ಜಮಖಂಡಿ 26: ಕಾಶ್ಮೀರದ ಪಹಲ್ಗಾಮದಲ್ಲಿ ನಡೆದ ಹಿಂದೂಗಳ ಹತ್ಯಾಕಾಂಡಕ್ಕೆ ಉಗ್ರ ಪ್ರತಿಕಾರವಾಗಬೇಕು, ಹಿಂದೂಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿರುವ ಉಗ್ರರನ್ನು ಮಟ್ಟಹಾಕಬೇಕೆಂದು, ಹಿಂದುಗಳ ಧಾರ್ಮಿಕ ಸನಾತ ಸಂಕೇತವಾದ ಜನಿವಾರ ತೆಗಿಸಿರುವದು ಖಂಡನೀಯ ಎಂದು ಜಕನೂರಿನ ಮಾದುಲಿಂಗ ಸ್ವಾಮಿಗಳು ಆಗ್ರಹಿಸಿದರು.
ನಗರದಲ್ಲಿ ಮಿನಿವಿಧಾನಸೌಧದಲ್ಲಿ ನಡೆದ ತಾಲೂಕಾ ಬ್ರಾಹ್ಮಣ ಸಂಘ, ವಿಶ್ವಕರ್ಮ ಸಮಾಜ, ಮರಾಠಾ ಸಮಾಜ, ರಜಪೂಜ ಸಮಾಜ, ವಿಶ್ವ ಹಿಂದು ಪರಿಷತ್ ಜನಿವಾರ ಧಾರಿಗಳ ಸಮಾಜ, ವಿಪ್ರ ಮಹಿಳಾ ಮಂಡಲ ಸಹಯೋಗದಲ್ಲಿ ಧರ್ಮ ರಕ್ಷಣೆಗೆ ಬೃಹತ್ ಪ್ರತಿಭಟನೆಯನ್ನು ನಡೆಸಿದರು. ನಂತರ ಉಪವಿಭಾಗಾಧಿಕಾರಿ, ತಹಶೀಲ್ದಾರ ಅವರ ಮೂಲಕ ರಾಜ್ಯ ಸರಕಾರಕ್ಕೆ ಮನವಿ ಸಲಿಸಿ ಮಾತನಾಡಿದರು,
ಹಿಂದೂ ಸಮಾಜ ಒಗ್ಗಟ್ಟಾಗಿರಬೇಕು, ಹಿಂದೂಗಳ ಮೇಲೆ ಇದೇ ರೀತಿ ದಾಳಿಗಳಾದರೇ ಆಶ್ಚರ್ಯ ಪಡುವಂಥ ಸ್ಥಿತಿ ಇಲ್ಲ, ಉಗ್ರರ ದಾಳಿಗಳು ನಡೆಯದಂತೆ ಸರಕಾರಗಳು ಕಠಿಣ ಕಾನೂನು ಜಾರಿಗೆ ತರಬೇಕು, ಇಲ್ಲವಾದರೆ ಸಾಧು-ಸಂತರು, ಮತ್ತು ಸಮಾಜವೇ ಸೂಕ್ತ ಉತ್ತರ ನೀಡಲು ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಕೆಯನ್ನು ನೀಡಿದರು.
ಸನಾತನ ಹಿಂದೂಗಳ ಧಾರ್ಮಿಕ ಸಂಕೇತವಾಗಿರುವ ಜನಿವಾರ ತೆಗೆಯುಂತೆ ಒತ್ತಾಯಿಸಿದ ರಾಜ್ಯ ಸರಕಾರದ ಕ್ರಮವನ್ನು ಖಂಡಿಸಿದ ಅವರು, ಧಾರ್ಮಿಕ ನಂಬಿಕೆಗೆ ಧಕ್ಕೆ ಬರುವಂತೆ ನಡೆದುಕೊಂಡ ಅಧಿಕಾರಿಗಳನ್ನು ಅಮಾನತ್ತು ಗೊಳಿಸಿದರೇ ಸಾಲದು ಶಾಶ್ವತವಾಗಿ ಅವರನ್ನು ಸೇವೆಯಿಂದ ವಜಾಗೊಳಿಸಬೇಕು ಎಂದರು.
ಬ್ರಾಹ್ಮಣ ಸಮಾಜದ ಪಂಡಿತ ರಂಗಾಚಾರ್ಯ ಜೋಷಿ ಮಾತನಾಡಿ, ಸರಕಾರದ ಕೆಲ ಅಧಿಕಾರಿಗಳು ಕುಮಮಕ್ಕಿನಿಂದಾಗಿ ಬ್ರಾಹ್ಮಣ ವಿದ್ಯಾರ್ಥಿಗಳ ಜನಿವಾರ ತೆಗೆಯಿಸುವ ಕೆಲಸ ಮಾಡಿದ್ದಾರೆ. ಅಂಥವರನ್ನು ಸೇವೆಯಿಂದ ವಜಾಗೊಳಿಸಬೇಕು ಯಾರಿಗೂ ಹಾನಿ ಉಂಟು ಮಾಡದೇ ಬದಕುವ ಸಮಾಜವನ್ನು ಕೆಣಕುವ ಯತ್ನ ಮಾಡಬಾರದು ಎಂದು ಎಚ್ಚರಿಸಿದರು.
