ಘಟಪ್ರಭಾ: ಅಪರಿಚಿತ ವ್ಯಕ್ತಿಯ ಕೊಲೆ: ಆರೋಪಿಗಳ ಬಂಧನ

ಲೋಕದರ್ಶನ ವರದಿ

ಘಟಪ್ರಭಾ 19: ಘಟಪ್ರಭಾ ಎಡದಂಡೆ ಕಾಲುವೆಯಲ್ಲಿ ಕಳೆದ ಎಪ್ರಿಲ್ 16ರಂದು ದೊರೆತ ಅಪರಿಚಿತ ವ್ಯಕ್ತಿಯ ಕೊಲೆ ಆರೋಪಿಗಳನ್ನು  ಪತ್ತೆ ಹಚ್ಚುವಲ್ಲಿ ಘಟಪ್ರಭಾ ಪೋಲಿಸರು ಯಶ್ವಸಿಯಾಗಿದ್ದು ಕೊಲೆ ಮಾಡಿದ 5 ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ. 

    ಅಂದು ಸಿಕ್ಕ ವ್ಯಕ್ತಿಯ ಶವ ಬೈಲಹೊಂಗಲ ತಾಲೂಕಿನ ನೇಸರಗಿ ನಿವಾಸಿ ಜಗದೀಶ ತಿಪ್ಪಣ್ಣಾ ಕರಾಳಿ (35) ಎಂದು ತಿಳಿದು ಬಂದಿದ್ದು, ಆತ ಹಾಲಿ ಗೋಕಾಕದಲ್ಲಿ ವಾಸವಾಗಿದ್ದೇನೆ ಎಂದು ತಿಳಿದ ಮೇಲೆ ಆತನ ಕೊಲೆಗೆ ಕಾರಣವನ್ನು ಘಟಪ್ರಭಾ ಪೋಲಿಸರು ಮೇಲಾಧಿಕಾರಿಗಳ ಮಾರ್ಗದರ್ಶನದಲ್ಲಿ ಕಾಯರ್ಾಚರಣೆ ನಡೆಸಿದ್ದರು. ಕೆಲವು ಸಮಯ ಯಾವುದೆ ಸುಳಿವು ಸಿಗದ ನಂತರ ಅಂದು ರಾತ್ರಿಯ ಪೋನ್ ಕರೆಗಳ ಬಗ್ಗೆ ತಪಾಸಣೆ ನಡೆಸಿ ಕೆಲವು ವ್ಯಕ್ತಿಗಳನ್ನು ತಂದು ವಿಚಾರಿಸಿದಾಗ ಕೊಲೆ ಆರೋಪಿಗಳು ಪತ್ತೆಯಾಗಿದ್ದಾರೆ. 

   ಕೊಲೆ ಮಾಡಿದ ಗೋಕಾಕ ನಗರದ ಆರೋಪಿಗಳಾದ ಮನೋಜಕುಮಾರ ವಾಲಿಕಾರ, ಜ್ಯೋತಿಭಾ ರವಳೋಜಿ, ರಾಹುಲ ಎಂಟಗೌಡರ, ಮಂಜುನಾಥ ಕಲ್ಲೋಳಿ, ಸಾಗರ ತಾನಾಜಿ ಸೇರಿ ಕೊಲೆಯಾದ ತಿಪ್ಪಣ್ಣಾ ಕರಾಳಿ ಹತ್ತಿರವಿರುವ ಹಣವನ್ನು ದೋಚುವ ಸಲುವಾಗಿ ರಾತ್ರಿ ಗೋಕಾಕದ ಸಂಗೋಳ್ಳಿ ರಾಯಣ್ಣನ ಸರ್ಕಲ್ನಿಂದ  ರಿಕ್ಷಾದಲ್ಲಿ ಅಪಹರಿಸಿ ಘಟಪ್ರಭಾ ಪೋಲಿಸ್ ಠಾಣೆಯ ಹದ್ದಿಯ  ಶಿಂಗಳಾಪೂರ ಹತ್ತಿರ ನಿರ್ಜನ ಪ್ರದೇಶದಲ್ಲಿ ಹಣವನ್ನು ದೋಚಿ ನಂತರ ಚಾಕುವಿನಿಂದ ಹೊಡೆದು ಕೊಲೆ ಮಾಡಿ ನಂತರ ಅವನ ಶವವನ್ನು ಪುರಾವೆಯನ್ನು ನಾಶ ಮಾಡುವ  ಉದ್ದೇಶದಿಂದ ತುಂಬಿ ಹರಿಯುತ್ತಿರುವ ಘಟಪ್ರಭಾದ ಎಡದಂಡೆ ಕಾಲುವೆಗೆ ತಂದು ಹಾಕಿ ಪರಾರಿಯಾಗಿರುವುದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ. ಆರೋಪಿಗಳಿಂದ ಕೊಲೆಗೆ ಬಳಿಸಿದ ರಿಕ್ಷಾ, ಮೋಟಾರ ಸೈಕಲ್, ಮೊಬೈಲ್ ಪೋನ್ಗಳನ್ನು ವಶಪಡಿಸಿಕೊಂಡಿದ್ದಾರೆ. 

    ತನಿಕೆಯನ್ನು ಮೇಲಾಧಿಕಾರಿಗಳ ಮಾರ್ಗದರ್ಶನದಲ್ಲಿ ಮೂಡಲಗಿ ಸಿಪಿಐ ವೆಂಕಟೇಶ ಮುರನಾಳ, ಘಟಪ್ರಭಾ ಪಿಎಸ್ಐ ವೈ.ಆರ್.ಬಿಳಿಗಿ ಹಾಗೂ ಸಿಬ್ಬಂದಿಯವರು ಕೇವಲ 40 ದಿನದಲ್ಲಿ ಪತ್ತೆ ಮಾಡಿ ಆರೋಪಿಗಳಿಗೆ ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ.