ಆಧುನಿಕ ಆರೋಗ್ಯ ವ್ಯವಸ್ಥೆಯಲ್ಲಿ ಸಹಕಾರ ಮತ್ತು ಸಮನ್ವಯ ಅತ್ಯಂತ ಮುಖ್ಯ: ಡಾ. ವಾನಿಶ್ರೀ
Cooperation and coordination are very important in a modern healthcare system: Dr. Vanishree
ಬೆಳಗಾವಿ 11 : ಅಂತರ್ವೃತ್ತಿಪರ ಶಿಕ್ಷಣ ಆರೋಗ್ಯ ಸೇವಾ ವೃತ್ತಿಪರರಿಗಾಗಿ ಸಹಕಾರಾತ್ಮಕ ತರಬೇತಿ” ಬ ವಿಷಯದ ಕಾರ್ಯಾಗಾರವನ್ನು ಓಷಧೀಯ ವಿಶ್ಲೇಷಣಾ ವಿಭಾಗ, ಕೆಎಲ್‌ಇ ಓಷಧೀಯ ಮಹಾವಿದ್ಯಾಲಯ, ಬೆಳಗಾವಿ, ಇವರು ಯುನಿವೆರ್ಸಿಟಿ ಡಿಪಾರ್ಟ್ಮಂಟ್ ಆಫ್ ಎಜುಕೇಶನ್ಫಾರ್ಹೆಲ್ತ್ಪ್ರಫೆಷನಲ್ಸ್ , ಕೆಎಲ್‌ಇ ಅಕಾಡೆಮಿ ಆಫ್ಹೈಯರ್ ಎಜುಕೇಶನ್ ಅಂಡ್ರಿಸರ್ಚ್ ಅವರ ಆಶ್ರಯದಲ್ಲಿ 11 ಮಾರ್ಚ2026 ರಂದು ಆಯೋಜಿಸಿದರು.
ಕಾರ್ಯಕ್ರಮದ ಆರಂಭದಲ್ಲಿ ಡಾ. ಬಿ.ಎಂ. ದಿನ್ನಿಮಠ ಅವರು ಸ್ವಾಗತ ಭಾಷಣ ಮಾಡಿಗಣ್ಯರು ಮತ್ತು ಭಾಗವಹಿಸಿದ ಎಲ್ಲರನ್ನು ಆತ್ಮೀಯವಾಗಿ ಸ್ವಾಗತಿಸಿದರು. ಡಾ. ಎಂ. ಎಸ್. ಪಲ್ಲೇದ ಅವರು ಮುಖ್ಯಅತಿಥಿ ಡಾ. ನವೀನ್‌ಎನ್, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಕೆಎಲ್‌ಇ ಸೆಂಟಿನರಿ ಚಾರಿಟೇಬಲ್ ಆಸ್ಪತ್ರೆ, ಬೆಳಗಾವಿ, ಇವರನ್ನು ಪರಿಚಯಿಸಿದರು.
ಯುಡಿಇಎಚ್‌ಪಿ ಸಂಯೋಜಕಿ ಡಾ. ವಾನಿಶ್ರೀ ಎಸ್. ಬುಬನಾಳೆ ಅವರು ಯುಡಿಇಎಚ್ಪಿ ಕಾರ್ಯಕ್ರಮದ ಅವಲೋಕನವನ್ನು ನೀಡುತ್ತಾ, ಅದರ ಉದ್ದೇಶಗಳನ್ನು ವಿವರಿಸಿ, ಆರೋಗ್ಯ ಸೇವಾಕ್ಷೇತ್ರದಲ್ಲಿ ಪರಸ್ಪರ ಸಹಕಾರಾತ್ಮಕ ಶಿಕ್ಷಣದ ಮಹತ್ವವನ್ನು ಒತ್ತಿ ಹೇಳಿದರು. ಡಾ. ಗೀತಾಂಜಲಿ ಸಾಲಿಮಠ ಅವರು ಕಾರ್ಯಾಗಾರದ ಉದ್ದೇಶಗಳು ಮತ್ತು ಮಹತ್ವದ ಬಗ್ಗೆ ಸಭೆಗೆ ಮಾಹಿತಿ ನೀಡಿದರು.
