ಸ್ಲಂ ಪ್ರದೇಶಗಳ ಅಭಿವೃದ್ಧಿಗೆ ಅಧಿಕಾರಿಗಳ ನಿರ್ಲಕ್ಷ್ಯ: ಹೋರಾಟಕ್ಕೆ ಸಜ್ಜಾಗಲು ಮಾನ್ವಿ ಕರೆ

ಲೋಕದರ್ಶನ ವರದಿ

ಗದಗ 30: ಗದಗ-ಬೆಟಗೇರಿ ಸ್ಲಂ ಪ್ರದೇಶಗಳ ಅಭಿವೃದ್ಧಿಗೆ ಆಗ್ರಹಿಸಿ ಕಳೆದ ಸುಮಾರು ವರ್ಷಗಳಿಂದ ನಮ್ಮ ಜನಪ್ರತಿನಿಧಿಗಳಿಗೆ ಮತ್ತು ಅಧಿಕಾರಿಗಳಿಗೆ ಮನವಿಗಳನ್ನು ನೀಡುತ್ತ ಅವರ ಗಮನಕ್ಕೆ ತಂದರು ಸಹ ನಮ್ಮ ಭಾಗದ ಪ್ರತಿನಿಧಿಗಳು ಹಾಗೂ ಅಧಿಕಾರಿಗಳು ನಗರದ ಸ್ಲಂ ಪ್ರದೇಶಗಳನ್ನು ಅಭಿವೃದ್ಧಿಗೊಳಿಸಲು ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಆದ್ದರಿಂದ ನಗರದ ಸ್ಲಂ ನಿವಾಸಿಗಳು ಒಂದಾಗಿ ಅಧಿಕಾರಿಗಳ ನಿರ್ಲಕ್ಷ್ಯ ಧೊರಣೆಯನ್ನು ಖಂಡಿಸಿ ಹೋರಾಟ ನಡೆಸಲು ಸಜ್ಜಾಗಬೇಕೆಂದು ಗದಗ ಜಿಲ್ಲಾ ಸ್ಲಂ ಸಮಿತಿ ಅಧ್ಯಕ್ಷರಾದ ಇಮ್ತಿಯಾಜ.ಆರ್.ಮಾನ್ವಿ ಕರೆ ನೀಡಿದರು.

                ಅವರು ಸ್ಲಂ ಜನಾಂದೋಲನ ಕನರ್ಾಟಕ ಮತ್ತು ಗದಗ ಜಿಲ್ಲಾ ಕೊಳಚೆ ನಿವಾಸಿಗಳ ಹಿತರಕ್ಷಣ ಸಮಿತಿ ಪದಾಧಿಕಾರಿಗಳ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತ ಕೇಂದ್ರ ಮತ್ತು ರಾಜ್ಯ ಸಕರ್ಾರಗಳಿಂದ ಗುಡಿಸಲ ಮುಕ್ತವಾಗಿ ಮಾಡಲು ಹಾಗೂ ಕೊಳಗೇರಿ ಪ್ರದೇಶಗಳ ಸಮಗ್ರ ಅಭಿವೃದ್ಧಿಗಾಗಿ ಕೊಟ್ಯಾಂತರ ಅನುದಾನ ಖಚರ್ು ಮಾಡಲಾಗುತ್ತಿದೆ, ಆದರೆ ಸ್ಥಳೀಯ ಜನಪ್ರತಿನಿಧಿಗಳ ನಿರ್ಲಕ್ಷ್ಯ ನೀತಿಯಿಂದ ಹಾಗೂ ಅಧಿಕಾರಿಗಳ ತಾರತಮ್ಯ ನೀತಿಯಿಂದ ನಗರದಲ್ಲಿಯ ಮೂಲ ಗುಡಿಸಲ ಪ್ರದೇಶಗಳು ವರೆಗೊ ಅಭಿವೃಧ್ದಿ ಕಾಣದೇ ಸ್ಥಳೀಯ ಸ್ಲಂ ನಿವಾಸಿಗಳು ನರಕಯಾತನೆ ಅನುಭವಿಸುತ್ತಿದ್ದಾರೆ, ಕೇಂದ್ರ ಸಕರ್ಾರದ ಹೌಸಿಂಗ್ ಫಾರ್ ಆಲ್ ಮತ್ತು ಪ್ರಧಾನ ಮಂತ್ರಿ ಆವಾಸ್ ಯೋಜನೆಯನ್ನು ಜಾರಿಗೆ ತಂದು ದೇಶದ ಪ್ರತಿಯೂಬ್ಬ ಬಡವನಿಗೆ ಸೂರು ಸಿಗಬೇಕೆಂದು ಕೊಟ್ಯಾಂತರ ಅನುದಾನ ನೀಡಲಾಗುತ್ತಿದೆ. ಆದರೆ ಇದು ನಿಜವಾದ ಫಲಾನುಭವಿಗಳಿಗೆ ಸಿಗದೇ ಸಕರ್ಾರದ ಯೋಜನೆಗಳು ಶ್ರೀಮಂತರ ಹಾಗೂ ಸ್ಥಿತಿವಂತರ ಪಾಲಾಗುತ್ತಿದೆ. ಸ್ಲಂ ಪ್ರದೇಶಗಳ ಬಡವರು ಇನ್ನು ಗುಡಿಸಲಗಳಲ್ಲಿ ಕನಿಷ್ಟಮಟ್ಟದ ಸೌಲಭ್ಯಗಳು ಇಲ್ಲದೇ ಬದುಕು ನಡೆಸುತ್ತಿದ್ದಾರೆ.

