ಕನಕದಾಸರ ಆದರ್ಶ ಪಾಲಿಸಿ: ಜಿಪಂ ಸದಸ್ಯೆಗುಳಗಣ್ಣನವರ

ಲೋಕದರ್ಶನ ವರದಿ

ಯಲಬುರ್ಗಾ: ಆಗಾದವಾದ ಪಾಂಡಿತ್ಯ ಉಳ್ಳವರು ಭಕ್ತ ಶ್ರೇಷ್ಠ ಕನಕದಾಸರು ಅವರು ಹಾಕಿ ಕೊಟ್ಟ ಮಾರ್ಗದಲ್ಲಿ ನಾವು ಮುನ್ನಡೆಯಬೇಕು ಎಂದು ಜಿಪಂ ಸದಸ್ಯೆ ಗಂಗಮ್ಮ ಈಶಣ್ಣ ಗುಳಗಣ್ಣನವರ ಹೇಳಿದರು.

ಪಟ್ಟಣದ ಹಳೆ ಪಪಂ ಆವರಣದಲ್ಲಿ ನಡೆದ ಕನಕದಾಸರ 532ನೇ ಜಯಂತ್ಯೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ನಮ್ಮ ಜೀವನ ಇನ್ನೀತರರಿಗೆ ಮಾದರಿಯಾಗಬೇಕು ಅದರಂತೆ ಎಲ್ಲರೂ ಸಹಬಾಳ್ವೆ ಜೀವನ ನಡೆಸಬೇಕು ಹಾಗೂ ಅಂದಿನ ಕಾಲದಲ್ಲಿ ಕನಕದಾಸರು ನಮಗೆ ಉತ್ತಮ ಮಾರ್ಗದರ್ಶನ ಮಾಡಿದವರು ಅವರು ನುಡಿದಂತೆ ನಡೆದವರು ಮತ್ತು ಒಂದೆ ಕುಲಕ್ಕೆ ಮೀಸಲಾದವರು ಅಲ್ಲಾ ಅವರನ್ನು ಎಲ್ಲಾ ಜಾತಿ ಧರ್ಮದವರು ಪ್ರೀತಿಸುವಂತವರು ಎಂದರು.

ಹಾಲುಮತ ಸಮಾಜದ ತಾಲೂಕ ಅಧ್ಯಕ್ಷ ವೀರನಗೌಡ ಪೋಲಿಸ್ ಪಾಟೀಲ ಮಾತನಾಡಿ ಕನಕದಾಸರು ರಚಿಸಿದ ಕಿರ್ತನೆಗಳು ವಚನಗಳು, ನಮಗೆಲ್ಲಾ ದಾರಿ ದೀಪವಾಗಿವೆ ಅದರಂತೆ ನಾವು ನಡೆಯಬೇಕಾದ ಅನಿವಾರ್ಯತೆ ಇದೆ ಹಾಗೂ ಅವರ ಮಾರ್ಗದರ್ಶನವು ನಮಗೆ ಅತ್ಯಂತ ಮುಖ್ಯವಾದ್ದು ನಾವೇಲ್ಲರೂ ಒಂದೆ ಭಾರತ ಮಾತೆಯ ಮಕ್ಕಳು ಎನ್ನುವ ಭಾವನೆ ಮೂಡಬೇಕು ಎಂದರು.

ಕನಕದಾಸರ ಭಾವಚಿತ್ರ ಮೆರವಣಿಗೆ ಪಟ್ಟಣದ ಪ್ರಮುಖ ಬಿದಿಗಳಲ್ಲಿ ಡೊಳ್ಳು ವಿವಿಧ ಮಜಲುಗಳೊಂದಿಗೆ ಅದ್ದೂರಿಯಾಗಿ ನಡೆಯಿತು.

ಈ ಸಂದರ್ಭದಲ್ಲಿ ಜಿಪಂ ಸದಸ್ಯೆ ಗೀರಿಜಾ ಸಂಗಟಿ, ತಾಪಂ ಅದ್ಯಕ್ಷೆ ಲಕ್ಷ್ಮೀ ದ್ಯಾಮನಗೌಡ್ರ, ಸದಸ್ಯರಾದ ಜಗನ್ನಾಥ ಪಾಟೀಲ, ಸಾವಿತ್ರಿ ಗೊಲ್ಲರ, ಮುಖಂಡರಾದ ಅಂದಾನಗೌಡ ಪೋಲಿಸ್ ಪಾಟೀಲ, ಕೇರಿಬಸಪ್ಪ ನಿಡಗುಂದಿ, ವೀರಣ್ಣ ಹುಬ್ಬಳ್ಳಿ, ಶಿವಶಂಕರ ದೇಸಾಯಿ, ಈಶ್ವರ ಅಟಮಾಳಗಿ, ಬಾಲಚಂದ್ರ ಸಾಲಭಾವಿ, ಬಸವರಾಜ ಕುಡಗುಂಟಿ, ತಹಸೀಲ್ದಾರ ಸುರೇಶ ತಳವಾರ, ತಾಲೂಕ ಅಧಿಕಾರಿಗಳಾದ ಲಿಂಗನಗೌಡ ಪಾಟೀಲ, ಮಹೇಶ ನೀಡಶೇಸಿ, ಎಪ್ ಎಮ್ ಕಳ್ಳಿ, ಹೆಮಂತರಾಜ್, ಶರಣಪ್ಪ ವಟಗಲ್, ಶರಣಮ್ಮ ಕಾರನೂರು, ನಾಗಪ್ಪ ಸಜ್ಜನ್,  ಸೇರಿದಂತೆ ಪಪಂ ಸರ್ವ ಸದಸ್ಯರು, ಅನೇಕ ಮುಖಂಡರು, ಅಧಿಕಾರಿಗಳು ಹಾಜರಿದ್ದರು.

ಕನಕದಾಸರ ಭಾವಚಿತ್ರ ಮೆರವಣಿಗೆ ಪಟ್ಟಣದ ಪ್ರಮುಖ ಬಿದಿಗಳಲ್ಲಿ ಡೊಳ್ಳು ವಿವಿಧ ಮಜಲುಗಳೊಂದಿಗೆ ಅದ್ದೂರಿಯಾಗಿ ನಡೆಯಿತು.