ಶಿರಸಂಗಿ 04: ಸಮೀಪದ ಹೂಲಿ ಅಜ್ಜನವರ ಮಠಕ್ಕೆ ಕೇಂದ್ರದ ನೂತನ ರಾಜ್ಯ ರೈಲ್ವೆ ಸಚಿವ ಸುರೇಶ ಅಂಗಡಿ ಭೇಟಿ ನೀಡಿ ಅಜ್ಜನವರ ದರ್ಶನ ಪಡೆದುಕೊಂಡರು.
ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿ ಸತತ ನನ್ನನ್ನು ನಾಲ್ಕನೆ ಬಾರಿಗೆ ಲೋಕಸಭೆಗೆ ಆಯ್ಕೆಮಾಡಿ ಕಳಿಸುವಲ್ಲಿ ತಮ್ಮ ಪಾತ್ರ ದೊಡ್ಡದು. ನಿಮ್ಮ ಸಹಕಾರ, ಪ್ರೀತಿಯನ್ನು ಎಂದಿಗೂ ಮರೆಯುವದಿಲ್ಲ. ಪ್ರಧಾನಿ ಮೋದಿಯವರ ಪ್ರಕಾರ ಜಗತ್ತಿನಲ್ಲಿ ಬಲಿಷ್ಟ ಭಾರತ ನಿಮರ್ಾಣ ವಾಗಬೇಕಾದರೆ ನಾವೆಲ್ಲರು ಆಥರ್ಿಕವಾಗಿ ಸದೃಢವಾಗಬೇಕು ಎಂದರು.
ಶಾಸಕ ಆನಂದ ಮಾಮನಿ ಮಾತನಾಡಿ ಪ್ರಧಾನಿ ಮೋದಿಯವರ ಕಾರ್ಯಕ್ಕೆ ಮೆಚ್ಚಿ ಜನ ಮತ್ತೊಮ್ಮೆ ಜನಾದೇಶ ನೀಡಿದ್ದಾರೆ. ಹಿಂದೆಂದು ಆಗದ ಅಭಿವೃದ್ಧಿಯನ್ನು ಮೋದಿಯವರು ಮಾಡುತ್ತಿದ್ದಾರೆ ಎಂದರು.
ಉಮೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಸಾನಿಧ್ಯ ವಹಿಸಿದ್ದರು. ಮಾಜಿ ಶಾಸಕ ಜಗದೀಶ ಮೆಟಗುಡ್ಡ, ಸವದತ್ತಿ ಎಪಿಎಮ್ಸಿ ಅಧ್ಯಕ್ಷ ಜಗದೀಶ ಹನಸಿ, ಹೂಲಿ ಪಿಕೆಪಿಎಸ್ ಅಧ್ಯಕ್ಷ ಅಶೋಕ ಹುಜರತ್ತಿ, ಸಂಗಯ್ಯಾ ಸಾಲಿಮಠ, ಎಸ್.ಎಸ್. ದೇವನಗಾವಿ ಸೇರಿದಂತೆ ಗೆಳೆಯರ ಬಳಗದ ಸದಸ್ಯರು ಉಪಸ್ಥಿತರಿದ್ದರು.