ವಿಶೇಷ ಲೋಕ ಅದಾಲತ್‌ನಲ್ಲಿ 1274 ಪ್ರಕರಣಗಳು ರೂ.3,70,59,863 ಮೊತ್ತದ ಪರಿಹಾರ ಇತ್ಯರ್ಥ
ಧಾರವಾಡ 26: ಕರ್ನಾಟಕ ಉಚ್ಚ ನ್ಯಾಯಾಲಯದ ಧಾರವಾಡ ಪೀಠದಲ್ಲಿ ಇಂದು (ಏ.26) ಬೆಳಿಗ್ಗೆಯಿಂದ ಸಂಜೆಯವರೆಗೆ ಹಿರಿಯ ನ್ಯಾಯಮೂರ್ತಿಗಳಾದ ಎಸ್ ಜಿ. ಪಂಡಿತ ಅವರ ನೇತೃತ್ವದಲ್ಲಿ ವಿಶೇಷ ಲೋಕ ಅದಾಲತ್ ಏರಿ್ಡಸಲಾಗಿತ್ತು. ಈ ವಿಶೇಷ ಲೋಕ ಅದಾಲತನಲ್ಲಿ ನ್ಯಾಯಮೂರ್ತಿಗಳಾದ ಎಸ್. ಜಿ. ಪಂಡಿತ, ಇ. ಎಸ್. ಇಂದಿರೇಶ್, ವಿ. ಶ್ರೀಶಾನಂದ, ಸಿ.ಎಮ್. ಪೂಣಚ್ಚ, ಜಿ. ಬಸವರಾಜ ಮತ್ತು ಉಮೇಶ ಎಮ್. ಅಡಿಗ ಹಾಗೂ ಇವರೊಂದಿಗೆ ಲೋಕ ಅದಾಲತ್‌ನ ಸದಸ್ಯರಾದ ಗೋಪಾಲ ಬಿ. ಪಾಟೀಲ, ಸಾಜೀದ ಗೂಡವಾಲಾ, ರಾಕೇಶ ಎಮ್. ಬಿಳ್ಕಿ, ವಿ. ಪಿ. ವಡವಿ, ಸೀತಾಲಕ್ಷ್ಮಿ ಪುರ್ಲಿ ಮತ್ತು ಶೈಲಾ ಬೆಳ್ಳಿಕಟ್ಟಿ, ಈ ರೀತಿಯಾಗಿ ಒಟ್ಟು 6 ಪೀಠಗಳನ್ನು ಆಯೋಜಿಸಲಾಗಿತ್ತು. ಸದರಿ ಲೋಕ ಅದಾಲತಿನಲ್ಲಿ ಅಪಘಾತ ಪರಿಹಾರ ಪ್ರಕರಣಗಳ ಜೊತೆಗೆ ವಿಶೇಷವಾಗಿ ಚೆಕ್ಕು ಅಮಾನ್ಯ ಪ್ರಕರಣಗಳ ಮೇಲ್ಮನವಿಗಳು-43, ಸಿವಿಲ್ ಪ್ರಕರಣಗಳು-2, ರಿಟ್ ಅರ್ಜಿಗಳು-05 ಈ ರೀತಿ ಸುಮಾರು ವರ್ಷಗಳಿಂದ ಇತ್ಯರ್ಥವಾಗದ ಪ್ರಕರಣಗಳನ್ನು ಇತ್ಯರ್ಥಗೊಳಿಸುವ ಮೂಲಕ ಉಬಯ ಪಕ್ಷಗಾರರ ಪರಸ್ಪರ ಸಂಬಂಧಗಳನ್ನು ಉತ್ತಮವಾಗಿ, ಸೌಹಾರ್ದಯುತವಾಗಿ ಎಲ್ಲರಿಗೂ ನ್ಯಾಯ ಎಂಬ ಧೈಯ ವಾಕ್ಯದಂತೆ ಅತ್ಯಂತ ಸರಳ ರೀತಿಯಲ್ಲಿ ನ್ಯಾಯಾಲಯದ ಅಂಗಳಕ್ಕೆ ಬಂದ ಕಕ್ಷಿದಾರರಿಗೆ ನ್ಯಾಯವು ದೊರಕುವಂತೆ ಮಾಡಿದ್ದು ಈ ವಿಶೇಷ ಲೋಕ ಅದಾಲತ್‌ನಲ್ಲಿ ಕಾಣಬಹುದಾಗಿತ್ತು.ಸದರಿ ಆದಾಲತನಲ್ಲಿ ಒಟ್ಟು 1274 ಪ್ರಕರಣಗಳನ್ನು ಕೈಗೆತ್ತಿಕೊಳ್ಳಲಾಗಿತ್ತು. ಆ ಪೈಕಿ ಒಟ್ಟು 173 ಪ್ರಕರಣಗಳನ್ನು ರೂ.3,70,59,863/- ಮೊತ್ತಕ್ಕೆ ಇತ್ಯರ್ಥಪಡಿಸಲಾಯಿತು ಎಂದು ಉಚ್ಛ ನ್ಯಾಯಾಲಯ ಕಾನೂನು ಸೇವಾ ಸಮಿತಿ ಧಾರವಾಡ ಪೀಠದ ಕಾರ್ಯದರ್ಶಿಗಳು ಆಗಿರುವ ಮತ್ತು ಅಧೀಕ ವಿಲೇಖನಾಧಿಕಾರಿಗಳು (ನ್ಯಾಯಾಂಗ) ಆಗಿರುವ ಜೆರಾಲ್ಡ್ ರುಡಾಲ್ಫ್ ಮೆಂಡೋನ್ಸಾ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.