ಅಪ್ರತಿಮ ರಂಗಕಲಾವಿದ ಸಿ. ಎಂ. ತಿಮ್ಮಯ್ಯಶ್ರೀ
The illustrious theatre artist C. M. Thimmayyasri
ಲೋಕದರ್ಶನ ವರದಿ
ಸಿ.ಎಂ ಮುತ್ಯಾಲಪ್ಪ ಮತ್ತು ಕದರಮ್ಮ ದಂಪತಿಗಳ ಮಗನಾಗಿ 1955ರಲ್ಲಿ ಜನಿಸಿರುವ ತಿಮ್ಮಯ್ಯನವರು ಬಿ.ಎಸ್ಸಿ ಪದವೀಧರರು. ರಂಗಭೂಮಿ ಇವರ ನೆಚ್ಚಿನ ಕ್ಷೇತ್ರ. ಬಾಲ್ಯದಲ್ಲಿ ಪೌರಾಣಿಕ ನಾಟಕಗಳನ್ನು ನೋಡುತ್ತಾ ರಂಗಭೂಮಿಯ ಗೀಳನ್ನು ಅಂಟಿಸಿಕೊಂಡು ನಂತರ ಶಾಲಾ ದಿನಗಳಲ್ಲಿ ಶಿಕ್ಷಕಿಯರ ಪ್ರೋತ್ಸಾಹದಿಂದ ರಂಗಪ್ರವೇಶ ಮಾಡಿ ನಾಟಕಗಳಲ್ಲಿ ನಟಿಸುವ ಅವಕಾಶ ಪಡೆದರು. ಕಾಲೇಜು ದಿನಗಳು ಮುಗಿದ ಮೇಲೆ ಉತ್ಸಾಹಿ ಯುವಕರನ್ನು ಒಗ್ಗೂಡಿಸಿಕೊಂಡು ಕಲಾವಿದರು ಎಂಬ ಸ್ವಂತ ನಾಟಕ ತಂಡವನ್ನು ಸಿ.ಎಂ. ತಿಮ್ಮಯ್ಯ ಕಟ್ಟಿದ್ದಾರೆ. 25 ವರ್ಷಗಳಿಂದ ಸತತವಾಗಿ ಡಾ. ಬಿ. ಆರ್. ಅಂಬೇಡ್ಕರ್ ಸ್ಮಾರಕ ಅಖಿಲ ಭಾರತ ಕನ್ನಡ ನಾಟಕ ಸ್ಪರ್ಧೆಯನ್ನು ನಡೆಸಿಕೊಂಡು ಬಂದಿದ್ದಾರೆ.
ದೆಹಲಿ, ಬಾಂಬೆ, ಲಕ್ನೊ, ಕೇರಳ, ಕೊಲ್ಕತ್ತಾ, ಕಾಶಿ, ನೇಪಾಳ, ಹೈದರಾಬಾದ್, ಕಾಸರಗೋಡು, ಗೋವಾ. ಅಂಡಮಾನ್ ಮುಂತಾದ ಕಡೆಗಳಲ್ಲಿ ತಮ್ಮ ತಂಡದೊಂದಿಗೆ ಹೋಗಿ ನಾಟಕಗಳನ್ನು ಪ್ರದರ್ಶಿಸಿದ್ದಾರೆ. ಇವರ ತಂಡದ ಡಾ. ಚಂದ್ರಶೇಖರ ಕಂಬಾರರ ಸಂಗ್ಯಾ ಬಾಳ್ಯ ನೃತ್ಯ ರೂಪಕ ನಾಟಕ ಸುಮಾರು 30 ಪ್ರದರ್ಶನಗಳನ್ನು ಕಂಡಿದೆ. ಇದು ವಿ.ಕೆ.ಎಂ. ಕಲಾವಿದರು ನಾಟಕ ತಂಡದ ಹೆಗ್ಗಳಿಕೆ. ಸಿ.ಎಂ. ತಿಮ್ಮಯ್ಯ ಅವರು ದೆಹಲಿಯ ಕರ್ನಾಟಕ ಭವನದಲ್ಲಿ ಮಾರ್ಚ್ 22 ಮತ್ತು 23.1999 ರಂದು ಸತತವಾಗಿ 30 ಗಂಟೆಗಳ ಕಾಲ ನಿರಂತರವಾಗಿ ಅಭಿನಯಿಸಿ ಗಿನ್ನಿಸ್ ದಾಖಲೆ ಮಾಡಲು ಪ್ರಯತ್ನಿಸಿರುತ್ತಾರೆ. ಇವರ ಪ್ರತಿಭೆಯನ್ನು ಗುರುತಿಸಿ ಇಂಗ್ಲೆಂಡಿನ ಡಿಕ್ಷನರಿ ಆಫ್ ಇಂಟರ್‌ನ್ಯಾಷನಲ್ ಬಯೋಗ್ರಫಿ ಸಂಸ್ಥೆಯವರು ವಿಶ್ವದ 2 ಲಕ್ಷಕ್ಕೂ ಹೆಚ್ಚಿನ ಪ್ರತಿಭಾವಂತರ ಜೊತೆಗೆ ತಮ್ಮ ಮುಂದಿನ ಸಂಚಿಕೆಯಲ್ಲಿ ದಾಖಲಿಸಲು ಸಿ.ಎಂ. ತಿಮ್ಮಯ್ಯನವರ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದಾರೆ.
