ಬೆಳಗಾವಿ 7: ಕ್ರೀಡಾಪಟುಗಳು ಜೀವನದಲ್ಲಿ ಯಶಸ್ವಿಯಾಗಬೇಕಾದರೆ ಎಲ್ಲ ರೀತಿಯ ಸಂಕಷ್ಟಗಳನ್ನು ಎದುರಿಸುವ ಮಾನಸಿಕ ದೃಢತೆ ಹೊಂದುವುದು ಅಗತ್ಯವಾಗಿದೆ ಎಂದು ಭಾರತೀಯ ಅಂಧರ ಕ್ರೀಕೆಟ್ ತಂಡದ ಮಾಜಿ ಕ್ಯಾಪ್ಟನ್ ಪದ್ಮಶ್ರೀ ಶೇಖರ ನಾಯ್ಕ ಅವರು ಅಭಿಪ್ರಾಯಪಟ್ಟರು.
ಶನಿವಾರದಂದು ಜೈನ ಇಂಟರ್ನ್ಯಾಷನಲ್ ಟ್ರೆಡ್ ಅರ್ಗನéೈಝೇಷನ ಜಿತೋ ಯುವ ಘಟಕದಿಂದ ರಣನೀತಿ.3 " ಮೂರನೇಯ ಆವೃತ್ತಿಯಡಿ ಇದೇ ಅಗಸ್ಟ 11 ರಿಂದ 14 ರವರೆಗೆ ನಡೆಯುವ ಕ್ರೀಡಾ ಸ್ಫಧರ್ಾಮೇಳದ ಅಂಗವಾಗಿ ಕ್ರೀಡಾ ಪಟುಗಳ ಹರಾಜು ಪ್ರಕ್ರಿಯೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಾನು ಜೀವನದಲ್ಲಿ ಯಶಸ್ಸು ಕಾಣಬೇಕಾದರೆ ಬಹಳ ಕಷ್ಟಗಳನ್ನು ಅನುಭವಿಸಿದ್ದೇನೆ. ಅಂಧರು ಎಂಬ ಕಾರಣದಿಂದ ಕೆಲವೊಂದು ಸಂದರ್ಭದಲ್ಲಿ ಕಿಳುರಮೆ ಅನುಭವಿಸಿದ್ದೇನೆ. ಆದರೆ ಇವೆಲ್ಲದಕ್ಕೂ ಅಂಜದೆ ಧೈರ್ಯದಿಂದ ಮುನ್ನುಗ್ಗಿ ಕ್ರಿಕೆಟ್ ತಂಡದಲ್ಲಿ ಸ್ಥಾನವನ್ನು ಗಿಟ್ಟಿಸಿಕೊಂಡು ವಿಶೇಷ ಸಾಧನೆ ಮಾಡಿ ದೇಶಕ್ಕೆ ಗೌರವ ಮತ್ತು ಹೆಮ್ಮೆ ತಂದಿರುವುದು ಸಂತೋಷದ ಸಂಗತಿಯಾಗಿದೆ ಎಂದು ಹೇಳಿದರು.
ಇಂದು ಬೆಳಗಾವಿಯ ಜಿತೋ ಸಂಸ್ಥೆಯು ಕ್ರೀಡಾಸ್ಫಧರ್ಾ ಮೇಳವನ್ನು ಆಯೋಜಿಸುವ ಮೂಲಕ ಪ್ರತಿಭಾವಂತ ಕ್ರೀಡಾಪಟುಗಳಿಗೆ ಬೆಳವಣಿಗೆಗೆ ಪ್ರೋತ್ಸಾಹ ನೀಡುವಂತಹ ಕಾರ್ಯಕ್ರಮ ನಡೆಸುತ್ತಿರುವುದು ಶ್ಲಾಘನೀಯವಾಗಿದೆ. ಇದೇ ರೀತಿ ಪ್ರತಿಯೊಂದು ಜಿಲ್ಲೆಯಲ್ಲಿ ಕಾರ್ಯಕ್ರಮಗಳು ನಡೆದರೆ ಕ್ರೀಡಾಪಟುಗಳಿಗೆ ಉತ್ತೇಜನ ನೀಡಬಹುದು ಎಂದು ಅವರು ತಿಳಿಸಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ದಕ್ಷಿಣ ಮತ ಕ್ಷೇತ್ರದ ಶಾಸಕ ಅಭಯ ಪಾಟೀಲ ಅವರು ಮಾತನಾಡಿ, ಜಿತೋ ಸಂಸ್ಥೆಯು ಕ್ರೀಡಾಪಟುಗಳಿಗೆ ಉತ್ತೇಜನ ನೀಡುತ್ತ ಅನೇಕ ಉದಯೋನ್ಮುಖ ಕ್ರೀಡಾಪಟುಗಳಿಗೆ ಇಂದು ವೇದಿಕೆಯನ್ನು ಕಲ್ಪಿಸಿಕೊಟ್ಟಿದೆ. ಬೆಳಗಾವಿಯಲ್ಲಿ ಅನೇಕ ಕ್ರೀಡಾ ಪ್ರತಿಭೆಗಳಿದ್ದಾರೆ. ಆದರೆ ಅವರಿಗೆ ಸೂಕ್ತ ವೇದಿಕೆ ಇಲ್ಲದ ಕಾರಣ ಕ್ರೀಡೆಯಿಂದ ದೂರ ಉಳಿಯುವಂತಾಗಿದೆ. ಮುಂಬರುವ ದಿನಗಳಲ್ಲಿ ಬೆಳಗಾವಿಯಲ್ಲಿ ಕೈಗಾರಿಕೋದ್ಯಮದ ಜೊತೆಗೆ ಕ್ರೀಡಾ ಸಂಕುಲಗಳನ್ನು ಪ್ರಾರಂಭಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಅಭಯ ಪಾಟೀಲ ಅವರು ಭರವಸೆ ನೀಡಿದರು.
ಸಮಾರಂಭದಲ್ಲಿ ಜಿತೋ ಅಧ್ಯಕ್ಷ ಸತೀಶ ಶಹಾ ಅವರು ಮಾತನಾಡಿದರು. ವೇದಿಕೆ ಮೇಲೆ ಜಿತೋ ಮಹಿಳಾ ಘಟಕದ ಅಧ್ಯಕ್ಷೆ ಭಾರತಿ ಹರದಿ ಉಪಸ್ಥಿತರಿದ್ದರು. ಜಿತೋ ಯುವ ಘಟಕದ ಅಧ್ಯಕ್ಷ ಅಮಿತ ದೋಷಿ ಅತಿಥಿಗಳನ್ನು ಸ್ವಾಗತಿಸಿ ಪರಿಚಯಿಸಿದರು. ಕಾರ್ಯದಶರ್ಿ ಅಕ್ಷಯ ಭೊಜನ್ನವರ ವಂದಿಸಿದರು. ರಜತ ಹರದಿ ಮತ್ತು ಸಾಹಿತ್ಯಾ ದೊಡ್ಡಣ್ಣವರ ಕಾರ್ಯಕ್ರಮ ನಿರೂಪಿಸಿದರು. ಸಮಾರಂಭದ ನಂತರ 120 ವಿವಿಧ ಕ್ರೀಡೆಗಳಲ್ಲಿನ ಕ್ರೀಡಾ ಪಟುಗಳ ಹರಾಜು ಕಾರ್ಯಕ್ರಮ ನಡೆಯಿತು.