ಒಬ್ಬ ಕವಿಯಾದವನು ಎಲ್ಲರ ಸಾಹಿತ್ಯಗಳನ್ನು ಓದಬೇಕು: ಡಾ.ಬೇವಿನಗಿಡದ

Kavan Sankranti Special Poetry Conference

ಕವನ ಸಂಕ್ರಾಂತಿ ವಿಶೇಷ ಕವಿಗೋಷ್ಠಿ 

ಧಾರವಾಡ 15: ಒಬ್ಬ ಕವಿಯಾದವನು ಎಲ್ಲರ ಸಾಹಿತ್ಯಗಳನ್ನು ಓದಬೇಕು,  ಅಪಾರವಾದ ಕಲ್ಪನಾಶಕ್ತಿಯಿರಬೇಕು, ಅದನ್ನು ಅನುಭವದೊಂದಿಗೆ ಬೆರೆಸಿದಾಗ ಮಾತ್ರ ಒಳ್ಳೆಯ ಕವಿತೆಗಳು ರೂಪುಗೊಳ್ಳಲು ಸಾಧ್ಯವಾಗುತ್ತದೆ ಎಂದು ಹಿರಿಯ ಕವಿ, ಆಕಾಶವಾಣಿಯ ನಿವೃತ್ತ ಕಾರ್ಯಕ್ರಮ ಮುಖ್ಯಸ್ಥ ಡಾ.ಬಸು ಬೇವಿನಗಿಡದ ಅಭಿಪ್ರಾಯ ಪಟ್ಟರು.   

ದಿ.14 ರಂದು ನಗರದ ಬೇಂದ್ರೆ ಭವನದಲ್ಲಿ ಡಾ.ದ.ರಾ.ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್‌ವು ಸ್ವಾಮಿ ವಿವೇಕಾನಂದರ ಜನ್ಮದಿನ, ಯುವ ಕವಿ ರಾಮಚಂದ್ರ ದತ್ತಾತ್ರೇಯ ಬೇಂದ್ರೆಯವರ ಸ್ಮರಣೆಯಲ್ಲಿ ಏರಿ​‍್ಡಸಿದ್ದ ವಿಶೇಷ ಕವಿಗೋಷ್ಠಿ ಕವನ ಸಂಕ್ರಾಂತಿಯ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಡಾ.ಬಸು ಬೇವಿನಗಿಡದ ಮಾತನಾಡುತ್ತ  ಬೇಂದ್ರೆಯವರಿಗೆ ಅದ್ಭುತವಾದ ಕಲ್ಪನಾ ಶಕ್ತಿಯಿತ್ತು.  ಬಹು ಭಾಷೆಗಳ ಮೇಲೆ ಹಿಡಿತ ಸಾಧಿಸಿದ್ದರು.  ಅವರ ಪ್ರತಿಯೊಂದು ಕವನವು ವಿಭಿನ್ನ ಶ್ರೇಷ್ಠ ಕವನಗಳಾಗಿವೆ.  ಹೊಸತನ, ಸೃಜನಶೀಲತೆಯನ್ನು ಅಳವಡಿಸಿಕೊಂಡು ಕವನ ರಚನೆಯಲ್ಲಿ ತೊಡಗಬೇಕು ಹಾಗೂ ಭಾಷೆಗೆ ಸೌಂದರ್ಯಕೊಡುವ ಕಾರ್ಯವಾಗಬೇಕಿದೆ ಎಂದು ಉದಯೋನ್ಮುಖ ಯುವ ಕವಿಗಳಿಗೆ ಕವಿಮಾತು ಹೇಳಿದರು.   

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಟ್ರಸ್ಟ್‌ ಅಧ್ಯಕ್ಷರಾದ ಡಾ.ಡಿ.ಎಂ.ಹಿರೇಮಠ ಅವರು ಮಾತನಾಡುತ್ತ ಕವಿಗೆ ಕವಿತ್ವವಿದ್ದಾಗ ಒಂದು ಸಣ್ಣ ಸಂಗತಿಯು ದೊಡ್ಡ ವಿಷಯ ವಸ್ತುವಾಗುತ್ತದೆ.  ಕವಿ ಜೀವದ ಬ್ಯಾಸರ ಬಿಡಿಸಾಕ ಹೆಚ್ಚಿಗೇನ ಬೇಕ, ಒಂದು ಹೂತ ಹುಣಸೀ ಮರ ಸಾಕ ಎನ್ನುವ ಮಾತಿನಲ್ಲಿ ಜೀವನದ ಬ್ಯಾಸರ ಕಳೆದುಕೊಳ್ಳಲು ಪ್ರಕೃತಿಯ ಸೌಂದರ್ಯ ಸಾಕು ಎನ್ನುವ ಆಶಯದಲ್ಲಿ ಸಾಮಾನ್ಯವಾದ ಹೂತ ಹುಣಸೆಮರವನ್ನು ಉಲ್ಲೇಖಿಸಿದ್ದಾರೆ. ರಾಮಾಯಣ, ಮಹಾಭಾರತದ ಕಾಲದಿಂದಲೂ ಸಂಕ್ರಾಂತಿ ಹಬ್ಬವನ್ನು ಆಚರಿಸುತ್ತ ಬರಲಾಗಿದೆ.  ಸಂಕ್ರಾಂತಿ ಹಬ್ಬದಂದು ಬೇಂದ್ರೆಯವರ ನೆಲದಲ್ಲಿ ನಿಂತು ಕವನ ವಾಚಿಸೋದೇ ಒಂದು ಸೌಭಾಗ್ಯದ ಸಂಗತಿಯಾಗಿದೆ ಎಂದರು.   

ಸಂಕ್ರಾಂತಿ ಕವಿಗೋಷ್ಠಿಯಲ್ಲಿ ಡಾ.ಸ್ನೇಹಾ ಜೋಶಿ, ಹೊನ್ನಪ್ಪ ಕರೆಕನ್ನಮ್ಮನವರ, ಹಣಮಂತಪ್ಪ ಭಜಂತ್ರಿ, ಸೌಮ್ಯ ನೇತ್ರೇಕರ್, ಸಕ್ಕುಬಾಯಿ ರಾಯಣ್ಣವರ, ರಾಜೇಶ್ವರಿ ಕೋಲಕಾರ, ಶಾಹಿನ್ ಬಳ್ಳಾರಿ, ಶಿವು ಖನ್ನೂರ, ಪಾರ್ವತಿ ಕಂಬಳಿ,  ಡಾ. ಎ.ಎಲ್‌.ದೇಸಾಯಿ, ಮಹಾದೇವಿ ಬಡಿಗೇರ, ಸಿ.ಸಿ.ಹಿರೇಮಠ, ಡಾ.ಬಸವರಾಜ ಕಲೆಗಾರ, ಗಾಯತ್ರಿ ರವಿ, ಶ್ರೀಧರ ಗಸ್ತಿ, ಉಮೇಶ ಮುನವಳ್ಳಿ, ಸುಹಾಸಿನಿ ಕುಕಡೊಳ್ಳಿ, ಕುಮಾರ ಕುರಬೇಟ, ರಾಹುಲ್ ಉಪ್ಪಾರ, ವಿಶ್ವನಾಥ ಹಿರೇಮಠ, ದೀಪಶ್ರೀ ನಾಯಕ ಭಾಗವಹಿಸಿ ತಮ್ಮ ಸ್ವರಚಿತ ಕವನ ವಾಚಿಸಿದರು.   

ಟ್ರಸ್ಟ್‌ ಸದಸ್ಯ ಕಾರ್ಯದರ್ಶಿ ಮಲ್ಲಿಕಾರ್ಜುನ ಸೊಲಗಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು, ಡಾ.ಸ್ನೇಹಾ ಜೋಶಿ ನಿರೂಪಿಸಿದರು.  ಟ್ರಸ್ಟ್‌ ವ್ಯವಸ್ಥಾಪಕ ಪ್ರಕಾಶ ಬಾಳಿಕಾಯಿ ವಂದಿಸಿದರು.   

ಕಾರ್ಯಕ್ರಮದಲ್ಲಿ ಗಣ್ಯರಾದ ಜಿ.ಕೆ.ಹಿರೇಮಠ, ರಮೇಶ ಲಿಂಗದಾಳ, ರಾಜಶೇಖರ ಹೊನ್ನಪ್ಪನವರ, ಬಸವರಾಜ ವಾಸನದ, ಎಸ್‌.ಎಸ್‌.ಬಂಗಾರಿಮಠ, ಎಮ್‌.ವಿ.ಹೊಸಮನಿ, ರಾಜಶೇಖರ ಬಾಣದ, ಗೀರೀಶ ಚೌಡಕಿ, ರಾಜೇಶ ಕೋನರೆಡ್ಡಿ, ಆರ್‌.ಎಸ್‌.ಪಾಟೀಲ, ಡಾ.ಗುರುಬಸವ ಮಹಾಮನೆ, ಶಕುಂತಲಾ ಹಾದಿಮನಿ, ಎನ್‌.ಎಸ್‌.ಕಮ್ಮಾರ, ಗುರುಸಿದ್ದಪ್ಪ ಬಡಿಗೇರ ಹಾಜರಿದ್ದರು.