ಎಲ್ಲ ದಾನಗಳಲ್ಲಿ ಶ್ರೇಷ್ಠವಾದದ್ದು ರಕ್ತದಾನ: ಆರೋಗ್ಯ ರಕ್ಷಾ ಸಮಿತಿ ಅಧ್ಯಕ್ಷರಾದ ಬ್ಯಾಳಿ

ಗದಗ: ಎಲ್ಲ ದಾನಗಳಲ್ಲಿ ಶ್ರೇಷ್ಠವಾದದ್ದು ರಕ್ತದಾನ, ರಕ್ತವನ್ನು ಕೃತಕವಾಗಿ ತಯಾರಿಸಲು ಸಾಧ್ಯವಿಲ್ಲ. ತುತರ್ು ಸಂದರ್ಭದಲ್ಲಿ ಯುವಕರು ಹೆಚ್ಚು ಹೆಚ್ಚು ರಕ್ತದಾನ ಮಾಡುತ್ತಾ ಸಮಾಜ ಸೇವೆಗೆ ಮುನ್ನುಗ್ಗಲು ಕರೆ ನೀಡಿದರು. ರಕ್ತದಾನ ಶಿಬಿರವನ್ನು ಉದ್ಘಾಟಿಸಿದ ಆರೋಗ್ಯ ರಕ್ಷಾ ಸಮಿತಿ ಅಧ್ಯಕ್ಷರಾದ ಗಣೇಶ ಸಿಂಗ್ ಬ್ಯಾಳಿ ಮಾತನಾಡಿದರು.

ಗದಗ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಹಾಗೂ ಜಿಲ್ಲಾ ಏಡ್ಸ್ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಘಟಕ, ಜಿಮ್ಸ್ ರಕ್ತನಿಧಿ ಕೇಂದ್ರ, ಹಾಗೂ ಪ್ರಾ.ಆ.ಕೇಂದ್ರ ಬೇಟಗೇರಿ, ಜಿಲ್ಲಾ ಆರೋಗ್ಯ ಸಹಾಯಕರ ಸಂಘ, ಪ್ರಾಜಾಶಕ್ತಿ ಸೇನಾ ಸಮಿತಿ ಗದಗ. ಇವರುಗಳ ಸಂಯುಕ್ತ ಆಶ್ರಯದಲ್ಲಿ ದಿ. 02ರಂದು ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಜರುಗಿತು. 

ಗಭರ್ೀಣಿ ಮಹಿಳೆಯರಿಗೆ ಹೆರಿಗೆ ಸಮಯದಲ್ಲಿ ಹಾಗೂ ರಕ್ತಹೀನತೆಯಿಂದ ಬಳಲುತ್ತಿರುವ ರೋಗಿಗಳಿಗೆ ರಕ್ತದ ಅವಶ್ಯಕತೆ ಬಹಳಷ್ಟಿದ್ದು, ಯುವಕರು ಮಾಡಿದ ದಾನದಿಂದ ಸಾಕಷ್ಟು ಜೀವಗಳನ್ನು ಉಳಿಸಬಹುದು ಆದ್ದರಿಂದ ಎಲ್ಲರು ಜೀವನದಲ್ಲಿ ಒಂದು ಸಾರಿಯಾದರೂ ರಕ್ತದಾನ ಮಾಡಲು ಕರೆ ನೀಡಿದರು. 

ಇನ್ನೊರ್ವ ಅಥಿತಿಗಳಾದ ಬಸವರಾಜ ಲಾಳಗಟ್ಟಿ ರವರು ಮಾತನಾಡಿ ರಕ್ತದಾನ ಶ್ರೇಷ್ಠದಾನವಾಗಿದ್ದು ರಕ್ತವನ್ನು ಕೃತಕವಾಗಿ ಉತ್ಪಾದನೆ ಮಾಡಲು ಸಾಧ್ಯವಿಲ್ಲ, ದಾನಿಗಳಿಂದ ಮಾತ್ರ ರಕ್ತವನ್ನು ಪಡೆಯಬಹುದು ಹಾಗೂ ಒಬ್ಬ ವ್ಯಕ್ತಿಯ ಜೀವ ಉಳಿಸಲು ವೈದ್ಯರೇ ಆಗಬೇಕೆಂದಿಲ್ಲ ಒಬ್ಬ ವ್ಯಕ್ತಿ ರಕ್ತದಾನ ಮಾಡಿದರೆ ಸಾಕು, ನಾಲ್ಕು ಜನರ ಜೀವ ಉಳುಸಬಹುದೇಂದು ಹೇಳಿದರು. ಪ್ರಜಾಶಕ್ತಿ ವೇದಿಕೆಯ ಮುತ್ತಪ್ಪ ಬಜಂತ್ರಿ, ಬಾಲರಾಜ ಅರಬರ ರಕ್ತದಾನದ ಕುರಿತು ಮಾತನಾಡಿದರು. ಪ್ರಾ.ಆ.ಕೇಂದ್ರದ ವೈದ್ಯಾಧಿಕಾರಿಗಳಾದ ಡಾ. ಎಸ್.ಎಮ್. ಓಣಿ ತಮ್ಮ ಅಧ್ಯಕ್ಷೀಯ ನುಡಿಗಳಲ್ಲಿ ಹಿಂದಿನ ಕಾಲದಲ್ಲಿ ಅನ್ನದಾನ ಶ್ರೇಷ್ಠ ಎಂದು ಹೇಳುತ್ತಿದ್ದರು, ಮುಂದೆ ವಿದ್ಯಾದಾನ ಶ್ರೇಷ್ಠ ಎಂದು ಹೇಳುತ್ತಿದ್ದರು. ಹಾಗೆಯೆ ರಕ್ತದಾನ ಇಂದಿನ ದಿನಮಾನದಲ್ಲಿ ಶ್ರೇಷ್ಠದಾನವಾಗಿದೆ ರಕ್ತಕ್ಕೆ ಸಾಟಿ ಯಾವುದೂ ಇಲ್ಲ ಎಂದು ಹೇಳಿದರು. 

