ಉನ್ನತ ಶಿಕ್ಷಣದಲ್ಲಿ ಕೌಶಲ್ಯಾಭಿವೃದ್ಧಿಯ ಪಾತ್ರ ರಾಜ್ಯ ಮಟ್ಟದ ಕಾಯರ್ಾಗಾರ

ಲೋಕದರ್ಶಮ ವರದಿ

ಧಾರವಾಡ 26: ಇದು ಸ್ಪಧರ್ಾತ್ಮಕ ಯುಗವಾಗಿದ್ದು, ಕೌಶಲ್ಯ ಹೊಂದಿರುವ ಪ್ರತಿಭೆಗಳಿಗೆ ಹೆಚ್ಚಿನ ಅವಕಾಶಗಳಿವೆ. ಆದ್ದರಿಂದ ಯುವಕರು ವಿವಿಧ ಕೌಶಲ್ಯಗಳನ್ನು ಕರಗತ ಮಾಡಿಕೊಳ್ಳಬೇಕು ಎಂದು ದೆಹಲಿಯ ಅಖಿಲ ಭಾರತೀಯ ತಾಂತ್ರಿಕ ಶಿಕ್ಷಣ ಮಂಡಳಿಯ ಮಾಜಿಅಧ್ಯಕ್ಷ ಡಾ. ಎಸ್.ಎಸ್. ಮಂಥಾ ಹೇಳಿದರು.

  ಕನರ್ಾಟಕ ವಿಶ್ವವಿದ್ಯಾಲಯದ ಗೋಲ್ಡನ್ ಜುಬಲಿ ಸಭಾಂಗಣದಲ್ಲಿ, ಕನರ್ಾಟಕ ಸಕರ್ಾರದ ಕನರ್ಾಟಕ ರಾಜ್ಯ ಉನ್ನತ ಶಿಕ್ಷಣ ಮಂಡಳಿ ಬೆಂಗಳೂರು ಹಾಗೂ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆ, ರಾಷ್ಟ್ರೀಯ ಉಚ್ಛತರ ಶಿಕ್ಷಾ ಅಭಿಯಾನ (ರೂಸಾ) ಮತ್ತು ಕನರ್ಾಟಕ ವಿಶ್ವವಿದ್ಯಾಲಯ ಇವುಗಳ ಸಂಯುಕ್ತಾಶ್ರಯದಲ್ಲಿ 'ಉನ್ನತ ಶಿಕ್ಷಣದಲ್ಲಿ ಕೌಶಲ್ಯಾಭಿವೃದ್ಧಿಯ ಪಾತ್ರ ವಿಷಯ ಕುರಿತು ದಿ.24ರಂದು ನಡೆದ ಕಾಯರ್ಾಗಾರ ಉದ್ಘಾಟಿಸಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

ಯುಜಿಸಿಯು ಸಮಾಜದ ಎಲ್ಲ ಹಂತದ ಯುವಕರಿಗೆ ಕೌಶಲ್ಯಾಭಿವೃದ್ಧಿ ತರಬೇತಿ ನೀಡಲು ಮಾದರಿಗಳನ್ನು ರೂಪಿಸಿದೆ. ಅಲ್ಲದೇ ಈ ದಿಶೆಯಲ್ಲಿ ತರಬೇತಿ ನೀಡಲು ಸಾಕರ್್ ದೇಶಗಳೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಉನ್ನತ ವ್ಯಾಸಂಗದ ಅವಧಿಯಲ್ಲಿ ಪ್ರಾಯೋಗಿಕ ಪಠ್ಯಕ್ಕೆ ಪ್ರಾಶಸ್ತ್ಯ ಕೊಡಬೇಕು. ತಂತ್ರಜ್ಞಾನ ಬೆಳೆದಂತೆ ಕಾರ್ಯಗಳ ಶೈಲಿಯೂ ಬದಲಾಗುತ್ತಿದ್ದು, ಅದಕ್ಕೆ ಅನುಗುಣವಾಗಿ ಕೌಶಲ್ಯಗಳನ್ನು ಬೆಳೆಸಿಕೊಳ್ಳಬೇಕು. ಪ್ರಸ್ತುತ ಶಿಕ್ಷಣ ಅನೇಕ ಕಟ್ಟುಪಾಡುಗಳನ್ನು ಹೊಂದಿದ್ದು ಹಾಗೂ ಅನೇಕರು ವಿವಿಧ ಕಾರಣಕ್ಕೆ ವ್ಯಾಸಂಗ ಕೈಬಿಡುತ್ತಿದ್ದಾರೆ. ದೇಶದ ಕೇವಲ 15-20%ರಷ್ಟು ಪದವೀಧರರು ಮಾತ್ರ ಉದ್ಯೋಗಕ್ಕೆ ಅರ್ಹರಾಗಿದ್ದಾರೆ. ಕೌಶಲ್ಯಗಳ ಕೊರತೆಯಿಂದಾಗಿ ನಿರುದ್ಯೋಗ ಸಮಸ್ಯೆ ಹೆಚ್ಚಾಗುತ್ತಿದೆ. ಸಾಂಪ್ರದಾಯಿದ ಶಿಕ್ಷಣದ ಜೊತೆಗೆ ಕೌಶಲ್ಯಾಭಿವೃದ್ಧಿ ತರಬೇತಿಗಳನ್ನು ಅಳವಡಿಸಿಕೊಳ್ಳುವುದು ಇಂದಿನ ಅಗತ್ಯತೆಯಾಗಿದೆ ಎಂದರು. 

