ಲೋಕದರ್ಶನ ವರದಿ
ಕೊಪ್ಪಳ 22: ಶಿಕ್ಷಣ ಕ್ಷೇತ್ರದಲ್ಲಿ ಮಕ್ಕಳ ಭವಿಷ್ಯ ಅಡಗಿದೆ. ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವುದರ ಜೊತೆಗೆ ಭವಿಷತ್ತಿನಲ್ಲಿ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಮಕ್ಕಳಿಂದ ನಿರ್ಮಿಸಲ್ಪಟ್ಟ ಮಕ್ಕಳ ಸಂತೆ ಕಾರ್ಯಕ್ರಮ ಸ್ವಾವಲಂಬಿ ಬದುಕಿಗೆ ಜಾಗೃತಿ ನೀಡಲು ಪ್ರೇರಣೆಯಾಗಿದೆ ಎಂದು ನಗರಸಭೆ ಸದಸ್ಯೆ ಅಶ್ವಿನಿ ಭರತ್ ಗದುಗಿನಮಠ ಹೇಳಿದರು.
ಅವರು ಶನಿವಾರ ನಗರದ ಬಹದ್ದೂರಬಂಡಿ ರಸ್ತೆಯಲ್ಲಿರುವ ಮಿಲ್ಲತ್ ಪಬ್ಲಿಕ್ ಶಾಲೆಯಲ್ಲಿ ಮಿಲ್ಲತ್ ಉತ್ಸವ-2020 ಇದರ ಅಡಿಯಲ್ಲಿ ಏರ್ಪಡಿಸಿದ ಮಕ್ಕಳ ಸಂತೆ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿ, ಇಂದಿನ ಮಕ್ಕಳೇ ಈ ನಾಡಿನ ಭಾವಿ ಪ್ರಜೆಗಳಾಗಿದ್ದು, ಮಕ್ಕಳ ಭವಿಷ್ಯ ಉಜ್ವಲಗೊಳ್ಳಲು ಅವರನ್ನು ಭವಿಷತ್ತಿನಲ್ಲಿ ಉತ್ತಮ ಬದುಕು ಕಟ್ಟಿಕೊಳ್ಳಲು ಮತ್ತು ಸ್ವಾವಂಲಬಿಗಳಾಗಿ ಬಾಳಲು ಮಕ್ಕಳ ಸಂತೆದಂತಹ ಕಾರ್ಯಕ್ರಮ ಜಾಗೃತಿ ಮೂಡಿಸುತ್ತದೆ ಮತ್ತು ಅವರಿಗೆ ಇದೊಂದು ಪ್ರೇರಣೆಯಾಗಿದೆ ಎಂದರು.
ಮುಂದುವರೆದು ಮಾತನಾಡಿದ ಅವರು, ಶಿಕ್ಷಣ ಸ್ವಾವಲಂಬಿ ಬದುಕು ಮತ್ತು ಉತ್ತಮ ಸಂಸ್ಕಾರ ಕಲಿಸಲು ಶಿಕ್ಷಕರು ಮತ್ತು ಪಾಲಕರು ಅತ್ಯಂತ ಮುತುವಜರ್ಿವಹಿಸಿ ಶ್ರಮಿಸಬೇಕು. ಅದನ್ನು ನಾವೆಲ್ಲರೂ ಪ್ರಾಮಾಣಿಕವಾಗಿ ನಿಬಾಯಿಸಿದರೆ ಮಕ್ಕಳ ಬದುಕು ಸಾರ್ಥಕವಾಗುತ್ತದೆ ಎಂದು ನಗರಸಭೆ ಸದಸ್ಯೆ ಅಶ್ವಿನಿ ಭರತ್ ಗದುಗಿನಮಠ ಹೇಳಿದರು.
