ಹಾವೇರಿ : ಉತ್ತರ ಕನರ್ಾಟಕದ ಬಗ್ಗೆ ಈವರಿಗೆ ಆಡಳಿತ ಮಾಡಿದ ಕೇಂದ್ರ ಹಾಗೂ ರಾಜ್ಯ ಸಕರ್ಾರಗಳು ನಿರ್ಲಕ್ಷ್ಯ ಹಾಗೂ ನಿರಾಧಾರ ಧೋರಣೆ ಮಾಡುತ್ತಾ ಬಂದಿರುವುದರಿಂದ ಎಲ್ಲ ಕ್ಷೇತ್ರಗಳಲ್ಲಿ ಉತ್ತರ ಕನರ್ಾಟಕ ಹಿಂದುಳಿದಿದ್ದು ಅಭಿವೃದ್ಧಿಯ ಮನೋಭಾವದಿಂದ ಪ್ರತ್ಯೇಕತೆಯನ್ನು ನಾವು ಬೆಂಬಲಿಸುತ್ತಿದ್ದು ಇದಕ್ಕಾಗಿ ನಾವು ನಿರಂತರ ಹೋರಾಟಕ್ಕೆ ಮುಂದಾಗಿದ್ದೇವೆ ಎಂದು ಉತ್ತರ ಕನರ್ಾಟಕ ರೈತ ಸಂಘದ ಜಿಲ್ಲಾಧ್ಯಕ್ಷರಾದ ಹನಮಂತಪ್ಪ ದೀವಿಗಿಹಳ್ಳಿ ಹೇಳಿದರು. ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ಉ.ಕ ಹಾಗೂ ಹಾವೇರಿ ಜಿಲ್ಲೆಯ ರೈತರನ್ನು ಟಾಗರ್ೆಟ್ ಮಾಡಿಕೊಂಡು ಸಿಎಂ ಕುಮಾರಸ್ವಾಮಿಯವರು ರೈತರ ಬಗ್ಗೆ ನಿರ್ಲಕ್ಷ್ಯತನದ ಮಾತು ಕೂಡಾ ಉತ್ತರ ಕನರ್ಾಟಕ ಪ್ರತ್ಯೇಕ ರಾಜ್ಯ ಮಾಡಲು ಪ್ರೇರೆಪಿಸುವ ಪ್ರಸಂಗ ಎಂದೇ ಹೇಳಬಹುದು ರೈತರು ಸತತವಾಗಿ ಬರಗಾಲದಿಂದ ಆಥರ್ಿಕ ಸಂಕಷ್ಟ ಎದುರಿಸುತ್ತಾ ಆತ್ಮಹತ್ಯ ಮಾಡಿಕೊಳ್ಳುತ್ತಿದ್ದು ರೈತರ ನೆರವಿಗೆ ಸಿಎಂ ಆದಾಗಿನಿಂದಲೂ ಸಭೆ ಕರೆದು ಪರಿಹಾರ ಕ್ರಮದ ಬಗ್ಗೆ ಮಾತನಾಡಲು ಅಸಹಾಯಕತೆ ತೊರಿದ್ದಾರೆ .ಉ.ಕ ಸಮಗ್ರ ಅಭಿವೃದ್ಧಿಗಾಗಿ ಪ್ರತ್ಯೇಕ ರಾಜ್ಯದ ಬೆಂಬಲವಾಗಿ ನಾಳೆ(ಅ 02) ಉ.ಕ ಬಂದ್ ಮಾಡಲಾಗುವುದು ಎಂದು ತಿಳಿಸಿದರು. ಪ್ರತ್ಯೇಕ ಉತ್ತರ ಕನರ್ಾಟಕ ಸಮಿತಿಯ ಜಿಲ್ಲಾಧ್ಯಕ್ಷರು ವಕೀಲರುಗಳಾದ ವ್ಹಿ ಎಫ್ ಕಟ್ಟೇಗೌಡ್ರ ಮಾತನಾಡಿ ನಿರಂತರವಾಗಿ ರಾಜ್ಯ ಸಕರ್ಾರಗಳು ಉ.