ಭಯೋತ್ಪಾದಕರಿಗೆ ಗಲ್ಲು ಶಿಕ್ಷೆ ನೀಡಿಬೇಕು: ಸಮಸ್ತ ಹಿಂದೂಗಳ ಆಗ್ರಹ
ಹುಕ್ಕೇರಿ, 26 : ತಾಲೂಕಿನ ಸಮಸ್ತ ಹಿಂದೂ ಬಾಂಧವರಿಂದಾ. ಕಾಶ್ಮೀರದ ಪೆಹಲ್ಗಾಮ್ ನಲ್ಲಿ ಪೈಶ್ಚಾಚಿಕ ಕೃತ್ಯ ಎಸೆಗಿದ ಭಯೋತ್ಪಾದಕರಿಗೆ ಸಾರ್ವಜನಿಕವಾಗಿ ಗಲ್ಲು ಶಿಕ್ಷೆ ನೀಡಬೇಕು ಹಿಂದೂಗಳ ಮೇಲೆ ನಡೆದ ಭಯೋತ್ಪಾದಕ ಉಗ್ರ ದಾಳಿಯನ್ನು ಖಂಡಿಸಿ ಹುಕ್ಕೇರಿ ತಾಲೂಕಿನ ಸಮಸ್ತ ಹಿಂದೂ ಭಾಂಧವರಿಂದ ಬೃಹತ್ ಪ್ರತಿಭಟನಾ ರಾಲಿ ಶನಿವಾರ ದಿಂನಾಕ 26.4.2025.ರಂದು ಮುಂಜಾನೆ 10:ಗಂಟೆಗೆ ಸ್ಥಳ ಶ್ರೀ ಅಡವಿಸಿದ್ದೇಶ್ವರ ಮಠದಿಂದ ಕೋರ್ಟ್ ಸರ್ಕಲ್ ವರಿಗೆ ಪಾದಯಾತ್ರೆ ಮೂಲಕ ಜರುಗಿತು.
ನಮ್ಮ ದೇಶದ ಮಾನ್ಯ ಪ್ರಧಾನ ಮಂತ್ರಿಯವರಿಗೆ ಹಾಗೂ ಮಾನ್ಯ ರಾಷ್ಟ್ರಪತಿ ಯವರಿಗೆ ವಿನಂತಿಸಿಕೊಳ್ಳುವುದೇನೆಂದರೆ ಕೆಲವು ದಿನಗಳ ಹಿಂದೆ ಕಾಶ್ಮೀರ ರಾಜ್ಯದ ಅನಂತನಾಗ ಜಿಲ್ಲೆಯ ಪಹಾಲ್ಗಮ್ನಲ್ಲಿ ಉಗ್ರರ ಅಮಾನುಷ ಹೀನಾಯ ಕೃತ್ಯವನ್ನು ಕಂಡು. ನಾವೆಲ್ಲ ಹಿಂದೂಗಳು ಸಹಿಸುವುದಿಲ್ಲ ಇದೇ ಕೊನೆಯ ಎಚ್ಚರಿಕೆ ಏಕೆಂದರೆ ಅಲ್ಲಿ ಉಗ್ರರು ಒಂದು ದೊಡ್ಡ ಸಮಾಜದ ಮೇಲೆ ಅಮಾನವಿಯಾಗಿ ದಾಳಿಮಾಡಿರುವುದಲ್ಲದೆ ಧರ್ಮವನ್ನು ಕೇಳಿ ಕೇಳಿ ಹಿಂದೂ ಧರ್ಮದ 27 ಕ್ಕಿಂತ ಅಧಿಕ ಜನರನ್ನು ಗುಂಡಿಕ್ಕಿ ಕೊಂದಿರುತ್ತಾರೆ ಈ ಮೂಲಕ ಉಗ್ರರು ತಮ್ಮ ಅಟ್ಟಹಾಸವನ್ನು ಮೆರೆದಿರುತ್ತಾರೆ. ತಮ್ಮಲ್ಲಿ ಈ ಸಮಸ್ತ ಹುಕ್ಕೇರಿ ತಾಲೂಕಿನ ಹಿಂದೂ ಧರ್ಮದ ಬಾಂಧವರ ಪರವಾಗಿ ವಿನಂತಿಸುವುದೇನೆಂದರೆ ಈ ಘಟನೆಗೆ ಕಾರಣಿಕರ್ತರಾದ ಕಲ್ಲು ಹೃದಯದ ಮಾನವೀಯತೆ ಇಲ್ಲದೆ ಭಯೋತ್ಪಾದಕರನ್ನು ಉಗ್ರಗಾಮಿಗಳನ್ನು ನಡು ರೋಡಿನಲ್ಲಿ ಸಾರ್ವಜನಿಕವಾಗಿ ಗಲ್ಲಿಗೇರಿಸಿ ಕಠಿಣ ಶಿಕ್ಷೆ ನೀಡುವುದರ ಮೂಲಕ ಎಲ್ಲ ಹಿಂದೂ ಧರ್ಮದ ಬಾಂಧವರ ಮನೋ ಧೈರ್ಯವನ್ನು ಹೆಚ್ಚಿಸಬೇಕಾಗಿ ವಿನಂತಿ.