ಸಮಾರಂಭದ ಅಧ್ಯಕ್ಷತೆಯನ್ನು ಮಿಲ್ಲತ್ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರಾದ ನಗರಸಭೆ ಸದಸ್ಯರಾದ ಅಮ್ಜದ್ ಪಟೇಲ್ ರವರು ವಹಿಸಿ ಮಾತನಾಡಿ, ಪ್ರಪ್ರಥಮ ಬಾರಿಗೆ ಮಿಲ್ಲತ್ ಶಾಲೆಯಲ್ಲಿ ಆಯೋಜಿಸಿರುವ ಮಕ್ಕಳ ಸಂತೆ ಕಾರ್ಯಕ್ರಮ ಪಾಲಕರ ಸಹಕಾರದಿಂದ ಯಶಸ್ವಿಯಾಗಿದೆ. ಮಕ್ಕಳಿಗೆ ವ್ಯಾಪಾರ ವಹಿವಾಟಿನ ಬಗ್ಗೆ ಮಾಹಿತಿ ದೊರೆಯಲು ಈ ಮಕ್ಕಳ ಸಂತೆ ಕಾರ್ಯಕ್ರಮ ಅತ್ಯಂತ ಸಹಕಾರಿಯಾಗಿದೆ ಎಂದರು.
ಶಾಲೆಯಲ್ಲಿ ಮಕ್ಕಳಿಗಾಗಿ ಏರ್ಪಡಿಸಿದ ವ್ಯಂಗ್ಯಚಿತ್ರಗಾರ ಬದ್ರಿನಾಥ ಪುರೋಹಿತರ ವ್ಯಂಗ್ಯ ಚಿತ್ರಗಳ ಪ್ರದರ್ಶನದ ಉದ್ಘಾಟನೆಯನ್ನು ಶಿಕ್ಷಣ ಸಂಯೋಜಕ ಚಂದ್ರಶೇಖರ ಹತ್ತಿಕಟಿಗಿ ನೆರವೇರಿಸಿ ಮಾತನಾಡಿ, ಮಕ್ಕಳಿಗೆ ಆರಂಭದಲ್ಲಿಯೇ ದುಡಿದು ತಿನ್ನುವ ಛಲದ ಬಗ್ಗೆ ಜಾಗೃತಿ ಮೂಡಿಸುವ ಮಕ್ಕಳ ಸಂತೆ ಕಾರ್ಯಕ್ರಮದಿಂದ ವ್ಯಾಪಾರ ವಹಿವಾಟಿನ ತಿಳುವಳಿಕೆ ಮತ್ತು ಜಾಗೃತಿ ಮಕ್ಕಳಲ್ಲಿ ಬಂದಿದೆ. ಇದು ಒಳ್ಳೆಯ ಬೆಳವಣಿಗೆ ಎಂದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಭೂಮಾಪನ ಇಲಾಖೆಯ ನಿರೀಕ್ಷಕ ಹಾಗೂ ಮುಸ್ಲಿಂ ಸಕರ್ಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಬದಿಯುದ್ದೀನ್ ನವೀದ್ ರವರು ಮಾತನಾಡಿ, ಮಕ್ಕಳ ಸಂತೆ ಕಾರ್ಯಕ್ರಮ ಆಯೋಜಿಸಿದ ಮಿಲ್ಲತ್ ಶಾಲೆಯ ಪದಾಧಿಕಾರಿ ಹಾಗೂ ಶಿಕ್ಷಕರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ವೇದಿಕೆಯ ಮೇಲೆ ಮುಖ್ಯ ಅತಿಥಿಗಳಾಗಿ ನಾಗರತ್ನ ಶಿಕ್ಷಣ ಸೇವಾ ಸಂಸ್ಥೆಯ ಕಾರ್ಯದಶರ್ಿ ಅನೀಲ್ ಕುಮಾರ ಬೇಗಾರ, ಕೌತಾಳಂ ದಗರ್ಾದ ಖಲೀಫಾ ಇಮಾಮ್ ಹುಸೇನ್ ದಾದಾಪೀರ ಸಾಹೇಬ, ಪಾಲಕರ ಪ್ರತಿನಿಧಿ ದಾದಾಮೀಯಾ ಖಾಜಿ, ಮೌಲಾಹುಸೇನ ಮಂಗಳೂರು, ಫರಹತ್ ಖಾನಂ, ಅಂಜುಮನ್ ಕಮೀಟಿ ಅಧ್ಯಕ್ಷ ಹುಸೇನಪೀರಾ ಮುಜಾವರ, ನಗರ ಕಾಂಗ್ರೆಸ್ ಅಧ್ಯಕ್ಷ ಎಂ.ಪಾಷಾ ಕಾಟನ್, ಮಿಲ್ಲತ್ ಸಂಸ್ಥೆಯ ಅಧ್ಯಕ್ಷ ಇಮಾಮ್ ಹುಸೇನ್ ಸಿಂದೊಗಿ, ನೂತನ ಅಧ್ಯಕ್ಷ ಎಂ.ಡಿ.ಜಹೀರ್ ಅಲಿ, ಸಂಸ್ಥಾಪಕ ಗೌಸ್ ಪಾಷಾ ಖಾಜಿ, ಮುಖ್ಯ ಸಲಹೆಗಾರ ಎಂ.ಸಾದಿಕ್ ಅಲಿ, ಶಿಕ್ಷಣ ಸಲಹೆಗಾರ ನಜೀರ್ ಅಹ್ಮದ್, ಸದಸ್ಯರಾದ ಅಬ್ದುಲ್ ಅಜೀಜ್ ಮಾನ್ವಿಕರ್, ಎಂ.ಡಿ.ಆಸೀಫ್ ಕಕರ್ಿಹಳ್ಳಿ, ದಾವುದ್ ಹುನಗುಂದ, ಬಸೆರಾ ಅನಾಥಾಶ್ರಮದ ಎಂ.ಡಿ.ಯೂಸೂಫ ಖಾನ್ ಸೇರಿದಂತೆ ಶಾಲೆಯ ಮುಖ್ಯ ಶಿಕ್ಷಕ ನಜೀರ್ ಅಹ್ಮದ್ರವರು ಪಾಲ್ಗೊಂಡಿದ್ದರು.
ಕ್ರೀಡೆಯಲ್ಲಿ ವಿಜೇತರಾದ ವಿದ್ಯಾಥರ್ಿಗಳಿಗೆ ಗಣ್ಯರಿಂದ ಸನ್ಮಾನಿಸಲಾಯಿತು. ಹಾಗೂ ಅನೀಲ್ ಬೇಗಾರ ಮತ್ತು ಚಂದ್ರಶೇಖರ ಹತ್ತಿಕಟಿಗಿ ಅವರಿಗೆ ಸನ್ಮಾನಿಸಲಾಯಿತು. ನಂತರ ಯಶಸ್ವಿಯಾಗಿ ಮಕ್ಕಳ ಸಂತೆ ಜರುಗಿತು. ಬಹಳಷ್ಟು ಜನ ವಿದ್ಯಾಥರ್ಿಗಳ ಪಾಲಕರು, ಗಣ್ಯರು, ಸಾರ್ವಜನಿಕರು, ಯುವಕರು ಮಕ್ಕಳ ಸಂತೆ ಕಾರ್ಯಕ್ರಮವನ್ನು ವೀಕ್ಷೀಸಿ ತಮಗೆ ಬೇಕಾಗಿರುವ ಗೃಹ ಬಳಕೆ ಸಾಮಗ್ರಿ ಖರೀದಿಸಿದರು. ಮಕ್ಕಳ ಸಂತೆ ಕಾರ್ಯಕ್ರಮಕ್ಕೆ ಉತ್ತಮ ಪ್ರತಿಕ್ರೀಯೆ ಮತ್ತು ಮೆಚ್ಚುಗೆ ವ್ಯಕ್ತವಾಯಿತು.