ಮುಖಂಡ ರಾಜೇಂದ್ರ ಹುಲ್ಯಾಳಕರ ಮಾತನಾಡಿ, ಬ್ರಾಹ್ಮಣರ ಆಸ್ತಿ-ಪಾಸ್ತಿ ಕಸಿದು ಕೊಂಡಿದ್ದೀರಿ, ಸಮಾಜಕ್ಕೆ ಯಾವುದೇ ಮೀಸಲಾತಿ ಇಲ್ಲವಾದರೂ ಬುದ್ದಿವಂತಿಕೆಯಿಂದ ಬದುಕುತ್ತಿರುವ ನಮ್ಮನ್ನು ನಮ್ಮ ಪಾಡಿಗೆ ಬದುಕಲು ಬಿಡಿ, ತಲೆ ಕತ್ತರಿಸುವ ಕೆಲಸಮಾಡಬೇಡಿ. ಜನಿವಾರವನ್ನು ಧರಿಸಿದ ನಾವುಗಳು ವಿಶ್ವಕ್ಕೆ ಶಾಂತಿಯಾಗಲಿ ಎಲ್ಲರೂ ಸುಖವಾಗಿ ಬದುಕಲಿ ಎಂದು ನಿತ್ಯ ದೇವರಲ್ಲಿ ಪ್ರಾರ್ಥನೆ ಮಾಡುತ್ತೇವೆ, ನಮ್ಮ ಧಾರ್ಮಿಕ ಹಕ್ಕನ್ನು ಕಸಿದುಕೊಳ್ಳುವ ಕೆಲಸಮಾಡಬೇಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಘವೇಂದ್ರಾಚಾರ್ಯ ಜೋಷಿ, ತಾಲೂಕು ಬ್ರಾಹ್ಮಣ ಸಂಘದ ಅಧ್ಯಕ್ಷ ಉಮೇಶ ದೇಸಾಯಿ, ಬ್ಯಾಹ್ಮಣ ಮಹಾಸಭಾದ ಕಾರ್ಯಕಾರಿಣಿ ಸದಸ್ಯ ನಿತಿನ ಹುಲ್ಯಾಳಕರ, ಜಿಲ್ಲಾ ಉಪಾಧ್ಯಕ್ಷ ಶ್ರೀನಿವಾಸ ಪುರೋಹಿತ, ಪಿ.ಪಿ.ಜೋಷಿ, ಸುಧೀರ ಕುಲಕರ್ಣಿ, ರಮೇಶ ಕನಕೇರಿ, ಶ್ರೀಧರ ಪಟವರ್ಧನ, ಎನ್.ಟಿ.ಜೋಷಿ, ರಾಧಾಕೃಷ್ಣಮೂರ್ತಿ, ಡಾ.ಅಭಯ ವಾಟವೆ, ಆಶಿಷ
ವಾಟವೆ, ಪ್ರಹಲ್ಲಾದ ಕುಲಕರ್ಣಿ, ಶ್ರೀಕಾಂತ ಕುಲಕರ್ಣಿ, ನರಸಿಂಹ ನಾಯಕ, ಭೀಮ ಮೊಕಾಶಿ, ಸಂಜೀವ ದೇಶಪಾಂಡೆ, ಶಶಿಕಾಂತ ವಿಶ್ವಬ್ರಾಹ್ಮಣ. ಡಾ, ಬಸವರಾಜ ಮಠಪತಿ, ಶ್ರೀನಿವಾಸ ಬಾದರಾಣಿ, ಕೆ.ವಿ.ಕಪಿಲೇಶ್ವರ, ಪಂಢರಿನಾಥ ವೈದ್ಯ, ಮೂರ್ತಿ ಹೆಬ್ಬಾರ, ಅನಂತ ಹರೆಕಲ್, ಮುಕುಂದಾಚಾರ್ಯ ನ್ಯಾಮಣ್ಣವರ, ಅಶೋಕ ಹೂಗಾರ, ಕಲ್ಯಾಣಿ ಗೋಖಲೆ, ನಳನಿ ಹುಲ್ಯಾಳಕರ, ಪದ್ಮಾ ಕುಲಕರ್ಣಿ, ರಾಜು ಮೋಕಾಶಿ ಸೇರಿದಂತೆ ಅನೇಕರು ಪ್ರತಿಭಟನೆಯಲ್ಲಿ ಇದ್ದರು.