ತಮ್ಮ ಭಾಷಣದಲ್ಲಿ ಮುಖ್ಯ ಅತಿಥಿ ಡಾ. ನವೀನ್ ಎನ್‌ಅವರು ಆಧುನಿಕ ಆರೋಗ್ಯ ವ್ಯವಸ್ಥೆಯಲ್ಲಿ ವಿವಿಧ ಕ್ಷೇತ್ರಗಳ ಆರೋಗ್ಯ ವೃತ್ತಿಪರರ ನಡುವೆ ಸಹಕಾರ ಮತ್ತು ಸಮನ್ವಯ ಅತ್ಯಂತ ಮುಖ್ಯವೆಂದು ತಿಳಿಸಿದರು. ವಿಭಿನ್ನ ಶಾಖೆಗಳ ಆರೋಗ್ಯ ವೃತ್ತಿಪರರ ನಡುವೆ ಪರಿಣಾಮಕಾರಿ ಸಂವಹನ ಮತ್ತು ತಂಡಭಾವನೆಯಿಂದ ಸಮಗ್ರ ಹಾಗೂ ರೋಗಿ ಕೇಂದ್ರಿತ ಆರೋಗ್ಯ ಸೇವೆಗಳನ್ನು ನೀಡಲು ಸಾಧ್ಯವೆಂದು ಅವರು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲರಾದ ಡಾ. ಸುನಿಲ್‌ಎಸ್. ಜಲಾಲಪುರೇ ಅವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ, ಇಂತಹ ಕಾರ್ಯಾಗಾರಗಳು ಆರೋಗ್ಯ ವೃತ್ತಿಪರರ ನಡುವೆ ಅಂತರ್ವಿಭಾಗೀಯ ಕಲಿಕೆ ಮತ್ತು ಸಹಕಾರಾತ್ಮಕ ಕಾರ್ಯಪದ್ಧತಿಯನ್ನು ಉತ್ತೇಜಿಸುವಲ್ಲಿ ಮಹತ್ವದ ಪಾತ್ರವಹಿಸುತ್ತವೆ ಎಂದು ಪ್ರಶಂಸಿಸಿದರು. ಇದು ಆರೋಗ್ಯ ಶಿಕ್ಷಣವನ್ನು ಬಲಪಡಿಸಿ ರೋಗಿಸೇವೆಗಳನ್ನು ಉತ್ತಮಗೊಳಿಸಲು ಸಹಕಾರಿ ಎಂದು ಹೇಳಿದರು. ಕಾರ್ಯಾಗಾರದಲ್ಲಿ ಸಂವಹನಾತ್ಮಕ ಅಧಿವೇಶನಗಳು, ಚರ್ಚೆಗಳು ಹಾಗೂ ಸಮೂಹ ಚಟುವಟಿಕೆಗಳನ್ನು ಒಳಗೊಂಡಿದ್ದು, ಆರೋಗ್ಯ ವೃತ್ತಿಪರರ ಪಾತ್ರಗಳ ಅರಿವು, ಸಂವಹನ ಕೌಶಲ್ಯಗಳು ಮತ್ತು ತಂಡ ಭಾವನೆಯನ್ನು ವೃದ್ಧಿಸುವುದೇ ಇದರ ಮುಖ್ಯ ಉದ್ದೇಶವಾಗಿದೆ.
ಈ ಕಾರ್ಯಾಗಾರದಲ್ಲಿ ಸುಮಾರು 30 ಅಧ್ಯಾಪಕರು ಭಾಗವಹಿಸಿ ಅಧಿವೇಶನಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡರು. ಕೊನೆಯಲ್ಲಿ ಡಾ. ಶೈಲೆಂದ್ರ ಎಸ್. ಸೂರ್ಯವಂಶಿ ಅವರು ಧನ್ಯವಾದ ಸಲ್ಲಿಸಿದರು. ಈ ಸಂದರ್ಭದಲಿ ್ಲಡಾ. ಸುನಿಲ್ ಎಸ್. ಜಲಾಲಪುರೇ (ಪ್ರಾಂಶುಪಾಲರು), ಡಾ. ವಿ. ಎಸ್. ಮಸ್ತಿಹೋಳಿಮಠ (ಡೀನ್), ಡಾ. ವಾನಿಶ್ರೀ ಎಸ್. ಬುಬನಾಳೆ, ಡಾ. ಎಂ. ಎಸ್. ಪಲ್ಲೇದ, ಡಾ. ಗೀತಾಂಜಲಿ ಸಾಲಿಮಠ, ಡಾ.ಬಿ.ಎಂ. ದಿನ್ನಿಮಠ ಹಾಗೂ ಕೆಎಲ್‌ಇ ಓಷಧೀಯ ಮಹಾವಿದ್ಯಾಲಯ, ಬೆಳಗಾವಿಯ ಅಧ್ಯಾಪಕ ವೃಂದ ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 