ಇದೊಂದು ನಾಡಿಗೆ ಹೆಮ್ಮೆ ತರುವ ವಿಚಾರ.ಇವರು ಅಭಿನಯಿಸಿ ಅತ್ಯುತ್ತಮ ನಟ ಪ್ರಶಸ್ತಿ ಪಡೆದ ನಾಟಕಗಳು ಲಚ್ಚಿ, ಕುದುರೆ, ಮೊಟ್ಟೆ, ರತ್ತೋರತ್ತೋ ರಾಯನ ಮಗಳೆ, ಮೀನಿನ ಹೆಜ್ಜೆ, ಬೆಳಕಿನೆಡೆಗೆ, ಜೋಕುಮಾರ ಸ್ವಾಮಿ, ಸಂಗ್ಯಾಬಾಳ್ಯ ನಾಗಮಂಡಲ, ಅಂಬರ ಬಾಲೆ, ಕಪ್ಪು ನೆಲದಲ್ಲಿ ಕೆಂಪು ಹೂ, ಬೆಳ್ಳಕ್ಕಿ ಹಿಂಡು ಬೆದರ್ಯಾವೋ, ಮೊದಲಾದವು. ಇವರ ಅತ್ಯುತ್ತಮ ನಿರ್ದೇಶನದ ನಾಟಕಗಳು ಲಚ್ಚಿ, ದೇವರ ಹೆಣ. ಮುಂತಾದವು.ಇವರ ಪ್ರತಿಭೆಗೆ ಪ್ರಾಶಸ್ತ್ರ ಸಿಕ್ಕು ಇವರಿಗೆ ಕೆಂಪೇಗೌಡ ಪ್ರಶಸ್ತಿ, ಹಾಗೂ ಇವರ ವಿ.ಕೆ.ಎಂ. ಕಲಾವಿದರು ತಂಡಕ್ಕೆ ಕರ್ನಾಟಕ ನಾಟಕ ಅಕಾಡೆಮಿಯಿಂದ ಮಾನ್ಯತಾ ಪತ್ರ ಸಿಕ್ಕಿದೆ.ಶ್ರೀ ಸಿ.ಎಂ. ತಿಮ್ಮಯ್ಯ ಇವರ ರಂಗಭೂಮಿಯಲ್ಲಿನ ಸೇವೆ ಮತ್ತು ಸಾಧನೆಗಳನ್ನು ಪರಿಗಣಿಸಿ ಇವರಿಗೆ ಸಾಮಾಜಿಕ ಕ್ರಾಂತಿಕಾರಿ ಶ್ರೀ ಬಸವೇಶ್ವರರ ಜಯಂತಿ ಅಂಗವಾಗಿ ಪ್ರತಿಷ್ಠಿತ ಕರ್ನಾಟಕ ವಿಭೂಷಣ ರಾಜ್ಯ ಪ್ರಶಸ್ತಿಯು ಸೇರಿದಂತೆ ನೂರಾರು ಪ್ರಶಸ್ತಿಗಳು ಅವರನ್ನು ಅರಸಿ ಬಂದಿವೆ. ಇಂಥಹ ಅಪರೂಪದ ರಂಗ ಕಲಾವಿದರನ್ನು ಪಡೆದಿರುವ ಕರ್ನಾಟಕ ರಾಜ್ಯ ಧನ್ಯತೆಯಿಂದ ಕೂಡಿದೆ ಎನ್ನಬಹುದು. ವಿಶಿಷ್ಠ ಕಲಾವಿದರಾದ ಇವರು ಇನ್ನಷ್ಟು ಸಾಧನೆ ಮಾಡಲಿ. ರಾಜ್ಯ ಸರಕಾರ, ಸಂಘ ಸಂಸ್ಥೆಗಳಿಂದ ಇವರ ಪ್ರತಿಭೆಗೆ ಗೌರವ ಸನ್ಮಾನಗಳು ಲಭಿಸಲೆಂದು ಹಾರೈಸೋಣ.
ಸಾವಿರಾರು ಕೋಟಿ ವಂಚನೆ, ವರ್ಗಾವಣೆ ಆರೋಪ: ಶಿವಾನಂದ ನೀಲಣ್ಣವರ ಬಂಧನ
ಬೆಳಗಾವಿಯಲ್ಲಿ ಶಿವಾನಂದ ನೀಲಣ್ಣನವರಗೆ ಅಧಿಕಾರಿಗಳ ಶಾಕ್ : ಶಿವಂ ಅಸೋಸಿಯೇಟ್ ಕಚೇರಿಗಳ ಮೇಲೆ ದಾಳಿ
24 ಗಂಟೆಯಲ್ಲಿ ಕಾರು ಕಳ್ಳತನ ಪ್ರಕರಣ ಭೇಧಿಸಿದ ಪೊಲೀಸರು : ಖದೀಮರ ಪತ್ತೆಗಾಗಿ ಶೋಧ
ಗಡಿ ಮರಾಠಿ ಶಾಲೆಗಳಲ್ಲಿ ಕನ್ನಡ ಕಹಳೆ: 7 ಕನ್ನಡ ಪ್ರಾಥಮಿಕ, 2 ಪ್ರೌಡ ಶಾಲೆಗಳಿಗೆ ರಾಜ್ಯ ಸರಕಾರ ಗ್ರಿನ್ ಸಿಗ್ನಲ್
ಅಂತರಾಜ್ಯ ಖದೀಮನ ಬಂಧನ : 45.56 ಲಕ್ಷ ಮೌಲ್ಯದ ಚಿನ್ನಾಭರಣ, ದ್ವಿಚಕ್ರ ವಾಹನ ವಶಕ್ಕೆ
ಹಿಡಕಲ್ ಹಿನ್ನೀರಿನಲ್ಲಿ ಮುಳುಗಿದ್ದ ಹುನ್ನೂರು ವಿಠಲ ಮಂದಿರ ಜಲದಿಗ್ಭಂಧನದಿಂದ ಮುಕ್ತಿ 