ತಾಳಿಕೋಟೆ 26: ಪ್ರತಿಭೆಗಳು ಗುಡಿಸಲಲ್ಲಿ ಮಾತ್ರವಲ್ಲ, ಬೀದಿಯಲ್ಲಿ ಅರಮನೆಯಲ್ಲಿಯೂ ಜನಿಸುತ್ತವೆ. ಆದರೆ ಅವುಗಳ ಸಾಮರ್ಥ್ಯ ಗುರುತಿಸಿ ಅವಕಾಶ ಯೊದಗಿಸಿ ಪ್ರೋತ್ಸಾಹಿಸಿದರೆ ಮಾತ್ರ ಸಾಧನೆಯ ಗುರಿ ತಲುಪಲು ಸಾಧ್ಯ ಎಂದು ಯುಪಿಎಸ್ ಸಿ ಟಾಪರ್ ಮಡಿಕೇಶ್ವರ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಮಹೇಶ ಮಡಿವಾಳರ ಹೇಳಿದರು.
ಪಟ್ಟಣದ ಕಾಳಿಕಾಮಂದಿರದಲ್ಲಿ ಸ್ಥಳೀಯ ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ ಹಾಗೂ ವೈದ್ಯರ ಅಸೋಸಿಯೇಷನ್ ವತಿಯಿಂದ ಆಯೋಜಿಸಿದ್ದ ಯುಪಿಎಸ್ ಸಿ ಟಾಪರ್ ಕನ್ನಡಿಗ ಮಡಿಕೇಶ್ವರ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಮಹೇಶ ಮಡಿವಾಳರ ಹಾಗೂ ತಾಲ್ಲೂಕಾ ನೂತನ ತಹಶೀಲ್ದಾರರಾಗಿ ಬಂದಿರುವ ವೈದ್ಯೆ ವಿನಯಾ ಹೂಗಾರ ಅವರ ಸನ್ಮಾನ ಕಾರ್ಯಕ್ರಮದಲ್ಲಿ ಶುಕ್ರವಾರ ಸಂಜೆ ಗೌರವ ಸ್ವೀಕರಿಸಿ ಮಾತನಾಡಿದರು. ಸನ್ಮಾನ ಸ್ವಿಕರಿಸಿ ಮಾತನಾಡಿದ ತಹಶೀಲ್ದಾರ ಡಾ.ವಿನಯಾ ಹೂಗಾರ, ಓದಿ ಉನ್ನತ ಹುದ್ದೆ ಪಡೆಯುವ ಸವಾಲಿಗಿಂತ ಪಡೆದ ಹುದ್ದೆಯನ್ನು ಪ್ರಾಮಾಣಿಕವಾಗಿ ನಿರ್ವಹಿಸಿ ಜನರ ಸೇವೆ ಮಾಡಿದಾಗ ಅದು ಸಾಧನೆಯಾಗುತ್ತದೆ ಎಂದರು. ಅಧ್ಯಕ್ಷತೆಯನ್ನು ವಹಿಸಿದ್ದ ಹಿರಿಯ ವೈದ್ಯ ಡಾ.ವಿಜಯಕುಮಾರ ಕಾರ್ಚಿ , ಈ ಬಾರಿ ಯುಪಿಎಸ್ಸಿ ಟಾಪರುಗಳಲ್ಲಿ ಕನ್ನಡಿಗರ ಸಾಧನೆ ಹೆಮ್ಮೆ ತಂದಿದೆ. ಅದರಲ್ಲಿ ಐವರು ವೈದ್ಯರಿರುವುದು ವಿಶೇಷ ಎಂದ ಅವರು, ದೊರೆತ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ಉನ್ನತಿ ಸಾಧಿಸಿ ಎಂದು ಹಾರೈಸಿದರು. ಡಾ.ಕಮಲಾ ಸಜ್ಜನ ದಂಪತಿ ಹಾಗೂ ಹಸಿರು ಸಂಪದ ಬಳಗದ ವತಿಯಿಂದಲೂ ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಭಾರತೀಯ ವೈದ್ಯರ ಒಕ್ಕೂಟದ ತಾಳಿಕೋಟೆ ಘಟಕದ ಅಧ್ಯಕ್ಷೆ ಡಾ.ಗಂಗಾಂಬಿಕಾ ಪಾಟೀಲ, ಕಾರ್ಯದರ್ಶಿ ಡಾ.ಆನಂದ ಭಟ್ಟ, ಆಯುಷ್ ವಿಭಾಗದ ಪ್ರಮುಖ ಡಾ.ಆರ್.ಎಂ.ಕೋಳ್ಯಾಳ. ಇದ್ದರು. ಸಾಹಿತಿ ಶ್ರೀಕಾಂತ ಪತ್ತಾರ ನಿರ್ವಹಿಸಿದರು. ಡಾ.ಶ್ರೀಶೈಲ ಹುಕ್ಕೇರಿ ಸ್ವಾಗತಿಸಿದರು. ಎಸ್.ಎಸ್.ಗಡೇದ ವಂದಿಸಿದರುಹಿರಿಯ ವೈದ್ಯರಾದ ಡಾ.ಸರೋಜಿನಿ ಕಾರ್ಚಿ, ಡಾ.ಗುರುರಾಜ ಚಿತ್ತರಗಿ, ಡಾ.ಮಹೇಶ ಪಾಟೀಲ ದಂಪತಿ, ಡಾ.ಸುರೇಶ ಹಂಚಾಟೆ, ಡಾ.ನಜೀರ ಕೋಳ್ಯಾಳ, ಹಸಿರು ಸಂಪದ ಬಳಗದ ಜೈಸಿಂಗ ಮೂಲಿಮನಿ, ವಾಸುದೇವ ಹೆಬಸೂರ, ಪ್ರಭುಗೌಡ ಮದರಕಲ್ಲ, ರಾಜಣ್ಣ ಸೊಂಡೂರ, ಎ.ಎಂ.ಮೂಲಿಮನಿ , ಸಂಚಾಲಕ ಎಸ್.ಎಸ್.ಗಡೇದ, ಶ್ರೀನಿವಾಸ ಸೋನಾರ, ಅಶೋಕ ಬಳಗಾನೂರ, ಸಂಗಮೇಶ ಪಾಲ್ಕಿ ಇತರರಿದ್ದರು.
ಸಭೆಯ ಆರಂಭದಲ್ಲಿ ಕಾಶ್ಮೀರದ ಪಹಲ್ಗಾಮ್ ನಲ್ಲಿ ಭಯೋತ್ಪಾದಕ ಗುಂಡಿಗೆ ಬಲಿಯಾದ ಭಾರತೀಯರ ಹಾಗೂ ಇಚೇಗೆ ನಿಧನರಾದ ಡಾ.ರಾಜಶೇಖರ ಮುಚ್ಚಂಡಿ ಹಾಗೂ ಡಾ.ಶೀರೀಶ ಒಳಸಂಕರ್ ಅವರಿಗೆ ಮೌನಾಚರಣೆಯ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.