ನವದೆಹಲಿ, ಮಾ.28, ದೇಶದಲ್ಲಿ ಕೋವಿಡ್ -19 ಸೋಂಕಿತರ ಸಂಖ್ಯೆ ಶನಿವಾರ 873ಕ್ಕೇರಿದೆ ಎಂದು ಸರ್ಕಾರ ಹೇಳಿದೆ. ಇದುವರೆಗೆ ಈ ಸೋಂಕಿಗೆ ಬಲಿಯಾದವರ ಸಂಖ್ಯೆ 19ಕ್ಕೇರಿದೆ. ಇದುವರೆಗೆ 78 ಮಂದಿ ಗುಣಮುಖರಾಗಿದ್ದು, ಅವರನ್ನು ಬಿಡುಗಡೆ ಮಾಡಲಾಗಿದೆ. ಇವರಲ್ಲಿ ಓರ್ವ ವಿದೇಶದಿಂದ ಬಂದವನು ಎಂದು ಆರೋಗ್ಯ ಇಲಾಖೆ ತಿಳಿಸಿದೆ.ದೇಶದಲ್ಲಿ ಪ್ರಸ್ತುತ 775 ಮಂದಿಯಲ್ಲಿ ಸೋಂಕು ಪಾಸಿಟಿವ್ ಇರುವುದು ಪತ್ತೆಯಾಗಿದೆ ಎಂದು ಆರೋಗ್ಯ ಇಲಾಖೆ ದೃಢಪಡಿಸಿದೆ.ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು 183 ಆಗಿದೆ. ನಂತರ ಕೇರಳದಲ್ಲಿ 173 ಪ್ರಕರಣ ಕಂಡುಬಂದಿದೆ. ಆದರೂ ಕೇರಳದಲ್ಲಿ ಶೀಘ್ರಗತಿಯಲ್ಲಿ ಸೋಂಕಿನ ಸಂಖ್ಯೆ ಹೆಚ್ಚಾಗುತ್ತಿದೆ. ಪ್ರಸ್ತುತ ಎರಡನೆ ಹಂತದಲ್ಲಿ ರೋಗ ಇದ್ದು, ರೋಗದ 3 ನೇ ಹಂತದ ಪರಿಸ್ಥಿತಿಯನ್ನು ಎದುರಿಸಲು ಸರ್ಕಾರಗಳು ತಮ್ಮನ್ನು ಸಿದ್ಧಪಡಿಸಿಕೊಳ್ಳುತ್ತಿರುವುದರಿಂದ, ರಾಷ್ಟ್ರದಾದ್ಯಂತ ವೈದ್ಯಕೀಯ ಮೂಲಸೌಕರ್ಯಗಳನ್ನು ಹೆಚ್ಚಿಸಲಾಗುತ್ತಿದೆ ಮತ್ತು ಅಧಿಕಾರಿಗಳು ಪ್ರತಿ ದಿನ ಕಳೆದಂತೆ ಹೆಚ್ಚು ಪರಿಣಾಮಕಾರಿಯಾಗಿ ಮೇಲ್ವಿಚಾರಣೆ ಮಾಡುತ್ತಿದ್ದಾರೆ. ಮಾತ್ರದಲ್ಲ ಸೋಂಕು ತಡೆಯಲು 21 ದಿನಗಳ ದೇಶಾದ್ಯಂತ ಲಾಕ್‌ಡೌನ್ ಘೋಷಿಸಲಾಗಿದೆ.