ಕ ಕ್ಕೆ ಅನ್ಯಾಯ ಮಾಡುತ್ತಾ ಬರುತ್ತಿದ್ದು, ಇಲ್ಲಿನ ಜನರ ಬೇಡಿಕೆಗಳನ್ನು ಇಡೇರಿಸಲು ಯಾವುದೇ ಪಕ್ಷದವರು ಮುಂದಾಗಿಲ್ಲ. ಸಿಎಂ ಕುಮಾರಸ್ವಾಮಿಯವರು ಗೊಂದಲಮಯ ಹೇಳಿಕೆಗಳು ಹಾಗೂ ಬಜೆಟ್ನಲ್ಲಿ ಉ.ಕ ಕ್ಕೆ ನೀಡಿದ ಅನುದಾನಗಳ ಬಗ್ಗೆ ನೋಡಿದಾಗ ಪ್ರತ್ಯೇಕ ರಾಜ್ಯ ಮಾಡಬಾರದು ಏಕೆ ಎಂದು ಜನರ ಮನಸಲ್ಲಿ ಮೂಡಿದೆ. ಇದಕ್ಕಾಗಿ ಉ.ಕ ಜನರು ಒಗ್ಗಟ್ಟಿನಿಂದ ಚಚರ್ೆಗಳ ಮೂಲಕ ಪ್ರತ್ಯೇಕ ರಾಜ್ಯ ಮಾಡಬೇಕು ಎಂಬ ಒತ್ತಡ ಹೆಚ್ಚಾಗಿ ಸಾಂಕೇತಿಕವಾಗಿ ಅಗಸ್ಟ್ 02 ರಂದು ಜಿಲ್ಲೆಯಲ್ಲಿ ಮೆರವಣೆಗೆಯ ಮೂಲಕ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಸಿದ್ದಪ್ಪ ಸರ್ಕಲ್ ನಲ್ಲಿ ಜಿಲ್ಲಾಧಿಕಾರಿಗಳ ಮೂಲಕ ಸಕರ್ಾರಕ್ಕೆ ಮನವಿ ಸಲ್ಲಿಸಲಾಗುವುದು.
ಈ ಬಂದ್ ಕರೆಗೆ ಜಿಲ್ಲೆಯ ಬಹುತೇಕ ಸಂಘಟನೆಗಳು ಬೆಂಬಲ ಕೋರಿವೆ. ಶಾಂತಿಯುತವಾಗಿ ಹೋರಾಟ ಮಾಡುತ್ತೇವೆ. ಇದು ನಿರಂತರವಾಗಿ ಈ ಹೋರಾಟ ಮುಂದುವರಿಯುತ್ತದೆ. ಪ್ರತ್ಯೇಕ ರಾಜ್ಯ ಆಗುವವರಿಗೂ ಉಗ್ರ ರೂಪಕ್ಕೆ ಬಂದರೂ ಉ.ಕ ಜನರು ಹೋರಾಟವನ್ನು ಮುಂದುವರಿಸಲಿದ್ದಾರೆ ಎಂದು ವಕೀಲರಾದ ಕಟ್ಟೇಗೌಡ್ರ ಪತ್ರಿಕೆಗೆ ತಿಳಿಸಿದರು.
ಈ ಸಂದರ್ಭದಲ್ಲಿ ಉ.ಕ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದಶರ್ಿ ರಾಹಜಶೇಖರ.ದುದಿಹಳ್ಳಿ.ಹಾವೇರಿ ತಾಲೂಕ ಅಧ್ಯಕ್ಷ ಫಕ್ಕಿರಗೌಡ ಗಾಜೀಗೌಡ್ರ.ಸವಣೂರ ತಾಲೂಕ ಅಧ್ಯಕ್ಷ ಫಕ್ಕಿರೇಶ ಕಾಳಿ.ಶಿ.ತಾ ಅಧ್ಯಕ್ಷ ರಾಮನಗೌಡ ತರ್ಲಗಟ್ಟ.ಹಾ.ತಾ ಅಧ್ಯಕ್ಷ ಫಕ್ಕಿರೇಶ ಮಲಗುಂದ.ರ. ತಾ ಅಧ್ಯಕ್ಷ ಫಕ್ಕಿರಪ್ಪ ಗೊಣಗೇರ.ರೈತ ಮುಖಂಡರಾದ ರೇಣುಕಾಸ್ವಾಮಿ ಹಿರೇಮಠ.ಬಸಪ್ಪ ಮೂಲಿಮನಿ ಅನೇಕರು ಪಾಲ್ಗೊಂಡಿದ್ದರು.