ಗುರಿ ಸಾಧಿಸುವ ಛಲ ಇಟ್ಟುಕೊಳ್ಳಬೇಕು

ಲೋಕದರ್ಶನ ವರದಿ

ಕಾಗವಾಡ 17: ವಿದ್ಯಾರ್ಥಿಗಳು ಜೀವನದಲ್ಲಿ ನಾನು ಒಂದು ಗುರಿ ಸಾಧಿಸುತ್ತೇನೆ ಎಂಬ ವಿಶ್ವಾಸ ಇಟ್ಟುಕೊಳ್ಳಬೇಕು. ಜನ್ಮ ನೀಡಿದ ತಂದೆತಾಯಿ, ಜ್ಞಾನ ನೀಡಿದ ಗುರು ಇವರು ನೀಡಿದ ಉಪದೇಶಗಳು ಜೀವನದಲ್ಲಿ ಅಳವಡಿಸಿಕೊಂಡು ನಿರ್ಧಿಷ್ಠ ಸಮಯದಲ್ಲಿ ಓದಿ ವಿದ್ಯಾವಂತರಾಗಿ ಜೀವನದಲ್ಲಿ ಸಫಲರಾಗಿರಿ ಎಂದು ಬೆಳಗಾವಿ ಜಿಲ್ಲೆಯ ನ್ಯಾಯವಾದಿ ಸಂಘಟನೆಯ ಉಪಾಧ್ಯಕ್ಷರಾದ ನ್ಯಾಯವಾದಿ ಆರ್.ಪಿ.ಪಾಟೀಲ ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಶನಿವಾರ ರಂದು ಕಾಗವಾಡ ತಾಲೂಕಿನ ಗುಂಡೆವಾಡಿ ಗ್ರಾಮದಲ್ಲಿ ಸರ್ವೋದಯ ಶಿಕ್ಷಣ ಸಂಸ್ಥೆ ವಿದ್ಯಾರ್ಥಿಗಳ ವಾರ್ಷಿಕ ಸಭೆ ಸಮಾರಂಭದ ಅಧ್ಯಕ್ಷತೆ ವಹಿಸಿ, ನ್ಯಾಯವಾದಿ ಆರ್.ಪಿ.ಪಾಟೀಲ ಮಾತನಾಡಿದರು. ಸಾಧನೆ ಮಾಡಲು ಬಡತನ, ಶ್ರೀಮಂತ, ಹಳ್ಳಿ, ಪಟ್ಟಣ ಎಂಬುದು ಅಡಚನಿ ಆಗದು. ಗಟ್ಟಿ ಮನಸ್ಸು ಮತ್ತು ಛಲ ಇದ್ದರೆ ಎಲ್ಲವು ಸಾಧ್ಯವಾಗುತ್ತದೆ ಎಂದು ಹೇಳಿದರು.

ಸಮಾರಂಭದಲ್ಲಿ ಕೆ.ಎ.ಎಸ್. ಪದವಿ ಉತ್ತಿರ್ಣರಾಗಿರುವ ಸುರೇಶ ಮುಂಜೆ ಮತ್ತು ಅಜೀತ ಶಿರಹಟ್ಟಿ ಇವರನ್ನು ಸನ್ಮಾನಿಸಿ, ವಿದ್ಯಾರ್ಥಿಗಳಿಗೆ ಇವರು ಮಾಡಿರುವ ಸಾಧನೆ ಬಗ್ಗೆ ವಿವರವಾದ ಮಾಹಿತಿ ನೀಡಿ ವಿದ್ಯಾರ್ಥಿಗಳಲ್ಲಿ ಪ್ರೋತ್ಸಾಹಣೆ ತುಂಬಿಸಲು ಪ್ರಯತ್ನಿಸಿದರು. 

ಮಹಾವಿದ್ಯಾಲಯದ ಪ್ರಾಚಾರ್ಯ ಎ.ಪಿ.ಬಣಜವಾಡ ಇವರು ಪ್ರಾಸ್ತಾವಿಸಿದರು. ತಾಪಂ ಸದಸ್ಯ ಚಂದ್ರಕಾಂತ ಗೊಂಧಳಿ, ಜಿ.ಎಂ.ಜತ್ತಿ, ವಿಶ್ವನಾಥ ಪಾಟೀಲ, ಪದ್ಮಣ್ಣಾ ಬಣಜವಾಡ ಇವರು ಮಾತನಾಡಿದರು. ಪ್ರಾಧ್ಯಾಪಕರಾದ ಬಿ.ಎಸ್.ಗುರವ ಸ್ವಾಗತಿಸಿ, ಜಿ.ಎಂ.ಮುಜಾವರ, ಪರಿಚಯಿಸಿದರು. ಈಶ್ವರ್ಯಾ  ಮುಡಸಿ ನಿರೂಪಿಸಿ, ಸುನೀತಾ ಜೋಗಾಣಿ ವಂದಿಸಿದರು.