                ಆದ್ದರಿಂದ ನಮ್ಮ ಸ್ಲಂ ನಿವಾಸಿಗಳು ಇಂತಹ ವಿಷಯಗಳನ್ನು ಗಮನಿಸಿ ನಮ್ಮ ಮೂಲಭೂತವಾದ ಹಕ್ಕುಗಳನ್ನು ಪಡೆದುಕೊಳ್ಳಲು ಎಲ್ಲಾ ಸ್ಲಂ ನಿವಾಸಿಗಳು ಒಂದಾಗಿ ಹೋರಾಟ ನಡೆಸಬೇಕು ಎಂದು ಹೇಳಿದರು, ಉಪಾಧ್ಯಕ್ಷರಾದ ರವಿಕುಮಾರ ಬೆಳಮಕರ ಮಾತನಾಡಿ ಗದಗ ಜಿಲ್ಲಾ ಸ್ಲಂ ಸಮಿತಿಯಿಂದ ಕಳೆದ 5 ವರ್ಷದಿಂದ ನಗರದ ವಸತಿರಹಿತರ ಕುಟುಂಬಗಳಿಗೆ ವಸತಿ ಸೌಲಭ್ಯಕ್ಕೆ ಆಗ್ರಹಿಸಿ ನಿರಂತರ ಹೋರಾಟಗಳ ಫಲವಾಗಿ ಈಗ 3630 ಮನೆಗಳನ್ನು ನಿಮರ್ಿಸಲಾಗುತ್ತಿದೆ. ಮೂಲ ವಸತಿರಹಿತರ ಕುಟುಂಬಗಳಿಗೆ ಮನೆಗಳು ಸಿಗದೇ ಶ್ರೀಮಂತರ ಮತ್ತು ಸ್ಥೀವಂತರ ಪಾಲಾಗುವ ಅನುಮಾನಗಳು ಬರುತ್ತಿದೆ. ಆದ್ದರಿಂದ ಜಿಲ್ಲಾಡಳಿತ ತಕ್ಷಣ ಇದನ್ನು ಗಂಭೀರವಾಗಿ ಪರಿಗಣಿಸಿ ನಗರದಲ್ಲಿ ಸುಮಾರು ದಶಕಗಳಿಂದ ಬಾಡಿಗೆ ಮನೆಗಳಲ್ಲಿ ವಾಸಿಸುತ್ತಿರುವ ಮತ್ತು ಗುಡಿಸಲಗಳಲ್ಲಿ ವಾಸ ಮಾಡುತ್ತಿರುವ ಬಡ ಕುಟುಂಬಗಳಿಗೆ ಮನೆಗಳನ್ನು ಹಂಚಿಕೆ ಮಾಡಬೇಕು ಒಂದು ವೇಳೆ ಜಿಲ್ಲಾಡಳಿತ ಮತ್ತು ನಗರಸಭೆ ಪೌರಾಯುಕ್ತರು ನಿರ್ಲಕ್ಷ್ಯ ವಹಿಸಿದ್ದಲ್ಲಿ ಉಗ್ರವಾದ ಹೋರಾಟ ಹಮ್ಮಿಕೊಳ್ಳಲಾಗುವುದೆಂದು ಹೇಳಿದರು.

                ಸ್ಲಂ ಸಮಿತಿ ಪ್ರಧಾನ ಕಾರ್ಯದಶರ್ಿ ಅಶೋಕ ಕುಸಬಿ ಮಾತನಾಡಿ ಸ್ಲಂ ಜನರ ಹಕ್ಕೋತ್ತಾಯಗಳ ಹೋರಾಟಕ್ಕೆ ಇತಿಚ್ಚಿಗೆ ಜಿಲ್ಲಾಡಳಿತ ಮತ್ತು ನಗರಸಭೆ ಗಂಭೀರವಾಗಿ ಪರಗಣಿಸದೇ ನಿರ್ಲಕ್ಷ್ಯ ವಹಿಸುತ್ತಿದ್ದು, ಸ್ಲಂ ಜನರ ಸಹನೆಯನ್ನು ಪರಿಕ್ಷಿಸದೇ ಜನರ ಬೇಡಿಕೆಗಳನ್ನು ಸ್ಪಂದಿಸಲು ಮುಂದಾಗಬೇಕು ಇಲ್ಲವಾದಲ್ಲಿ ಸ್ಲಂ ಜನರ ವಿರೋಧಿ ಅಧಿಕಾರಿಗಳ ವಿರುದ್ಧ ಹೋರಾಟ ಅನಿವಾರ್ಯ ಎಂದು ತಿಳಿಸಿದರು. ಸ್ಲಂ ಮಹಿಳಾ ಸಮಿತಿ ಸಂಚಾಲಕಿ ಪರವೀನಬಾನು ಹವಾಲ್ದಾರ, ಮೆಹರುನಿಸಾ ಢಾಲಾಯತ, ಇಬ್ರಾಹಿಂ ಮುಲ್ಲಾ, ಮುನ್ನಾ ಅಗಡಿ, ಮೋಹನ ಬಳ್ಳಾರಿ, ಮಮ್ತಾಜಬೇಗಂ ಮಕಾನದಾರ, ವಂದನಾ ಶ್ಯಾವಿ, ನಜಮುನಿಸಾ ಮುರಗೋಡ, ರಫೀಕ ಧಾರವಾಡ, ಉಸಮಾನ ಚಿತ್ತಾಪೂರ, ಸಲೀಮ ಢಾಲಾಯತ, ಮೆಹಬೂಬ ಮುದಗಲ್ಲ, ಸುಶೀಲಮ್ಮ ಗೊಂದಾರ ಹಾಗೂ ನೂರಾರು ಪದಾಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.