ಈ ಮೂಲಕ ಭಯೋತ್ಪಾದನೆಯನ್ನು ಉಗ್ರವಾದ ಚಟುವಟಿಕೆಯನ್ನು ಉಗ್ರವಾದಿಗಳನ್ನು ಬೇರು ಸಮೇತ ಕಿತ್ತು ಒಗೆಯಬೇಕೆಂದು ಮಾನ್ಯರಲ್ಲಿ ಸವಿನಯವಾಗಿ ವಿನಂತಿಸಿಕೊಳ್ಳುತ್ತಿದ್ದೇವೆ. ಆದಷ್ಟು ಬೇಗ ನಮ್ಮ ನೆಚ್ಚಿನ ಪ್ರಧಾನಿಗಳು ಈ ಕೆಲಸವನ್ನು ಮಾಡುತ್ತಾರೆ ಎಂಬ ಅತೀವ ವಿಶ್ವಾಸ ನಮ್ಮಲ್ಲಿದೆ ಗ್ರೇಟ್ 2 ತಹಶೀಲದಾರರಾದ ಕಳ್ಳೋಳಿಕರ ಅವರಿಗೆ ಮನವಿ ಪತ್ರವನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ಶ್ರೀ ಶಿವಬಸವ ಸ್ವಾಮೀಜಿ ವೀರಕ್ತಮಠ ಹುಕ್ಕೇರಿ, ಹಾಗೂ ಶ್ರೀ ಅಭಿನವ ಮಂಜುನಾಥ ಸ್ವಾಮಿಜಿ ಕ್ಯಾರಗುಡ್ಡ ಹುಕ್ಕೇರಿ, ಲಕ್ಷ್ಮಣ್ ಮಿಶಾಲಿ ಉತ್ತರ ಪಾಂತ ಬಜರಂಗದಳ ಪ್ರಮುಖರು. ಮಲ್ಲಿಕಾರ್ಜುನ ಬಸ್ತವಾಡೆ. ಆರ್ ಎಸ್ ಎಸ್ ಕಾರ್ಯಕರ್ತರು ಹುಕ್ಕೇರಿ, ಗುರು ಕುಲಕರ್ಣಿ ಬಿಜೆಪಿ ಮುಖಂಡರು, ಭೀಮಪ್ಪ ಅಂಬಾರಿ, ಶ್ರೀರಾಮ ಸೇನೆ ಹುಕ್ಕೇರಿ ರಾಷ್ಟ್ರೀಯ ಹಿಂದೂ ಪರಿಷತ್ ಅಧ್ಯಕ್ಷರಾದ ಶಿವಕುಮಾರ್ ನಾಯಕ. ಚನ್ನಪ್ಪ ಗಜಬರ. ಸುಹಾಸ ನೂಲಿ. ವೀರೇಶ ಗಜಬರ. ಅಪ್ಪುಶ್ ತುಬಚಿ ಶಂಕರ್ ಪಟ್ಟಣಶೆಟ್ಟಿ ಹಾಗೂ ಹುಕ್ಕೇರಿ ತಾಲೂಕಿನ ಹಿಂದೂ ಬಾಂದವರು ಯುವಕರು ಹಾಗೂ ವಿವಿಧ ಗ್ರಾಮದ ನಾಗರಿಕರು ಉಪಸ್ಥಿತರಿದ್ದರು.