ನರೇಗಾ ಯೋಜನೆ ಕೂಲಿ ದರ 370ಕ್ಕೆ ಹೆಚ್ಚಳ
ಕುಕನೂರ 04: ತಾಲೂಕಿನ ತಳಕಲ್ ಗ್ರಾಮ ಪಂಚಾಯತಿ ವ್ಯಾಪ್ತಿಯ ಅಡವಿಹಳ್ಳಿ ಕೆರೆ ಕಾಮಗಾರಿ ಸ್ಥಳದಲ್ಲಿ ರೋಜಗಾರ ದಿನ ಆಚರಿಸಿ ಮಾನ್ಯ ಸಹಾಯಕ ನಿರ್ದೇಶಕರು ಗ್ರಾಮೀಣ ಉದ್ಯೋಗ ಶರಣಪ್ಪ ಕೆಳಗಿನಮನಿ ಸರ್ ಮಾತನಾಡಿ ನರೇಗಾ ಯೋಜನೆಯಡಿ ಸದರಿ ಆರ್ಥಿಕ ವರ್ಷದಲ್ಲಿ ರೂ.21 ಹೆಚ್ಚಿಸಿ ರೂ. 370 ಆಗಿದೆ ಇದರ ಸದುಪಯೋಗವನ್ನು ಪಡೆಸುಕೊಳ್ಳಬೇಕು.
ನಿರಂತರ ಕೆಲಸ ಮಾಡಲು ಇದೇ ಬೇಸಿಗೆಯಲ್ಲಿ 90 ದಿನಗಳ ವರೆಗೆ ಕೆಲಸ ಮಾಡಿದಲ್ಲಿ ನಮೂನೆ -6 ಸಲ್ಲಿಸಿ ಕೆಲಸ ಪಡೆಯಲು ಸಲಹೆ ನೀಡಿದರು. ಅದರಂತೆ ಅಳತೆ ಪ್ರಕಾರ ಕೆಲಸ ಮಾಡಿದಲ್ಲಿ 100 ದಿನಕ್ಕೆ ರೂ. 37000 ಸಿಗುತ್ತದೆ. ಕೂಲಿಕಾರರು ಸುರಕ್ಷತೆ ದೃಷ್ಠಿಯಿಂದ ಸರ್ಕಾರದ ವಿಮಾ ಸೌಲಭ್ಯವನ್ನು ಹೊಂದಬೇಕು ಎಲ್ಲರೂ ಕಡ್ಡಾಯವಾಗಿ ಕಒಖಃಙ, ಕಒಎಎಃಙ. ಂಖಿಂಐ ಕಜಟಿಣಠ, ಪ್ರಧಾನ ಮಂತ್ರಿ ಶ್ರಮ ಯೋಗಿ ಮಾನ್ ಧನ್ ಯೋಜನೆಯಡಿ ಪೆನ್ ಷನ್ ಯೋಜನೆಗೆ ನೊಂದಣಿ ಯಾಗಬೇಕು, ಬಿಸಿಲು ಹೆಚ್ಚಾಗಿರುವುದರಿಂದ ಎಲ್ಲರೂ ನೆರಳಿಗಾಗಿ ಟವಲ್ ಹಾಗೂ ವಸ್ತ್ರಗಳನ್ನು ತಲೆಗೆ ಹಾಕಬೇಕು, ನೀರು ಹೆಚ್ಚಾಗಿ ಕುಡಿಯಬೇಕು ಎಂದರು.ತಾಂತ್ರಿಕ ಸಂಯೋಜಕ ಸುರೇಶ್ ದೇಸಾಯಿ ರವರು ಮಾತನಾಡಿ ಅಳತೆಯ ಪ್ರಕಾರ ಒಬ್ಬ ಕೂಲಿಕಾರರು 1.03 ಕ್ಯೂಬಿಕ್ ಮೀಟರ್ ಕಡಿದರೆ ಪೂರ್ತಿ 370 ಕೂಲಿ ಸಿಗುತ್ತದೆ ಎಂದರು.ಸ್ಥಳದಲ್ಲಿ ಐ.ಇ.ಸಿ ಸಂಯೋಜಕ ಲಕ್ಷ್ಮಣ ಕೆರಳ್ಳಿ ಕಂಪ್ಯೂಟರ್ ಅಪರೇಟರ್ ಪ್ರದೀಪ್ ಜನಾದ್ರಿ ಕಾಯಕ ಬಂಧುಗಳು 350 ಕ್ಕೂ ಹೆಚ್ಚು ಕೂಲಿಕಾರರು ಹಾಜರಿದ್ದರು.