ಅಥಣಿ 23: ಸ್ವಂತ ಮನೆಯನ್ನು ಯಾವ ರೀತಿ ಸ್ವಚ್ಚತೆಯಿಂದ ಕಾಪಾಡಿಕೊಳ್ಳುತ್ತೆಯೋ, ಅದೇ ರೀತಿ ಪರಿಸರ ಸಂರಕ್ಷಣೆ ಮಾಡುವದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ. ಅಥಣಿಯಂತಹ ಬರಗಾಲ ಪ್ರದೇಶದಲ್ಲಿ ಅರಣ್ಯ ಇಲಾಖೆ ಸಹಕಾರದ ಮೂಲಕ ಪ್ರಸಕ್ತ ವರ್ಷದಲ್ಲಿ ರೋಟರಿ ಸಂಸ್ಥೆಯ ಪದಾಧಿಕಾರಿಗಳು ಒಂದು ಲಕ್ಷ ಸಸಿಗಳನ್ನು ನೆಡುವಲ್ಲಿ ಕಾಯೋನ್ಮೋಖವಾಗಬೇಕು ಎಂದು ರೋಟರಿ ಜಿಲ್ಲಾ ಪ್ರಾಂತುಪಾಲರಾದ ಗಣೇಶ ಭಟ್ ಮಾತನಾಡಿದರು.
ಸ್ಥಳಿಯ ಶಿವಣಗಿ ಸಾಂಸ್ಕ್ರತೀಕ ಭವನದಲ್ಲಿ ರೋಟರಿ ಕ್ಲಬ್ ಅಥಣಿ ದಕ್ಷಿಣದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಉದ್ಗಾಟಿಸಿ ಪದಗ್ರಹಣ ನೀಡಿ ಮಾತನಾಡಿದರು. ನೀರು ಅಮೂಲ್ಯವಾದದ್ದು, ಜಲಸಂಪತ್ತು ಕೊರತೆಯಾಗದಂತೆ ಅರಣ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆಸಬೇಕು.ಪ್ರತಿಯೊಬ್ಬ ನಾಗರಿಕನು ಒಂದು ಗಿಡವನ್ನು ದತ್ತು ಪಡೆದು ಸಂರಕ್ಷಣೆ ಮಾಡಿದರೆ ಲಕ್ಷಾಂತರ ಗಿಡಮರಗಳನ್ನು ಬೆಳೆಸಲು ಸಾಧ್ಯವಿದೆ.
ಮುಂದುವರೆದು ಈ ನಿಟ್ಟಿನಲ್ಲಿ ರೋಟರಿ ಸದಸ್ಯರು ಕೆಲಸ ಮಾಡಬೇಕು ಮತ್ತು ಇಂದು ಸರಕಾರಿ ಶಾಲೆಗಳಲ್ಲಿ ಪರಿಸರ ಕಾಳಜಿ ಮತ್ತು ಸ್ವಚ್ಚತೆಗೆ ಆಧ್ಯತೆ ನೀಡಬೇಕಾಗಿದೆ. ನಮ್ಮ ಮಕ್ಕಳ ಆರೋಗ್ಯದ ಮೇಲೆ ದುಷ್ಪರಿಣಾಮವಾಗದಂತೆ ಶಾಲೆಗಳ ಶೌಚಾಲಯಗಳನ್ನು ಸ್ವಚ್ಚತೆ ಕಾಪಾಡಬೇಕಾಗಿದೆ. ಅದಕ್ಕಾಗಿ ವಿವಿಧ ಕೈಗಾರಿಕಾ ಸಂಸ್ಥೆಗಳ ಸಹಕಾರ ಪಡೆದು ಅವುಗಳನ್ನು ಸ್ವಚ್ಚತೆಗೊಳಿಸುವ ಮೂಲಕ ಸ್ವಚ್ಚ ಭಾರತದಂತಹ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸಬೇಕು ಎಂದು ತಿಳಿಸಿದರು.
ಅತಿಥಿಗಳಾಗಿದ್ದ ಸಹಾಯಕ ಪ್ರಾಂತಪಾಲರಾದ ಸಂದೀಪ ಸಂಗೋರಾಮ ಮಾತನಾಡಿ ಪ್ರತಿ ರೋಟರಿ ಸಂಸ್ಥೆಯ ವ್ಯಾಪ್ತಿಯಲ್ಲಿ ಪರಿಸರ ಕಾಳಜಿಯ ಜೊತೆಗೆ ಜನರ ಆರೋಗ್ಯದ ಬಗ್ಗೆ ಗಮನದಲ್ಲಿಟ್ಟಿಕೊಂಡು ಆರೋಗ್ಯ ಶಿಬಿರಗಳನ್ನು ಆಯೋಜಿಸಬೇಕು. ಪ್ರಸಕ್ತ ವರ್ಷ ಕನಿಷ್ಠ 100 ಜನ ಬಡರೋಗಿಗಳಿಗೆ ಉಚಿತ ನೇತ್ರ ಶಿಬಿರವನ್ನು ಆಯೋಸಬೇಕು ಎಂದು ಹೇಳಿದರು.
ಸಂಸ್ಥಾಪಕ ಅಧ್ಯಕ್ಷ ಸಿದ್ದಾರೂಢ ಸವದಿ ಮತ್ತು ನೂತನ ಅಧ್ಯಕ್ಷ ರಾಮಣ್ಣ ಧರಿಗೌಡರ ಮಾತನಾಡಿದರು. ಮುಖ್ಯ ಅತಿಥಿಗಳಾಗಿದ್ದ ಗಣೇಶ ಭಟ್ ಅವರು ಸನ್ 2019-20 ನೇ ಸಾಲಿನ ಅಧ್ಯಕ್ಷರಾಗಿ ರಾಮಣ್ಣ ಧರಿಗೌಡರ, ಕಾರ್ಯದಶರ್ಿಯಾಗಿ ಸುರೇಶ ಚಿಕ್ಕಟ್ಟಿ ಮತ್ತು ಖಜಾಂಚಿಯಾಗಿ ಸಿದ್ದರಾಜ ಬೋರಾಡೆ ಅವರಗೆ ಅಧಿಕಾರದ ಪದಗ್ರಹಣ ಮಾಡಿದರು. ಈ ವೇಳೆ ಹಿಂದಿನ ಅಧ್ಯಕ್ಷ ಡಿ.ಡಿ ಮೇಕನಮರಡಿ, ಅನಂತ ಬಸರಿಕೋಡಿ,ಶ್ರೀಕಾಂತ ಮಾಕಾಣಿ, ಸಿದ್ದರಾಜ ಬೋರಾಡಿ, ಪಿ.ಜಿ ಬೋಗರ್ಿಕರ ಇನ್ನೀತರರು ಉಪಸ್ಥಿತರಿದ್ದರು.