ಏಕಾಗ್ರತೆಯಿಂದ ಅಧ್ಯಯನ ಮಾಡಿದರೆ ಉರ್ತ್ತೀಣರಾಗಲು ಸಾಧ್ಯ: ಸಲಗರೆ

If you study with concentration you can excel: Salgare

ರಾಯಬಾಗ 15: ವಿದ್ಯಾರ್ಥಿಗಳು ಏಕಾಗ್ರತೆಯಿಂದ ಸತತ ಅಧ್ಯಯನ ಮಾಡಿದರೆ ಅಂತಿಮ ಪರೀಕ್ಷೆಯಲ್ಲಿ ಉರ್ತ್ತೀಣಗೊಳ್ಳಲು ಸಾಧ್ಯವಾಗುತ್ತದೆ ಎಂದು ಬಾಜೀರಾವ ಮಗದುಮ್ಮ ಪ್ರೌಢ ಶಾಲೆಯ ಮುಖ್ಯಾಧ್ಯಾಪಕ ಎ.ಕೆ. ಸಲಗರೆ ಹೇಳಿದರು.ಸೋಮವಾರ ತಾಲೂಕಿನ ಬಾವನ ಸೌಂದತ್ತಿ ಗ್ರಾಮದ ಆದರ್ಶ ಶಿಕ್ಷಣ ಸಂಸ್ಥೆಯ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಬಾಜೀರಾವ ಮಗದುಮ್ಮ ಪ್ರೌಢ ಶಾಲೆ ಪರೀಕ್ಷೆ ಕೇಂದ್ರ ವ್ಯಾಪ್ತಿಯಲ್ಲಿ ಬರುವ 2024-25ನೇ ಸಾಲಿನ ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ಪ್ರೇರಣಾ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.    

ದಿಗ್ಗೆವಾಡಿ ಪ್ರೌಢಶಾಲೆಯ ಮುಖ್ಯಾಧ್ಯಾಪಕ ವಿ.ಬಿ. ಚೌಗುಲೆ ಅಧ್ಯಕ್ಷತೆಯನ್ನು ವಹಿಸಿದ್ದರು. ಸಂಪನ್ಮೂಲ ವ್ಯಕ್ತಿಗಳಾದ ಡಿ.ಆರ್‌.ಭೆಂಡೆ, ಆರಿ​‍್ಬ.ಬಾಗಿಮನಿ, ಪಿ.ಎಸ್‌.ನಿಡೋಣಿ, ರೇವತಿ ಉಪ್ಪಿನ, ಎನ್‌.ಪಿ.ಕೋಳಿ, ಯು.ಎ.ಮಗದುಮ್ಮ  ಇದ್ದರು.