ಲೋಕದರ್ಶನ ವರದಿ
ಮಾಂಜರಿ 07: ಸಂವಿಧಾನ ಅನುಷ್ಠಾನಕ್ಕೆ ಬಂದು 74 ವರ್ಷಗಳು ಕಳೆದಿದ್ದರೂ ಇಂದಿಗೂ ಅಂಬೇಡ್ಕರ್ ಅವರ ಆಶಯಗಳು ಇನ್ನೂ ಈಡೇರದೆ ದಲಿತರಿಗೆ ಶಿಕ್ಷಣ, ಸಾಮಾಜಿಕ ಸ್ಥಿತಿಗತಿ ಮತ್ತು ಮೂಲಭೂತ ಹಕ್ಕುಗಳ ಲಭ್ಯತೆ ಮರೀಚಿಕೆಯಾಗಿಯೇ ಉಳಿದಿದೆ ಎಂದು ದಲಿತ ಸಂಘರ್ಷ ಸಮಿತಿಯ ಮುಖಂಡ ಹಾಗೂ ಮಾಂಜರಿ ಗ್ರಾಮ ಪಂಚಾಯಿತಿಯ ಸದಸ್ಯ ಸಿದ್ಧಾರ್ಥ ಗಾಯಗಳ ತಿಳಿಸಿದರು.
ಅವರು ಚಿಕ್ಕೋಡಿ ತಾಲೂಕಿನ ಮಾಂಜರಿ ಗ್ರಾಮದ ಅಂಬೇಡ್ಕರ್ ನಗರದಲ್ಲಿ ಡಾ.ಬಿ.ಅರ್.ಅಂಬೇಡ್ಕರ್ ಅವರ 63ನೇಯ ಪರಿನಿವರ್ಾಣದಿನ ಅಂಗವಾಗಿ ಡಾ.ಬಿಅರ್ ಅಂಬೇಡ್ಕರ್ ಯುವಕರ ಬಳಗದ ವತಿಯಿಂದ ಹಮ್ಮಿಕೊಂಡಿದ್ದ ನಮನ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡುತ್ತಿದ್ದರು.
ಸಂವಿಧಾನ ಯಥಾವತ್ತಾಗಿ ಜಾರಿಯಾಗಿಲ್ಲದಿರುವುದೇ ದಲಿತರು ಇನ್ನೂ ಇದೇ ಸ್ಥಿತಿಯಲ್ಲಿರುವಂತಾಗಿದೆ ಆಳುವ ಸರಕಾರಗಳು ಅಧಿಕಾರಿಗಳಲ್ಲಿ ಕಾರ್ಯಬದ್ದತೆ ಇಲ್ಲದೆ ಅವರ ಹಕ್ಕುಗಳಿಗೆ ಚ್ಯುತಿಯಾಗಿ ಅಂಧಕಾರದಲ್ಲಿ ಬದುಕುವಂತಾಗಿದೆ ಎಂದರು. ದಲಿತ ಸಂಘಟನೆಗಳ ಪದಾಧಿಕಾರಿಗಳು ಇನ್ನಾದರೂ ಎಚ್ಚೆತ್ತು ದಲಿತರಗೆ ಸಿಗಬೇಕಾದ ಸೌವಲತ್ತುಗಳ ಬಗ್ಗೆ ಅರಿತು ಪಡೆಯಲು ಪ್ರಯತ್ನಿಸಬೇಕು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಶೋಷಿತರಿಗೆ ತಲುಪುವಂತೆ ಮಾಡಬೇಕು ಎಂದ ಅವರು ದಲಿತರಿಗೆ ರಾಜಕೀಯ ಶಕ್ತಿ ತುಂಬಿದಾಗ ಮಾತ್ರ ಅವರಿಗೆ ನಿಜವಾದ ಸ್ವಾತಂತ್ರ್ಯ ಸಿಕ್ಕಲಿದೆ ಎಂಬ ಕನಸು ಇನ್ನೂ ನನಸಾಗಿ ಉಳಿದಿರುವುದು ಷಾದಾನೀಯ ಎಂದು ಕಳವಳ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಗ್ರಾಮದ ದಲಿತ ಮುಖಂಡರಾದ ಮುಕೇಶ್ ಲಂಬುಗೋಳ ರವೀಂದ್ರವಡೆವಡ ಪ್ರಭಾಕರ್ ಭೀಮಣ್ಣನವರ ವಿಶ್ವನಾಥ್ ಮಯನ್ನವರ್ ತಮ್ಮಣ್ಣ ಕಾಂಬಳೆ ಕುಮಾರ ವಡ ವಡೆ ಶಂಕರ್ ಗಾಯಗಳ ಗಜಾನನ ಖಾಸಾಯಿ ಚಂದ್ರಕಾಂತ ಕಾಂಬಳೆ ಅವರು ಹಾಜರಿದ್ದರು.