ವೇದಿಕೆಯಲ್ಲಿ ಜಿಲ್ಲಾ ಆರೋಗ್ಯ ಸಹಾಯಕರ ಮತ್ತು ಮೇಲ್ವಿಚಾರಕರ ಸಂಘದ ಗೌರವ ಅಧ್ಯಕ್ಷರಾದ ಅಜಯಕುಮಾರ ಕಲಾಲ ಪ್ರಜಾಶಕ್ತಿ ಸೇನಾ ಸಮಿತಿಯ ಕುಮಾರ ಕಮತರ, ಅರುಣ ಹಿರೇಮಠ, ಶ್ರೀಧರ ಕಲಾಲ, ಮುಸ್ತುಕ ಮುನೇಕರ, ಪ್ರೇಮಾ ಬಾರದ್ವಾಡ, ವಿಲಿಯಂ ಗುಂಡಿ, ಸಂದ್ಯಾ ಗುಂಡಿ, ಅಶೋಕ ಅಂಗಡಿ, ಪ್ರಾ,ಆಕೇಂದ್ರದ ಮಂಜುನಾಥ ಬಂಢಾರಿ, ಎಸ್. ಬಿ, ಗಡಾದ, ಶ್ಯಾಮಯೆಲ್, ಕರಡಿಗುಡ್ಡ, ಎಸ್.ಬಿ. ಪಾಟೀಲ, ಶ್ವೇತಾ ದೇಸಾಯಿ, ಶೀಲಾ ಮಾಳೇಕರ ಹಾಗೂ ಎಲ್ಲ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರು, ಕಿರಿಯ ಪುರುಷ ಆರೋಗ್ಯ ಸಹಾಯಕರು, ಹಾಗೂ ಆಶಾ ಕಾರ್ಯಕರ್ತೆಯರು ಹಾಜರಿದ್ದರು. ರಕ್ತದಾನ ಮಾಡಿದ ಸಿದ್ದು, ಗೋಪಾಲ, ಶ್ರೀಧರ, ಸುಲ್ತಾನ ಶೇಕ್, ಜ್ಯೋತಿ ಬಾಪುರೆ, ಎಸ್.ಬಿ.ಏಣಿ, ಜಾಶಿ ಸಿಂಪಿಗೇರ, ವಹೀದಾ ಅರಮನಿ, ಸುನಂದಾ, ಕಮಲಾ ಬಜಂತ್ರಿ, ಎಮ್.ಎನ್, ದಂಡಿನ, ಹಾಗೂ ಮುಂತಾದವರು ಸೇರಿ 25ಕ್ಕೂ ಹೆಚ್ಚು ಜನ ರಕ್ತದಾನ ಮಾಡಿದರು. ಪ್ರಾರಂಭದಲ್ಲಿ ನಾಗರಾಜ ಜೋಷಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮ ನಿರೂಪಣೆ ಜಿಲ್ಲಾ ಆರೋಗ್ಯ ಸಹಾಯಕರ ಮತ್ತು ಮೇಲ್ವಿಚಾರಕರ ಸಂಘ ಅಧ್ಯಕ್ಷರಾದ ಸಿದ್ದಪ್ಪ ಲಿಂಗದಾಳ ಮಾಡಿದರು, ಬಸವಣ್ಣೇಪ್ಪ ಹಿರೇಹಾಳ ಸ್ವಾಗತಿಸಿದರು, ನೀತಾರಾಣಿ ಕಾಂಬಳೊ ವಂದನಾರ್ಪಣೆಯನ್ನು ನೇರವೇರಿಸಿದರು.