ಲೋಕದರ್ಶನವರದಿ
ರಾಣೇಬೆನ್ನೂರು 15: ದೇಹದಲ್ಲಿರುವ ಚಕ್ರಗಳ ಮೂಲಕ ಮಂಡಿನೋವು, ಬೆನ್ನು ನೋವು, ಹೃದಯ ಸಂಬಂಧಿಸಿದ ಕಾಯಿಲೆ, ಸಕ್ಕರೆ ಕಾಯಿಲೆ, ರಕ್ತದೊತ್ತಡ, ಆರ್ಥರೈಟೀಸ್ ಸೇರಿ ಎಲ್ಲ ಬಗೆಯ ಕಾಯಿಲೆಗಳಿಗೆ ಪರಿಹಾರ ಕಂಡುಕೊಳ್ಳಬಹುದು. ಉಚಿತವಾಗಿ ದೊರೆಯುವ ಇಂಥ ಕ್ಯಾಂಪ್ಗಳನ್ನು ಸದುಪಯೋಗ ಪಡೆದುಕೊಳ್ಳಬೇಕು ಎಂದು ಪ್ರಸನ್ನ ಆಚಾರ್ಯ ಮಾತನಾಡಿದರು.
ಸ್ಥಳೀಯ ವೈ.ಪಿ.ವಿ ಸೆಂಟರ್ ವತಿಯಿಂದ ಇಲ್ಲಿಯ ಶ್ರೀರಾಮ ನಗರದ ಸಾಯಿಬಾಬಾ ಮಂದಿರದ ಆವರಣದಲ್ಲಿ ಮಂಗಳವಾರ ಸಂಜೆ ಉಚಿತವಾಗಿ ಹೀಲಿಂಗ್ ಕ್ಯಾಂಪ್ ನಡೆಯಿತು.
ತರಬೇತಿದಾರ ಹಾಗೂ ವೈ.ಪಿ.ವಿ ಸೆಂಟರ್ನ ಅಧ್ಯಕ್ಷ ಪ್ರಸನ್ನ ಆಚಾರ್ಯ ಹಾಗೂ ಕಾರ್ಯದಶರ್ಿ ರಂಜನಾ ಆಚಾರ್ಯ ಪ್ರಾಣವಿದ್ಯೆ ಮೂಲಕ ಹೀಲಿಂಗ್ ಚಿಕಿತ್ಸೆಯ ತರಬೇತಿ ನೀಡಿದರು.
ವೈ.ಪಿ.ವಿ. ಸೆಂಟರ್ನ ಸದಸ್ಯರಾದ ರೂಪಾ ನಂದ್ಯಾಲ, ಸುಮಂಗಲಾ ಹೊಸಮನಿ, ರೂಪಾ ಗೌಡರ, ಜ್ಯೋತಿ ಕಲ್ಲಾಪುರ, ಕವಿತಾ ದೇಶಿ, ಸೋಮಶೇಖರ ನಂದ್ಯಾಲ, ಜಯಲಲಿತಾ ಹೊಸಮನಿ, ಶೈಲಜಾ ಉಜ್ಜಯಿನಿಮಠ, ರೇವಣಸಿದ್ದಪ್ಪ ಎಡಳ್ಳಿ ಹಾಗೂ 50ಕ್ಕೂ ಅಧಿಕ ಶಿಬಿರಾಥರ್ಿಗಳು ಪಾಲ್ಗೊಂಡಿದ್ದರು.