ಮಲ್ಲಾಪುರ ದಾಸೋಹಮಠದ ಹಿರಿಯ ಮೂಕಪ್ಪಶ್ರೀಗಳು ಲಿಂಗೈಕ್ಯ

ಲೋಕದರ್ಶನವರದಿ

ಬ್ಯಾಡಗಿ19: ತಾಲೂಕಿನ ಪ್ರಸಿದ್ದ ಧಾಮರ್ಿಕ ಕ್ಷೇತ್ರ ಗುಡ್ಡದ ಮಲ್ಲಾಪುರ ದಾಸೋಹಮಠದ ಹಿರಿಯ ಷ.ಬ್ರ.ಮೂಕಪ್ಪಸ್ವಾಮಿಗಳು ಗುರುವಾರ ಬೆಳಗ್ಗೆ ಲಿಂಗೈಕ್ಯರಾಗಿದ್ದು, ಮಾ.20 ರಂದು ಮಧ್ಯಾಹ್ನ 12 ಗಂಟೆಗೆ ಸಂಸ್ಕಾರ ಕಾರ್ಯಕ್ರಮ ಜರುಗಲಿದೆ. 

  ಕಳೆದ ನಾಲ್ಕು ವರ್ಷಗಳ ಹಿಂದೆ ಸೊರಬ ತಾಲೂಕು ಬೆಟ್ಟದಕೂಲರ್ಿಗ್ರಾಮದಲ್ಲಿ ಪುನರ್ಜನ್ಮ ತಾಳಿದ ಶ್ರೀಗಳು 2017 ರಲ್ಲಿ ಶ್ರೀಮಠಕ್ಕೆ  ಉತ್ತರಾಧಿಕಾರಿಗಳಾಗಿ ಪಟ್ಟಾಧಿಕಾರ ಹೊಂದಿದ್ದರು. ಶ್ರೀಶೈಲದ 1008 ಜಗದ್ಗುರು ಚನ್ನಸಿದ್ದರಾಮ ಪಂಡಿತಾರಾದ್ಯರು ಭಗವತ್ಪಾದರು ಸೇರಿದಂತೆ ಹಲವು ಹರಚರ ಮೂತರ್ಿಗಳ ಸಾನಿಧ್ಯದಲ್ಲಿಧಾಮರ್ಿಕ ಕಾರ್ಯಕ್ರಮ ಜರುಗಿದ್ದವು.

4 ವರ್ಷಗಳಲ್ಲಿ ಶ್ರೀಶೈಲ, ಕೇರಳ ಸೇರಿದಂತೆ ನಾಡಿನಎಲ್ಲ ಜಿಲ್ಲೆಗಳ ಭಕ್ತರ ಮನೆಗಳಿಗೆ ತೆರಳಿ ಆಶೀವರ್ಾದ ನೀಡಿದ್ದರು. ಶ್ರೀಗಳ ಅವಧಿಯಲ್ಲಿ ಹಲವಾರುಧಾಮರ್ಿಕಜಾಗೃತಿಕಾರ್ಯಕ್ರಮ ನಡೆದಿವೆ. ಕ್ಷೇತ್ರದಲ್ಲಿ ದೊಡ್ಡಮಟ್ಟದಅನ್ನದಾಸೋಹಕಟ್ಟಡಕಟ್ಟಲು ಶ್ರೀಗಳ ಭೂಮಿಪೂಜೆ ನಡೆಸುವ ಮೂಲಕ ಮಹಾದಾಸೋಹಕ್ಕೆ ಚಾಲನೆ ನೀಡಿದ್ದು, ಪೂರ್ವ ಪ್ರಾಥಮಿಕ ಶಾಲೆಗೆ ಆರಂಭಿಸಿದ್ದರು.

ಸಕಲ ಸಿದ್ದತೆ:ಲಿಂಗೈಕ್ಯ  ಹಿರಿಯ ಮೂಕಪ್ಪಶ್ರೀಗಳ ಸಂಸ್ಕಾರವನ್ನು ಮಾ.20 ರಂದು ಮದ್ಯಾಹ್ನ 12 ಗಂಟೆಗೆ ನಾಡಿನ ಹರಗುರು ಚರಮೂತರ್ಿಗಳು ಹಾಗೂ ಸಾವಿರಾರು ಭಕ್ತರ ಸಮ್ಮುಖದಲ್ಲಿ ಸಾಂಪ್ರದಾಯಿಕ ಪದ್ಧತಿಯಲ್ಲಿ ಜರುಗಲಿವೆ. ಶ್ರೀಗಳ ಸಂಸ್ಕಾರವನ್ನು ಮಠದಆವರಣದಲ್ಲಿ ಮಾಡಲು ಮಠದ  ಧಮರ್ಾಧಿಕಾರಿಗಳು ನಿರ್ಧರಿಸಿದ್ದಾರೆ.  ನಾಡಿನ ಮೂಲೆಮೂಲೆಗಳಿಂದಲೂ ಭಕ್ತರು ಶ್ರೀಗಳ ಅಂತಿಮದರ್ಶನಕ್ಕೆಆಗಮಿಸುತ್ತಿದ್ದು, ಶ್ರೀಮಠದಲ್ಲಿ ಆಗಮಿಸಿದ ಭಕ್ತರಿಗೆಎಲ್ಲ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿದೆ.ಮುಂಜಾಗೃತವಾಗಿ ಪೋಲಿಸ್ ಇಲಾಖೆ ಎಲ್ಲ ವ್ಯವಸ್ಥೆಗಳನ್ನು ಕಲ್ಪಿಸಲು ಮುಂದಾಗಿದೆ.

ಮುಂಜಾಗ್ರತೆ ಅಗತ್ಯ: ಹಿರಿಯಶ್ರೀಗಳ ಲಿಂಗೈಕ್ಯದಿಂದ ಶ್ರೀಮಠದ ಭಕ್ತವೃಂದ ಅತೀವ ದು:ಖದ ಮುಡುವಿನಲ್ಲಿದೆ. ನಾಡನಾದ್ಯಂತ ಕರೋನ ವೈರಸ್ ಹರಡುವುದನ್ನು ತಪ್ಪಿಸಲು ಶ್ರೀಮಠ ಮುಂಜಾಗೃತೆ ವಹಿಸಿದೆ. ಭಕ್ತರುಆದಷ್ಟು ಆರೋಗ್ಯದ ಕಾಳಜಿಯೊಂದಿಗೆ ಆಗಮಿಸಿ ಶ್ರೀಗಳ ಅಂತಿಮ ದರ್ಶನಕ್ಕೆ ಮುಂದಾಗಬೇಕು.ಯಾವುದೆ ಕಾರಣಕ್ಕೂ ಭಕ್ತರುಗೊಂದಲ ಉಂಟುಮಾಡಿಕೊಳ್ಳದೆ, ಧಾಮರ್ಿಕ ಪದ್ದತಿಗಳನ್ನ ಪಾಲಿಸಬೇಕಿದೆ.