ದೆಹಲಿಯ ರಾಷ್ಟ್ರೀಯ ಕೌಶಲ್ಯಾಭಿವೃದ್ಧಿ ಮಂಡಳಿಯ ಮುಖ್ಯಸ್ಥೆ ರೇಖಾ ಮೆನನ್ ಮಾತನಾಡಿ, ಮೇಕ್ ಇನ್ ಇಂಡಿಯಾ ಯೋಜನೆಯಡಿ ವಿದೇಶಿಯರು ಬಂಡವಾಳ ಹೂಡಲು ಮುಂದಾಗಿದ್ದಾರೆ. ದೇಶದ ಪ್ರತಿಯೊಂದು ಜಿಲ್ಲೆಯಲ್ಲಿ ಕೌಶಲ್ಯ ತರಬೇತಿ ನೀಡಲು ಕೌಶಲ್ಯಾಭಿವೃದ್ಧಿ ತರಬೇತಿ ಕೇಂದ್ರಗಳನ್ನು ಸ್ಥಾಪಿಸಲಾಗುವುದು. ಯುವಕರಿಗೆ ಅಗತ್ಯ ಕೌಶಲ್ಯ ನೀಡದಿದ್ದರೆ ಅಪರಾಧಗಳ ಸಂಖ್ಯೆ ಹೆಚ್ಚುತ್ತದೆ. ತಂತ್ರಜ್ಞಾನದ ಬದಲಾವಣೆಯಿಂದ ಮಾನವ ಕಾರ್ಯ ಕಡಿತವಾಗುವುದಿಲ್ಲ. ಭಾರತ ಅತಿ ಹೆಚ್ಚು ಯುವಕರನ್ನು ಹೊಂದಿದ್ದರೂ, ಉನ್ನತ ಶಿಕ್ಷಣ ಪಡೆಯುವ ವಿದ್ಯಾಥರ್ಿಗಳ ಸಂಖ್ಯೆಗಣನೀಯವಾಗಿ ಕಡಿಮೆಯಾಗಿದೆ. ಸಕರ್ಾರದ ಕಾರ್ಯಕ್ರಮವಾದ ಪ್ರಧಾನಮಂತ್ರಿ ಕೌಶಲ್ಯ ವಿಕಾಸ ಯೋಜನೆ ಹಾಗೂ ಅನೇಕ ಖಾಸಗಿ ಸಂಸ್ಥೆಗಳು ಕೌಶಲ್ಯಾಭಿವೃದ್ಧಿಯತ್ತ ಗಮನ ಹರಿಸಿವೆ. ಈ ದಿಶೆಯಲ್ಲಿ ಅಂತರಾಷ್ಟ್ರೀಯ ಕೌಶಲ್ಯಗಳ ಸ್ಪಧರ್ೆಗಳನ್ನು ಸಹ ಆಯೋಜಿಸಲಾಗುತ್ತಿದೆ. ಯುವಕರು ಸರಕಾರದ ವಿವಿಧ ಕೌಶಲ್ಯಾಭಿವೃದ್ಧಿ ಯೋಜನೆಗಳ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.

