ಮಲ್ಲಿಕಾರ್ಜುನ ದೇವಸ್ಥಾನ ನಿರ್ಮಾಣಕ್ಕೆ ನಿವೇಶನಕ್ಕೆ ಮನವಿ
Request for site for construction of Mallikarjuna temple
ಮೂಡಲಗಿ 11: ಮೂಡಲಗಿಯ ಲಕ್ಷ್ಮೀ ನಗರದ ಪುಠಾಣಿ ಪ್ಲಾಟ್‌ದಲ್ಲಿ ಮಲ್ಲಿಕಾರ್ಜನ ದೇವಸ್ಥಾನ ಮತ್ತು ಉದ್ಯಾನ ನಿರ್ಮಾಣಕ್ಕಾಗಿ ಪುರಸಭೆಯ ನಿವೇಶನವನ್ನು ನೀಡಬೇಕು ಎಂದು ಪಟ್ಟಣದ ಎಲ್ಲ ಸಮಾಜದ ಹಿರಿಯರು ಪುರಸಭೆ ಮುಖ್ಯಾಧಿಕಾರಿ ತುಕಾರಾಮ ಮಾದರ ಅವರಿಗೆ ಬುಧವಾರ ಮನವಿ ನೀಡಿದರು. ಪುರಸಭೆ ಮಾಜಿ ಸದಸ್ಯ ಜಯಾನಂದ ಪಾಟೀಲ, ಪ್ರಕಾಶ ಪುಠಾಣಿ, ಬಣಜಿಗ ಸಮಾಜದ ಅಧ್ಯಕ್ಷ ಶಿವಪ್ಪ ಭುಜನ್ನವರ ಹಾಗೂ ಅನ್ವರ ನದಾಫ ಮಾತನಾಡಿ ಲಕ್ಷ್ಮೀ ನಗರದ ಪುಠಾಣಿ ಪ್ಲಾಟ್‌ದಲ್ಲಿ ಮಲ್ಲಿಕಾರ್ಜುನ ದೇವಸ್ಥಾನ ಮತ್ತು ಉದ್ಯಾನ ನಿರ್ಮಾಣಕ್ಕೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರಿಗೂ ಎಲ್ಲ ಭಕ್ತರು ಸೇರಿ ಮನವಿ ನೀಡಲಾಗುವುದು ಎಂದರು.
ಇದೇ ಸಂದರ್ಭದಲ್ಲಿ ಪುಠಾಣಿ ಪ್ಲಾಟ್‌ದಲ್ಲಿ ಸಸಿಗಳನ್ನು ನೆಟ್ಟರು. ಪುರಸಭೆ ಮಾಜಿ ಸದಸ್ಯರಾದ ಸಂತೋಷ ಸೋನವಾಲಕರ, ಹನಮಂತ ಗುಡ್ಲಮನಿ, ರಾಮಣ್ಣಾ ಹಂದಿಗುಂದ, ಶಿವು ಚಂಡಿಕಿ, ಆದಮ್ ತಾಂಬೂಳಿ, ರವೀಂದ್ರ ಸಣ್ಣಕ್ಕಿ, ಬಸು ಝಂಡೇಕುರಬರ, ಗಫಾರ ಡಾಂಗೆ, ಹಿರಿಯರಾದ ಶಂಕರಯ್ಯ ಹಿರೇಮಠ, ಬಸವರಾಜ ಪಾಟೀಲ, ಈರ್ಪ ಬುದ್ನಿ, ಪ್ರಕಾಶ ಪುಠಾಣಿ, ಚೇತನ ನಿಶಾನಿಮಠ, ಸಂತೋಷ ಸಿ. ಅಂಗಡಿ, ಮಲ್ಲಪ್ಪ ಯಮಕರಣಮರಡಿ, ಶಂಕರ ತಾಂವಶಿ, ಶಿವಬಸು ನೀಲಣ್ಣವರ, ಬಿ.ಜಿ. ಜಕಾತಿ, ಅಶೋಕ ಭಾಗೋಜಿ, ಈರ್ಪ ಕಂಬಾರ, ಸುಭಾಷ ಕೊಟಗಿ, ಸಿದ್ದು ಕೊಟಗಿ, ಪ್ರದೀಪ ಲಂಕಪ್ಪನ್ನವರ, ಸಂಗಯ್ಯ ಮಠಪತಿ ಸೇರಿದಂತೆ ಪಟ್ಟಣದ ಹಿರಿಯರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 