುದು ಯಾರ ಸ್ವತ್ತು ಅಲ್ಲ,ಅದು ದೈವದತ್ತ ಕೊಡುಗೆ.ಅವಕಾಶ ಸಿಕ್ಕಾಗ ಸಮರ್ಪಕವಾಗಿ ಬಳಸಿಕೊಳ್ಳಬೇಕು ಆಗಲೇ ವ್ಯಕ್ತಿಯ ಕಲೆಯು ಹೊರಹೊಮ್ಮಲು ಸಾದ್ಯ ಎಂದು ಹಿರಿಯ ವಕೀಲ ಪ್ರಕಾಶ ವಸ್ತ್ರದ ಹೇಳಿದರು.
ಮುಧೋಳ-ಮಂಟೂರ ರಸ್ತೆಯ ಭಜಂತ್ರಿಗಲ್ಲಿಯ ಶ್ರೀ ದುರ್ಗಾದೇವಿ ಜಾತ್ರಾ ಮಹೋತ್ಸವದಂಗವಾಗಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಜಾನಪದ ಹಾಸ್ಯ ಸಂಗೀತ ಸುರಿಮಳೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಮನಸ್ಸಿನ ನೋವು ಕಳೆಯಲು ಹಾಸ್ಯ ಬೇಕು,ಹಾಸ್ಯ ಬದುಕಿಗೆ ಜೀವಾಳ ಇದ್ದಂತೆ ಎಂದರು.
ಪತ್ರಕರ್ತ ವಿಶ್ವನಾಥ ಮುನವಳ್ಳಿ ಮಾತನಾಡಿ, ಶ್ರೀ ದುರ್ಗಾದೇವಿ ಜಾತ್ರಾ ಮಹೋತ್ಸವದಂಗವಾಗಿ ಶ್ರೀ ದುಗರ್ಾದೇವಿ ದೇವಸ್ಥಾನ ಸೇವಾ ಸಮಿತಿ ಯವರು ಪ್ರತಿವರ್ಷ ವಿವಿಧ ಸ್ಫರ್ಧಾತ್ಮಕ ತ್ಮಕ ಕ್ರೀಡಾ ಚಟುವಟಿಕೆಗಳನ್ನು ಹಮ್ಮಿಕೊಂಡು ತನ್ಮೂಲಕ ಗ್ರಾಮೀಣ ಕ್ರೀಡೆಗಳಿಗೆ ಪ್ರೊತ್ಸಾಹಿಸುತ್ತಾ ಬಂದಿದ್ದಾರೆ. ಅಷ್ಟೇ ಅಲ್ಲ ಬೇರೆ ಬೇರೆ ಕಲಾವಿದರನ್ನು ಅಹ್ವಾನಿಸಿ ಅವರಿಂದ ಜಾನಪದ ಹಾಸ್ಯ ಮತ್ತು ಸಂಗೀತ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜನಮನವನ್ನು ಉಲ್ಲಾಸಗೊಳಿಸುವ ಪ್ರಯತ್ನ ಮಾಡುತ್ತಾ ಬಂದಿದೆ. ಇಂತಹ ಕಾರ್ಯಕ್ರಮಗಳು ಪ್ರತಿವರ್ಷ ನಡೆಸಿಕೊಂಡು ಬರಬೇಕು ಮತ್ತು ಗ್ರಾಮೀಣ ಸಾಂಸ್ಕೃತಿಯನ್ನು ಉಳಿಸಿಕೊಂಡು ಮುಂದಿನ ಜನಾಂಗಕ್ಕೆ ತಿಳಿಸಿಕೊಡಬೇಕೆಂದರು.
ಶ್ರೀ ದುರ್ಗಾದೇವಿ ಅರ್ಚಕ ಯಮನಪ್ಪ ಚ.ಪೂಜಾರಿ ಸಾನಿಧ್ಯವಹಿಸಿದ್ದರು. ಶ್ರೀ ದುರ್ಗಾದೇವಿ ಸೇವಾ ಸಮಿತಿ ಅಧ್ಯಕ್ಷ ಅನೀಲ ಲಾಡ,ನವೀನ ಬೋಳಾರ, ಶರೀಫ ಜಕ್ಕಲಿ, ಯಂಕಪ್ಪ ಮಂಟೂರ, ಹಣಮಂತ ಶೆಲ್ಲಿಕೇರಿ, ಬಸಪ್ಪ ಭಜಂತ್ರಿ, ವಿಠ್ಠಲ ಭಜಂತ್ರಿ,ಕುಮಾರ ಮ್ಯಾಗೇರಿ, ಭರಮಾನಂದ ಭಜಂತ್ರಿ,ಗದಿಗೆಪ್ಪ ಭಜಂತ್ರಿ, ಹಣಮಂತ ಭಜಂತ್ರಿ, ಶಂಕರ ಭಜಂತ್ರಿ, ಪುಂಡಲಿಕ ಭಜಂತ್ರಿ, ಕೃಷ್ಣಾ ಭಜಂತ್ರಿ, ಸೋಮಲಿಂಗ ಪೂಜಾರಿ, ರಂಗಪ್ಪ ಪೂಜಾರಿ, ಬಸಪ್ಪ ಭಜಂತ್ರಿ, ಲಕ್ಷ್ಮಣ ಭಜಂತ್ರಿ ಸೇರಿದಂತೆ ಇತರೆ ಗಣ್ಯರು ವೇದಿಕೆ ಮೇಲೆ ಉಪಸ್ಥಿತರಿದ್ದರು.
ಬೆಳಗಾವಿ ಶಿವರಾಜ್ ಮೆಲೋಡಿಸ್ ಕಲಾ ತಂಡದವರಿಂದ ಜಾನಪದ ಹಾಸ್ಯ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.
ವ್ಹಿ.ಜಿ.ಭಜಂತ್ರಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.