ಕ್ಯಾಲಿಕಟ್ನ ರಾಷ್ಟ್ರೀಯ ವಿದ್ಯುನ್ಮಾನ ಹಾಗೂ ಮಾಹಿತಿ ತಂತ್ರಜ್ಞಾನ ಸಂಸ್ಥೆಯಕಾರ್ಯನಿವರ್ಾಹಕ ನಿದರ್ೇಶಕ ಡಾ. ಎಮ್.ಪಿ. ಪಿಳ್ಳೈ ಮಾತನಾಡಿ, ದೇಶದಲ್ಲಿ ಉತ್ಪಾದನಾ ವರ್ಗವನ್ನು ನಿರ್ಲಕ್ಷಿಸಲಾಗಿದ್ದು, ಇದರಿಂದ ನಿರುದ್ಯೋಗ ಸೃಷ್ಟಿಯಾಗಿದೆ. ನಿರುದ್ಯೋಗಕ್ಕೆ ಇಂಗ್ಲೀಷ್ ಭಾಷಾ ಹಾಗೂ ಸಾಮಾನ್ಯ ಜ್ಞಾನದ ಕೊರತೆಗಳು ಸಹ ಕಾರಣವಾಗಿವೆ. ಡಿಜಿಟಲ್ ಶಿಕ್ಷಣ, ವಿಮಶರ್ಾತ್ಮಕಯೋಚನೆ, ಸೃಜನಾತ್ಮಕ ಕಲೆ ಬೆಳೆಸಿಕೊಂಡಾಗ ಮಾತ್ರ ಕೌಶಲ್ಯಗಳನ್ನು ರೂಢಿಸಿಕೊಳ್ಳಬಹುದು. 2022ರ ವೇಳೆಗೆ ನಾಲ್ಕು ನೂರು ಮಿಲಿಯನ್ ಜನರಿಗೆ ಕೌಶಲ್ಯಾಭಿವೃದ್ಧಿ ತರಬೇತಿ ನೀಡುವ ಗುರಿ ಹೊಂದಲಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಕವಿವಿಯ ಕುಲಪತಿ ಪ್ರೊ. ಪ್ರಮೋದ ಗಾಯಿ ಮಾತನಾಡಿ, ಕೌಶಲ್ಯಾಭಿವೃದ್ಧಿ ಎನ್ನುವುದು ಪ್ರತ್ಯೇಕ ವಿಷಯವಲ್ಲ. ಇದು ಉದ್ಯೋಗಕ್ಕೆ ಪೂರಕವಾದ ವಿಷಯಗಳನ್ನು ಬೋಧಿಸುವ ಮೂಲಕ ಉದ್ಯೋಗ ದೊರೆಯುವಂತೆ ಮಾಡುವುದಾಗಿದೆ ಎಂದು ಹೇಳಿದರು.

ದಾವಣಗೆರೆ ವಿವಿಯ ಕುಲಪತಿಡಾ. ಎಸ್. ಬಿ. ಹಲಸೆ, ಅಕ್ಕಮಹಾದೇವಿ ವಿವಿಯ ಕುಲಪತಿ ಡಾ. ಸಬಿಹಾ ಭೂಮಿಗೌಡ, ಕವಿವಿಯ ವಿತ್ತಾಧಿಕಾರಿ ಪ್ರೊ. ಆರ್. ಎಲ್. ಹೈದರಾಬಾದ, ಕವಿವಿ ರೂಸಾ ನೋಡಲ್ ಅಧಿಕಾರಿ ಡಾ. ಆರ್. ಆರ್.ಕಾಂಬಳೆ  ಕವಿವಿಯ ಮೌಲ್ಯಮಾಪನ ಕುಲಸಚಿವ ಪ್ರೊ. ಎನ್. ಎಮ್. ಸಾಲಿ ಉಪಸ್ಥಿತರಿದ್ದರು. ಡಾ. ಜೆ. ಆರ್. ಟೋಣಣ್ಣವರ ನಿರೂಪಿಸಿದರು. ಕನರ್ಾಟಕ ರಾಜ್ಯಉನ್ನತ ಶಿಕ್ಷಣ ಮಂಡಳಿಯ ಕಾರ್ಯಕಾರಿ ನಿದರ್ೇಶಕ ಡಾ. ಎಸ್. ಎ. ಕೋರಿ ಅತಿಥಿಗಳನ್ನು ಪರಿಚಯಿಸಿದರು. ಕವಿವಿಯ ಕುಲಸಚಿವ ಡಾ. ಕೆ. ಎಮ್. ಹೊಸಮನಿ ವಂದಿಸಿದರು.

ಫೋಟೊ ಕ್ಯಾಪ್ಷನ್ :

ಕವಿವಿಯ ಗೋಲ್ಡನ್ ಜುಬಲಿ ಸಭಾಂಗಣದಲ್ಲಿ ನಡೆದ 'ಉನ್ನತ ಶಿಕ್ಷಣದಲ್ಲಿ ಕೌಶಲ್ಯಾಭಿವೃದ್ಧಿಯ ಪಾತ್ರ ರಾಜ್ಯ ಮಟ್ಟದ ಕಾಯರ್ಾಗಾರವನ್ನು ಕುಲಪತಿ ಪ್ರೊ. ಪ್ರಮೋದ ಗಾಯಿ ಉದ್ಘಾಟಿಸಿದರು. ಡಾ. ಎಸ್.ಎಸ್. ಮಂಥಾ, ರೇಖಾ ಮೆನನ್, ಡಾ. ಎಮ್.ಪಿ. ಪಿಳ್ಳೈ, ಡಾವಣಗೇರಿ ವಿ.ವಿ.ಕುಲಪತಿಡಾ. ಎಸ್. ಬಿ. ಹಲಸೆ, ವಿಜಯಪುರ ಮಹಿಳಾವಿವಿ ಕುಲಪತಿ ಡಾ. ಸಬಿಹಾ ಭೂಮಿಗೌಡ, ಡಾ. ಎಸ್. ಎ. ಕೋರಿ, ಡಾ. ಕೆ. ಎಮ್. ಹೊಸಮನಿ ಚಿತ್ರದಲ್ಲಿದ್ದಾರೆ.